ETV Bharat / health

ಟೀ ಪ್ರಿಯರೇ ಹುಷಾರ್​; ಹಾಲಿನೊಂದಿಗೆ ಚಹಾವನ್ನು ಹೆಚ್ಚು ಕುದಿಸುವುದು ಅಪಾಯಕಾರಿ! - OVER BOILING MILK TEA SIDE EFFECT

author img

By ETV Bharat Karnataka Team

Published : May 23, 2024, 4:17 PM IST

ಅನೇಕ ಮಂದಿ ಮನೆಯಲ್ಲಿ ಟೀ ಮಾಡುವಾಗ ಹಾಲಿಗೆ ಚಹಾ ಪುಡಿಯನ್ನು ತುಂಬಾ ಹೊತ್ತು ಕುದಿಸುತ್ತಾರೆ. ಇದರಿಂದ ರುಚಿ ಹೆಚ್ಚು ಎಂದು ಭಾವಿಸಿದ್ದರೆ, ಅದು ತಪ್ಪು.

Overboiling Milk Tea Side Effects
Overboiling Milk Tea Side Effects (Getty Images)

ಹೈದರಾಬಾದ್​: ಅನೇಕ ಜನರಿಗೆ ಟೀ ಕುಡಿಯದೇ ದಿನ ಶುರುವಾಗುವುದೇ ಇಲ್ಲ. ಅದು ಗ್ರೀನ್​ ಟೀ ಆಗಿರಲಿ ಅಥವಾ ನಿಂಬೆ ಟೀ ಆಗಿರಲಿ ಟೀ ಕುಡಿದೇ ತಮ್ಮ ದಿನಚರಿ ಪ್ರಾರಂಭಿಸುವ ಅಭ್ಯಾಸ. ಅನೇಕ ಮಂದಿ ಮನೆಯಲ್ಲಿ ಟೀ ಅನ್ನು ಮಾಡುವಾಗ ಮೊದಲಿಗೆ ನೀರು ಮತ್ತು ಟೀ ಪುಡಿ ಹಾಕಿ ಕುದಿಸಿದರೆ, ಕೆಲವು ಮಂದಿ ಹಾಲಿಗೆ ಟೀ ಎಲೆಯನ್ನು ಹಾಕಿ ತುಂಬಾ ಹೊತ್ತು ಕುದಿಸುತ್ತಾರೆ. ಇದರಿಂದ ರುಚಿ ಹೆಚ್ಚು ಎಂದು ಭಾವಿಸಿದ್ದರೆ, ಅದು ತಪ್ಪು. ಹಾಲನ್ನು ಹೆಚ್ಚು ಕಾಯಿಸುವುದು ಅಪಾಯಕಾರಿ ಎಂಬುದನ್ನು ಮರೆಯಬೇಡಿ. ಆರೋಗ್ಯ ತಜ್ಞರು ಹೇಳುವಂತೆ ಹಾಲಿನೊಂದಿಗೆ ಟೀ ಅನ್ನು ದೀರ್ಘಕಾಲ ಕುದಿಸುವುದು ಅಥವಾ ಪದೇ ಪದೇ ಬಿಸಿ ಮಾಡುವುದು ಒಳ್ಳೆಯದಲ್ಲ.

ಪದೇ ಪದೇ ಕಾಯಿಸುವುದರಿಂದ ಅಪಾಯ: ಟೀ ಸೇವನೆಯಿಂದ ಮೆದುಳು ಉತ್ತೇಜನಗೊಳ್ಳುತ್ತದೆ. ಇದು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ಮತ್ತು ರಕ್ತದ ಸಕ್ಕರೆ ಮಟ್ಟ ಕೂಡ ನಿಯಂತ್ರಣದಲ್ಲಿರುತ್ತದೆ. ಆದರೆ, ತಜ್ಞರ ಪ್ರಕಾರ, ದೀರ್ಘಕಾಲ ಟೀ ಅನ್ನು ಕುದಿಸುವುದು ಒಳ್ಳೆಯದಲ್ಲ. ಕಾರಣ ಟೀ ಟ್ಯಾನ್ನಿನ್ಸ್​ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ವೈನ್‌ಗಳಲ್ಲಿ ಕಂಡುಬರುವ ಪಾಲಿಫಿನಾಲಿಕ್ ಜೈವಿಕ ಅಣುಗಳನ್ನು ಸಹ ಒಳಗೊಂಡಿದೆ.

