ETV Bharat / health

ಭಾರತದಲ್ಲಿ ಪ್ರತಿ ವರ್ಷ 7 ಲಕ್ಷ ಮಹಿಳೆಯರಲ್ಲಿ ಕ್ಯಾನ್ಸರ್: ತಜ್ಞ ವೈದ್ಯ ರಾಧೇಶ್ಯಾಮ್ ನಾಯಕ್ - Cancer cases in India

author img

By ETV Bharat Karnataka Team

Published : May 23, 2024, 8:27 PM IST

ವಿಶ್ವಾದ್ಯಂತ ಮಹಿಳೆಯರು ಅಕಾಲಿಕವಾಗಿ ಮರಣ ಹೊಂದಲು ಇರುವ ಪ್ರಮುಖ ಮೂರು ಕಾರಣಗಳಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಪುರುಷರಿಗೆ ಹೋಲಿಸಿದರೆ ಈ ರೋಗ ಹೆಚ್ಚು ಮಹಿಳೆಯರನ್ನು ಬಲಿ ಪಡೆಯುತ್ತಿದೆ.

ಡಾ.ರಾಧೇಶ್ಯಾಮ್ ನಾಯಕ್, ಡಾ.ವಿನೋದ್ ಕೆ.ರಮಣಿ
ಡಾ.ರಾಧೇಶ್ಯಾಮ್ ನಾಯಕ್, ಡಾ.ವಿನೋದ್ ಕೆ.ರಮಣಿ (ETV Bharat)

ಬೆಂಗಳೂರು: ಭಾರತದಲ್ಲಿ ಪ್ರತಿ ವರ್ಷ 7 ಲಕ್ಷ ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ. ಈ ಪೈಕಿ ಶೇ.28.8 ರಷ್ಟು ಸ್ತನ ಕ್ಯಾನ್ಸರ್, ಶೇ.10.6 ರಷ್ಟು ಗರ್ಭಕಂಠ, ಶೇ.6.2 ರಷ್ಟು ಅಂಡಾಶಯ, ಶೇ.3.7 ರಷ್ಟು ಗರ್ಭಾಶಯ ಮತ್ತು ಶೇ.3.7 ರಷ್ಟು ಶ್ವಾಸಕೋಶ ಕ್ಯಾನ್ಸರ್ ರೋಗಗಳು ಸೇರಿವೆ ಎಂದು ಡಾ.ರಾಧೇಶ್ಯಾಮ್ ನಾಯಕ್ ಮಾಹಿತಿ ನೀಡಿದರು.

ಇಂಟರ್ನ್ಯಾಷನಲ್ ಡೇ ಆಫ್ ಆಕ್ಷನ್ ಫಾರ್ ವುಮೆನ್ಸ್ ಹೆಲ್ತ್ ಪ್ರಯುಕ್ತ ಸಾರಕ್ಕಿ ರಸ್ತೆಯ ಸಂಪ್ರದ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿಸ್ಟ್ ಮತ್ತು ಹೆಮಟೋಲಾಜಿಸ್ಟ್ ಅಂಡ್ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಫಿಸಿಶಿಯನ್ ಡಾ.ರಾಧೇಶ್ಯಾಮ್ ನಾಯಕ್ ಮಾತನಾಡಿದರು. ವಿಶ್ವದಾದ್ಯಂತ ಮಹಿಳೆಯರು ಅಕಾಲಿಕವಾಗಿ ಮರಣ ಹೊಂದಲು ಇರುವ ಪ್ರಮುಖ ಮೂರು ಕಾರಣಗಳಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಪುರುಷರಿಗೆ ಹೋಲಿಸಿದರೆ ಈ ಮಾರಕ ರೋಗವನ್ನು ತಡೆಗಟ್ಟುವ ಕ್ರಮ ಕೈಗೊಳ್ಳುವುದು ಮಹಿಳೆಯರಲ್ಲಿ ಕಡಿಮೆ ಇದೆ. ಪ್ರತಿವರ್ಷ ಭಾರತದಲ್ಲಿ 1.23 ಲಕ್ಷ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಮತ್ತು 1.44 ಲಕ್ಷ ಜನರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಜಾಗತಿಕವಾಗಿ ಗರ್ಭಕಂಠ ಕ್ಯಾನ್ಸರ್ ಮರಣದ ಮೂರನೇ ಒಂದರಷ್ಟಾಗಿದೆ. ಇತ್ತೀಚಿಗೆ ಗರ್ಭಕಂಠ ಕ್ಯಾನ್ಸರ್​ಗಿಂತ ಸ್ತನ್ ಕ್ಯಾನ್ಸರ್​ಗೆ ಬಲಿಯಾದರ ಸಂಖ್ಯೆ ಹೆಚ್ಚಾಗಿದೆ ಎಂದರು.

ಕ್ಯಾನ್ಸರ್ ರೋಗ ನಿರ್ಣಯ ಸ್ಕ್ರೀನಿಂಗ್ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದರ ಮೇಲೆ ನಿರ್ಧಾರವಾಗಿರುತ್ತದೆ. ದುರದೃಷ್ಟವಶಾತ್, ಶೇ.57 ರಷ್ಟು ಸ್ತನ ಕ್ಯಾನ್ಸರ್, ಶೇ.40.6 ರಷ್ಟು ಅಂಡಾಶಯ ಕ್ಯಾನ್ಸರ್ ಮತ್ತು ಶೇ.60 ರಷ್ಟು ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳನ್ನು ದುಗ್ದರಸ ಗ್ರಂಥಿಗಳು, ಅಂಗಾಂಶಗಳು ಅಥವಾ ಇತರ ಅಂಗಗಳಿಗೆ ಹರಡಿಕೊಂಡಿರುವ ಹಂತದಲ್ಲಿಯೇ ರೋಗ ನಿರ್ಣಯ ಮಾಡಲಾಗುತ್ತಿದೆ ಎಂದು ವಿವರಿಸಿದರು.

