ETV Bharat / health

ತ್ವಚೆಯನ್ನು ಕಾಡುವ ಬ್ಲಾಕ್​ಹೆಡ್ಸ್​ನಿಂದ ಮುಕ್ತಿ ಪಡೆಯುವು ಹೇಗೆ? ