ಕರ್ನಾಟಕ

karnataka

ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಹಾಸನ ಜಿಲ್ಲೆ ಮುಖಂಡರ ಸಭೆ ರದ್ದು

By

Published : Feb 25, 2023, 10:58 PM IST

ಹಾಸನ ಕ್ಷೇತ್ರದ ಟಿಕೆಟ್ ಸಂಬಂಧ ಚರ್ಚಿಸಲು ಭಾನುವಾರ ಕರೆದಿದ್ದ ಹಾಸನ ಜಿಲ್ಲೆಯ ಮುಖಂಡರ ಸಭೆ ರದ್ದು - ಅನಿವಾರ್ಯ ಕಾರ್ಯಗಳಿಂದ ಸಭೆ ಮುಂದೂಡಲಾಗಿದೆ.

the-meeting-of-hassan-district-leaders-called-for-tomorrow-at-the-jds-office-has-been-cancelled
ಜೆಡಿಎಸ್ ಕಚೇರಿಯಲ್ಲಿ ನಾಳೆ ಕರೆದಿದ್ದ ಹಾಸನ ಜಿಲ್ಲೆ ಮುಖಂಡರ ಸಭೆ ರದ್ದು

ಬೆಂಗಳೂರು: ಗೊಂದಲವಾಗಿರುವ ಹಾಸನ ಕ್ಷೇತ್ರದ ಟಿಕೆಟ್ ಸಂಬಂಧ ಚರ್ಚಿಸಲು ನಾಳೆ ಕರೆದಿದ್ದ ಹಾಸನ ಜಿಲ್ಲೆಯ ಮುಖಂಡರ ಸಭೆಯನ್ನು ರದ್ದುಗೊಳಿಸಲಾಗಿದೆ.
ಜೆಡಿಎಸ್​ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಾಳೆ ಹಾಸನ ಜಿಲ್ಲೆಗೆ ಸಂಬಂಧಪಟ್ಟಂತೆ ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಹಾಸನ ನಗರ ಸಭೆ ಸದಸ್ಯರ ಹಾಗೂ ಇತರೆ ಪಕ್ಷದ ಮುಖಂಡರುಗಳು ಒಳಗೊಂಡಂತೆ ಸಭೆ ಕರೆಯಲಾಗಿತ್ತು. ಅನಿವಾರ್ಯ ಕಾರಣಗಳಿಂದ ಸಭೆಯನ್ನು ಮುಂದೂಡಲಾಗಿದೆ.

ಹಾಸನ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ ಚರ್ಚಿಸಲು ನಡೆಯಬೇಕಿದ್ದ ಸಭೆ.. ಮಾಜಿ ಮುಖ್ಯಮಂತ್ರಿ ಹೆಚ್.ಡಿ‌ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ಹಾಸನ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಮುಖಂಡರ ಸಭೆ ಕರೆಯಲಾಗಿತ್ತು. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಅವರನ್ನು ಘೋಷಣೆ ಮಾಡುವಂತೆ ಅವರ ಬೆಂಬಲಿಗರು ಒತ್ತಾಯಿಸಲು ಹಾಸನದಿಂದ ಸುಮಾರು 500 ಮಂದಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬರುವ ಸಾದ್ಯತೆ ಇತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ :ವಿವಾದದ ನಡುವೆ ಬಮೂಲ್ ಉತ್ಸವಕ್ಕೆ ಸಿದ್ಧತೆ.. ಬಿಜೆಪಿ ಮುಖಂಡರಿಂದ ಪ್ರತಿಭಟನೆ ಎಚ್ಚರಿಕೆ

ಹಾಸನ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಭವಾನಿ ರೇವಣ್ಣ ಉತ್ಸುಕು: ಹಾಸನದಲ್ಲಿ ಸ್ಪರ್ದೆ ಮಾಡಲು ಮಾಜಿ ಸಚಿವ ಹೆಚ್​.ಡಿ ರೆವಣ್ಣ ಅವರ ಪತ್ನಿ ಭವಾನಿ ರೇವಣ್ಣ ಉತ್ಸುಕರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸ್ವರೂಪ್​ ಅವರಿಗೆ ಟಿಕೆಟ್​ ಕೊಡಿಸಲು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಉತ್ಸುಕರಾಗಿದ್ದಾರೆ. ಇದರ ಪರಿಣಾಮವಾಗಿ ಹಾಸನ ಕ್ಷೇತ್ರದ ಟಿಕೆಟ್​ ವಿಷಯ ಕಚ್ಚಾಟಕ್ಕೆ ತಿರುಗಿದ್ದು, ಇಡೀ ರಾಜ್ಯದ ಗಮನ ಸೆಳದಿದೆ. ಈ ಹಿನ್ನೆಲೆಯಲ್ಲಿ ವಿವಾದದ ಇತ್ಯರ್ಥಕ್ಕೆ ಭಾನುವಾರ ಪಕ್ಷದ ಕಚೇರಿಯಲ್ಲಿ ದಳಪತಿಗಳು ನಿರ್ಣಾಯಕ ಸಭೆಯನ್ನು ಏರ್ಪಡಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸಭೆಯನ್ನು ಮುಂದೂಡಲಾಗಿದೆ.

ಜೆಡಿಎಸ್ ಕಚೇರಿಯಲ್ಲಿ ನಾಳೆ ಕರೆದಿದ್ದ ಹಾಸನ ಜಿಲ್ಲೆ ಮುಖಂಡರ ಸಭೆ ರದ್ದು

ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಮೋದಿ ಶಾ ಗೆ ಟಕ್ಕರ್​ ಕೊಡಲು ಜೆಡಿಎಸ್ ಸಜ್ಜು​ .. ಪಂಚರತ್ನ ಯಾತ್ರೆ ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, ಅದಕ್ಕೆ ಪೂರಕವಾಗಿ ಚನ್ನಪಟ್ಟಣದಲ್ಲಿ ಸಮಾವೇಶ ನಡಸಲು ಜೆಡಿಎಸ್​ ನಿರ್ಧರಿಸಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ ಬಲವನ್ನು ಹೆಣಿಯದಿದ್ದರೆ ಬಿಜೆಪಿಗೆ ಯಶಸ್ಸು ಸಿಗುವುದು ಕಷ್ಟ ಎಂಬುದು ಕಮಲ ಪಾಳೆಯಕ್ಕೆ ಅರಿವಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಳೆ ಮೈಸೂರಿನ ಮೇಲೆ ಗಮನ ಕೇಂದ್ರಿಕರಿಸಿದ್ದು, ಇದಕ್ಕೆ ಟಕ್ಕರ್​​ ಕೊಡುವುದು ಜೆಡಿಎಸ್​ ನಾಯಕರ ಲೆಕ್ಕಚಾರ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :ಕನ್ನಡ ಭಾಷೆ ಸುಂದರ, ಸಾಹಿತ್ಯ ಸಮೃದ್ಧ: ಬಾರಿಸು ಕನ್ನಡ ಡಿಂಡಿಮವದಲ್ಲಿ ಮೋದಿ ಭಾಷಣ

ABOUT THE AUTHOR

...view details