ETV Bharat / technology

ನೀವು ಡೌನ್‌ಲೋಡ್ ಮಾಡುವ ಎಲ್ಲಾ ಅಪ್ಲಿಕೇಶನ್‌ಗಳು ಸುರಕ್ಷಿತವೇ?: ಅವುಗಳ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು! - Mobile App Safety Check

author img

By ETV Bharat Karnataka Team

Published : May 23, 2024, 8:23 PM IST

Mobile App Safety Check: ಸ್ಮಾರ್ಟ್‌ಫೋನ್ ಬಳಕೆದಾರರು ಖಂಡಿತವಾಗಿಯೂ ಸುರಕ್ಷತೆಗೆ ಆದ್ಯತೆ ನೀಡಬೇಕು. ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು, ಅವುಗಳ ಸುರಕ್ಷಿತೆ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವೆ. ಅವುಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.

Mobile App Safety Check
ಸಂಗ್ರಹ ಚಿತ್ರ (ETV Bharat)

Android App Safety Check: ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಅಗತ್ಯಗಳಿಗಾಗಿ ವಿವಿಧ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಸಹಜ. ಆದರೆ, ಈ ರೀತಿಯ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಸೈಬರ್ ವಂಚನೆಯ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಶನ್ ಸುರಕ್ಷಿತವಾಗಿದೆಯೇ? ಅಥವಾ ಅಲ್ಲವೇ ಎಂಬುದನ್ನು ಕಂಡು ಹಿಡಿಯುವುದು ಹೇಗೆ ಎಂದು ನೋಡೋಣ.

ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ ದೂರವಿಡಿ: Google Play ಮತ್ತು Apple App Store ನಂತಹ ಅಧಿಕೃತ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕು. ಏಕೆಂದರೆ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಅವುಗಳನ್ನು ಪ್ಲೇಸ್ಟೋರ್‌ನಲ್ಲಿ ಸೇಖರಿಸಿ ಇಟ್ಟಿರುತ್ತಾರೆ. ಯಾವುದೇ ಅಪ್ಲಿಕೇಶನ್ ಬಳಕೆದಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಭಾವಿಸಿದರೆ, ಅಂತಹ ಅಪ್ಲಿಕೇಶನ್‌ಗಳನ್ನು ತಕ್ಷಣವೇ ತೆಗೆದುಹಾಕಲಾಗುತ್ತದೆ. ಆದರೆ, ಥರ್ಡ್ ಪಾರ್ಟಿ ಆ್ಯಪ್ ಸ್ಟೋರ್‌ಗಳು ಹಾಗಿರುವುದಿಲ್ಲ. ಹಾಗಾಗಿ ಅಧಿಕೃತ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಉತ್ತಮ. ಮೂರನೇ ವ್ಯಕ್ತಿಗಳಿಂದ ತೆಗೆದುಕೊಳ್ಳುವುದು ಸೂಕ್ತವಲ್ಲ. ನೀವು ಇತರ ಸ್ಟೋರ್‌ಗಳಿಂದ ಆಯ್ಕೆ ಮಾಡಬೇಕಾದರೆ, ನೀವು Amazon ಆ್ಯಪ್ ಸ್ಟೋರ್ ಮತ್ತು Samsung Galaxy Store ಅನ್ನು ಬಳಸಬಹುದು.

ಗೌಪ್ಯತೆ ನೀತಿಯನ್ನು ಓದಿ: ಅನೇಕ ಬಳಕೆದಾರರು ಗೌಪ್ಯತೆ ನೀತಿಯನ್ನು ಓದದೆಯೇ ಅಪ್ಲಿಕೇಶನ್‌ಗೆ ಎಲ್ಲ ಅನುಮತಿಗಳನ್ನು ನೀಡುತ್ತಾರೆ. ಆದರೆ, ಇದು ಸರಿಯಾದ ವಿಧಾನವಲ್ಲ. ಗೌಪ್ಯತೆ ನೀತಿ ದಾಖಲೆಯು ಗೊಂದಲಮಯವಾಗಿದ್ದರೆ ಮತ್ತು ಅಪೂರ್ಣವಾಗಿದ್ದರೆ, ಅದನ್ನು ನಕಲಿ ಅಪ್ಲಿಕೇಶನ್ ಎಂದು ಗುರುತಿಸಬೇಕು. ಡೇಟಾ ಸಂಗ್ರಹಣೆ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಗೌಪ್ಯತೆ ನೀತಿ ಒಳಗೊಂಡಿದೆಯೇ? ಅಥವಾ ಇಲ್ಲ ಪರಿಶೀಲಿಸುವುದು ಸೂಕ್ತ.