ವೈದ್ಯರ ಸಲಹೆಗಳೇನು?: ಸಂಪ್ರದ ಆಸ್ಪತ್ರೆಯ ಪ್ರಿವೆಂಟಿವ್ ಆಂಕಾಲಾಜಿಸ್ಟ್ ಡಾ.ವಿನೋದ್ ಕೆ.ರಮಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರು ಪ್ರತಿ ವರ್ಷ ಆರು ಕ್ಯಾನ್ಸರ್ ವಿಧಗಳಾದ ಸ್ತನ, ಗರ್ಭಕಂಠ, ಓರಲ್ ಕ್ಯಾವಿಟಿ, ಹೊಟ್ಟೆ, ಶ್ವಾಸಕೋಶ ಮತ್ತು ಇತರ ಅಂಗಗಳ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. 9 ರಿಂದ 15 ವರ್ಷ ವಯೋಮಾನದ ಹೆಣ್ಣು ಮಕ್ಕಳು ಹೆಚ್.ಪಿ.ವಿ ಲಸಿಕೆ ಹಾಕಿಸಿಕೊಳ್ಳುವುದು ಮತ್ತು ವಯಸ್ಕ ಮಹಿಳೆಯರು ಹೆಪಟೈಟಿಸ್ ಬಿ ವೈರಸ್ ಲಸಿಕೆಯನ್ನು ಹಾಕಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಅಲ್ಲದೇ, ಆರಂಭಿಕ ರೋಗ ನಿರ್ಣಯವನ್ನು ಮಾಡುವ ಕ್ಯಾನ್ಸರ್ ಬಯೋಮಾರ್ಕರ್​​ಗಳಿಗಾಗಿ ಮಹಿಳೆಯರನ್ನು ಪರೀಕ್ಷೆಗೆ ಒಳಪಡಿಸಬೇಕು. ಅದೇ ರೀತಿ, ಹೆಲಿಕೋಬ್ಯಾಕ್ಟರ್ ಪೈಲೋರಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಯಂತಹ ಸೋಂಕುಗಳಿಗೆ ಮಹಿಳೆಯರು ಹೈಡ್ರೋಕ್ವಿನೋನ್ ಹೊಂದಿರುವ ಚರ್ಮಕ್ಕಾಗಿ ಕ್ರೀಂಗಳನ್ನು ಹಾಗೂ ಪ್ಯಾರಾಬೆನ್​​ಗಳನ್ನು ಹೊಂದಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸದಿರುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಟೀ ಪ್ರಿಯರೇ ಹುಷಾರ್​; ಹಾಲಿನೊಂದಿಗೆ ಚಹಾವನ್ನು ಹೆಚ್ಚು ಕುದಿಸುವುದು ಅಪಾಯಕಾರಿ! - OVER BOILING MILK TEA SIDE EFFECT

ಭಾರತದಲ್ಲಿ ಶೇ.60 ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಮೂರು ಅಥವಾ ನಾಲ್ಕನೇ ಹಂತದಲ್ಲಿದ್ದಾಗ ಪತ್ತೆ ಮಾಡಲಾಗುತ್ತಿದೆ. ಇದರ ಪರಿಣಾಮ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಸ್ತನ ಕ್ಯಾನ್ಸರ್​​ನಿಂದ ರೋಗಿಗಳು ಬದುಕುಳಿಯುವ ಪ್ರಮಾಣ ಕಡಿಮೆ ಇದೆ. ಜಾಗತಿಕವಾಗಿರುವ ಒಟ್ಟು ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ಭಾರತದ್ದಾಗಿವೆ. ವಿಶ್ವದ ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರತಿ 100 ಮಹಿಳೆಯರ ಪೈಕಿ ಒಬ್ಬರಿಗೆ ಈ ಗರ್ಭಕಂಠ ಕ್ಯಾನ್ಸರ್ ಕಂಡುಬಂದರೆ, ಭಾರತದಲ್ಲಿ ಪ್ರತಿ 53 ಮಹಿಳೆಯರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿನ 15 ರಿಂದ 41 ವರ್ಷ ವಯೋಮಾನದ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ಎರಡನೇ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ಮುಕ್ಕಾಲು ಭಾಗದಷ್ಟು ಪ್ರಕರಣಗಳನ್ನು ಅಂತಿಮ ಹಂತಕ್ಕೆ ತಲುಪಿದಾಗ ಪತ್ತೆ ಮಾಡಲಾಗುತ್ತಿದೆ. ಇದರ ಪರಿಣಾಮ ಬದುಕುಳಿಯುವ ಪ್ರಮಾಣ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶುಗರ್, ಬಿಪಿ ರೋಗಿಗಳೇ ಎಚ್ಚರ: ಈ ದಿನಗಳಲ್ಲಿ ಆಸ್ಪತ್ರೆಗೆ ಸೇರುವ ಅಪಾಯ ಹೆಚ್ಚಂತೆ! - Summer Effect On Patients

ETV Bharat Logo

Copyright © 2024 Ushodaya Enterprises Pvt. Ltd., All Rights Reserved.