ETV Bharat / bharat

ಕೊಯಿಕ್ಕೋಡ್​ಗೆ ಹೊರಟಿದ್ದ ವಿಮಾನ ಮಂಗಳೂರಲ್ಲಿ ಲ್ಯಾಂಡ್: ಪ್ರಯಾಣಿಕರು ಸುಸ್ತು - Air India flight

author img

By ETV Bharat Karnataka Team

Published : May 23, 2024, 9:01 PM IST

ಹವಾಮಾನ ವೈಪರೀತ್ಯದಿಂದ ಕೇರಳದ ಕೋಯಿಕ್ಕೋಡ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದೆ.

Kozhikode-bound Air India flight landed at Mangaluru Airport
ಕೋಝಿಕ್ಕೋಡ್​ಗೆ ಹೊರಟಿದ್ದ ವಿಮಾನ ಮಂಗಳೂರಲ್ಲಿ ಲ್ಯಾಂಡ್: ಪ್ರಯಾಣಿಕರು ಸುಸ್ತು (ETV Bharat)

ಕಾಸರಗೋಡು: ಕೇರಳದ ಕೋಯಿಕ್ಕೋಡ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬುಧವಾರ ಬಂದಿಳಿದಿದೆ. ಯಾವುದೇ ಪೂರ್ವ ಸೂಚನೆಯಿಲ್ಲದೇ ವಿಮಾನ ಇಳಿದ ಕಾರಣ ಪ್ರಯಾಣಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ, ಸುಮಾರು ಹೊತ್ತು ಪ್ರಯಾಣಿಕರು ವಿಮಾನದಲ್ಲಿ ಕುಳಿತಿದ್ದರು ಎಂದು ತಿಳಿದು ಬಂದಿದೆ.

ಏರ್ ಇಂಡಿಯಾದ ವಿಮಾನ ಐಎಕ್ಸ್​ ದೋಹಾದಿಂದ ಕೋಯಿಕ್ಕೋಡ್​ಗೆ ಪ್ರಯಾಣ ಆರಂಭಿಸಿತ್ತು. ಇದರಲ್ಲಿ ಮಕ್ಕಳೂ ಸೇರಿದಂತೆ 180 ಪ್ರಯಾಣಿಕರು ಇದ್ದರು. ರಾತ್ರಿ ಕೊಯಿಕ್ಕೋಡ್‌ಗೆ ರಾತ್ರಿ 7.30ಕ್ಕೆ ತಲುಪಬೇಕಿತ್ತು. ಆದರೆ, ರಾತ್ರಿ 9.30ರ ಸುಮಾರಿಗೆ ಯಾವ ಮಾಹಿತಿಯನ್ನೂ ನೀಡದೆ ಮಂಗಳೂರಿಗೆ ಬಂದಿಳಿದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಲ್ಯಾಂಡಿಂಗ್‌ನಲ್ಲಿ ದಿಢೀರ್ ಬದಲಾವಣೆಗೆ ಕಾರಣಗಳನ್ನು ಅಧಿಕಾರಿಗಳು ಸರಿಯಾಗಿ ತಿಳಿಸಲಿಲ್ಲ. ರಾತ್ರಿಯಿಂದಲೂ ವಿಮಾನದಲ್ಲಿ ಕುಳಿತುಕೊಳ್ಳಲಾಗಿತ್ತು. ಇದರಿಂದ ಹಲವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದೂ ಪ್ರಯಾಣಿಕರು ದೂರಿದ್ದಾರೆ. ಮತ್ತೊಂದೆಡೆ, ಹವಾಮಾನ ವೈಪರೀತ್ಯದಿಂದಾಗಿ ಕೊಯಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ವಿಮಾನ ಇಳಿಯಲು ಸಾಧ್ಯವಾಗಲಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ವಿಮಾನ ಸಿಬ್ಬಂದಿ ಮತ್ತು ಏರ್ ಇಂಡಿಯಾ ಅಧಿಕಾರಿಗಳು ತ್ವರಿತ ಪರಿಹಾರ ಕಂಡುಕೊಳ್ಳಲು ವಿಫಲರಾಗಿದ್ದಾರೆ. ರಾತ್ರಿಯಲ್ಲಿ ಗಂಟೆಗಳ ಕಾಲ ವಿಮಾನದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿತ್ತು ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವಿಮಾನಯಾನಿಗಳಲ್ಲಿ ಆತಂಕ ಸೃಷ್ಟಿಸಿದ ಸಿಂಗಾಪುರ ವಿಮಾನದ ಘಟನೆ: ಆಗಸದಲ್ಲಿ ನಡೆದಿದ್ದೇನು?, ಇದಕ್ಕೆ ಕಾರಣ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.