ಡೇಟಾ ಸೋರಿಕೆ ಸಾಧ್ಯತೆ: ಅಪ್ಲಿಕೇಶನ್ ತಯಾರಕರು ಜಾಹೀರಾತುಗಳ ಮೂಲಕ ಆದಾಯವನ್ನು ಗಳಿಸುತ್ತಾರೆ. ಅಪ್ಲಿಕೇಶನ್ ಅನ್ನು ಉಚಿತವಾಗಿ ಬಳಕೆದಾರರಿಗೆ ಒದಗಿಸುವಾಗ ಅದನ್ನು ನಿರ್ವಹಿಸಲು ಇದು ಅವಶ್ಯಕವಾಗಿದೆ. ಅಪ್ಲಿಕೇಶನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸಲು, ಬಳಕೆದಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಕೆಲವು ಮಾಹಿತಿಯನ್ನು ಸಂಗ್ರಹಿಸುವುದು ಅವಶ್ಯಕ. ಆದಾಗ್ಯೂ, ಈ ಜಾಹೀರಾತುಗಳು ಬಳಕೆದಾರರ ಮಾಹಿತಿಯನ್ನು ಕದಿಯಬಹುದು ಮತ್ತು ಅದನ್ನು ಮೂರನೇ ವ್ಯಕ್ತಿಯ ಜಾಹೀರಾತುದಾರರಿಗೆ ಮಾರಾಟಲೂ ಮಾಡಬಹುದು. ಆದ್ದರಿಂದ ಅನುಮತಿಗಳನ್ನು ನೀಡುವಾಗ ಬಹಳ ಜಾಗರೂಕರಾಗಿರಿ. ಇಲ್ಲದಿದ್ದರೆ, ನಿಮ್ಮ ಫೋನ್ ಹ್ಯಾಕ್ ಮಾಡುವ ಮತ್ತು ಸೂಕ್ಷ್ಮ ವಿವರಗಳನ್ನು ಸಂಗ್ರಹಿಸುವ ಅಪಾಯವಿರುತ್ತದೆ. ಅದಕ್ಕಾಗಿಯೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು, ನೀವು ಅವುಗಳ ಡೇಟಾ ಸಂಗ್ರಹಣೆ ನೀತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಹಣಗಳಿಕೆಯ ಪ್ರಕ್ರಿಯೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲದಿದ್ದರೆ, ಖಂಡಿತವಾಗಿಯೂ ಅದನ್ನು ನಿರ್ಲಕ್ಷ್ಯ ಮಾಡಿ.

ರೇಟಿಂಗ್ ಮತ್ತು ಡೌನ್‌ಲೋಡ್‌ ಗಮನಿಸಿ: ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು, ಖಂಡಿತವಾಗಿಯೂ ಅವುಗಳ ವಿಮರ್ಶೆ ಮತ್ತು ಡೌನ್‌ಲೋಡ್‌ಗಳನ್ನು ಪರಿಶೀಲಿಸಿ. ಕಡಿಮೆ ರೇಟಿಂಗ್ ಇರುವವರನ್ನು ಆಯ್ಕೆ ಮಾಡದಿರುವುದು ಉತ್ತಮ. ಕೆಲವೊಮ್ಮೆ ಪ್ರಸಿದ್ಧ ಅಪ್ಲಿಕೇಶನ್‌ಗಳು ಕಡಿಮೆ ರೇಟಿಂಗ್ ಅನ್ನು ಹೊಂದಿರುತ್ತದೆ. ಹಾಗಾದರೆ ಅವು ಅಧಿಕೃತ ಅಪ್ಲಿಕೇಶನ್‌ಗಳೇ? ಅಲ್ಲವೇ ಎಂಬುದನ್ನು ದೃಢೀಕರಿಸಬೇಕು. ಕೆಲವೊಮ್ಮೆ ನೈಜ ಅಪ್ಲಿಕೇಶನ್‌ಗಳಂತೆ ಕಾಣುವಂತೆ ನಕಲಿ ಅಪ್ಲಿಕೇಶನ್‌ಗಳನ್ನು ರಚಿಸಲಾಗುತ್ತದೆ. ಇಂತಹ ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಅಲ್ಲದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗಲೂ ಜಾಗರೂಕರಾಗಿರಬೇಕು.

ಇದನ್ನೂ ಓದಿ: ಆದಾಯಕ್ಕಿಂತ ಖರ್ಚೇ ಹೆಚ್ಚು: ಹೈದರಾಬಾದ್​ ನಗರವಾಸಿಗಳ ಜೀವನಶೈಲಿ ಬಗ್ಗೆ ಸಮೀಕ್ಷೆ ಹೇಳೋದೇನು? - Hyderabad city life style

ETV Bharat Logo

Copyright © 2024 Ushodaya Enterprises Pvt. Ltd., All Rights Reserved.