ನಮ್ಮ ದೇಹಕ್ಕೆ ಪ್ರೋಟೀನ್​, ಖನಿಜಗಳು, ಸೆಲ್ಯುಲೋಸ್, ಕಾರ್ಬೋಹೈಡ್ರೇಟ್​​ಗಳು ಅವಶ್ಯವಾಗಿವೆ. ಚಹಾವನ್ನು ಹೆಚ್ಚು ಹೊತ್ತು ಕುದಿಸಿ ಕುಡಿಯುವುದರಿಂದ ಇವು ನಾಶವಾಗುತ್ತವೆ. ಹಾಲಿನೊಂದಿಗೆ ತಯಾರಿಸಿದ ಚಹಾವನ್ನು 4-5 ನಿಮಿಷಗಳಿಗಿಂತ ಹೆಚ್ಚು ಕಾಲ ಬಿಸಿ ಮಾಡುವುದರಿಂದ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚು. ಮತ್ತೊಂದು ಪ್ರಮುಖ ಅಂಶವೆಂದರೆ ದೀರ್ಘಕಾಲ ಚಹಾ ಕುದಿಸುವುದರಿಂದ ಇದರಲ್ಲಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಟೀ ಕುದಿಸುವುದರಿಂದ ಆಗುವ ಅನಾನುಕೂಲ

ಪೋಷಕಾಂಶ ನಷ್ಟ: ಹೆಚ್ಚು ಸಮಯ ಟೀ ಬಿಸಿ ಮಾಡಿ, ಕುದಿಸುವುದರಿಂದ, ಹಾಲಿನಲ್ಲಿರುವ ಕ್ಯಾಲ್ಸಿಯಂ, ವಿಟಮಿನ್​ ಬಿ 12, ವಿಟಮಿನ್​ ಸಿ ಅಂಶವು ಹಾಳಾಗುತ್ತದೆ.

ರುಚಿ ಬದಲಾವಣೆ: ಟೀ ಹೆಚ್ಚು ಬಿಸಿ ಮಾಡುವುದರಿಂದ ಬಣ್ಣ ಮತ್ತು ರುಚಿ ಕಳೆದುಕೊಳ್ಳುತ್ತದೆ. ಜೊತೆಗೆ ಇದು ಸುಟ್ಟ ವಾಸನೆಯನ್ನು ಹೊರ ಸೂಸುತ್ತದೆ.

ಆಮ್ಲತೆ: ದೀರ್ಘಕಾಲ ಹಾಲಿನೊಂದಿಗೆ ಚಹಾ ಎಲೆ ಕುದಿಸುವುದರಿಂದ ಹಾಲಿನ ಪಿಹೆಚ್​ ಮಟ್ಟ ಬದಲಾಗುತ್ತದೆ. ಇದು ಹಾನಿಕಾಕರ ಆಮ್ಲ ಮತ್ತು ಆಸಿಡಿಟಿಯನ್ನು ಹೆಚ್ಚಿಸುತ್ತದೆ.

ಕಾರ್ಸಿನೋಜೆನ್ಸ್: ಅತಿಯಾಗಿ ಕುದಿಸುವುದರಿಂದ ಹಾಲಿನಲ್ಲಿ ಅಕ್ರಿಲಾಮೈಡ್‌ನಂತಹ ಸಂಯುಕ್ತಗಳು ಉತ್ಪತ್ತಿಯಾಗುತ್ತವೆ. ಇದು ಅಪಾಯಕಾರಿ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗಬಹುದು. ಹಾಲಿನೊಂದಿಗೆ ಟೀ ಮಾಡಲು ಮುಂದಾದರೆ, 4 ರಿಂದ 5 ನಿಮಿಷಗಳಿಗಿಂತ ಹೆಚ್ಚು ಕಾಲ ಕುದಿಸದಿರುವುದು ಸೂಕ್ತ. ಜೊತೆಗೆ ಟೀಯನ್ನು ಪದೇ ಪದೇ ಕುದಿಸಿ ಕುಡಿಯುವುದು ಕೂಡ ದೇಹಕ್ಕೆ ಹಾನಿಯಾಗುತ್ತದೆ.

ವಿಶೇಷ ಸೂಚನೆ: ಇಲ್ಲಿ ನೀಡಿರುವ ಮಾಹಿತಿಗಳು ಸಂಶೋಧನೆ, ಅಧ್ಯಯನಗಳನ್ನು ಆಧರಿಸಿ ನೀಡಲಾಗಿದೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಸಿಂಥೆಟಿಕ್​ ಸಾಫ್ಟ್​ ಡ್ರಿಂಕ್ಸ್​​ ನೀರು ಅಥವಾ ತಾಜಾ ಹಣ್ಣಿಗೆ ಪರ್ಯಾಯವಲ್ಲ: ICMR

ETV Bharat Logo

Copyright © 2024 Ushodaya Enterprises Pvt. Ltd., All Rights Reserved.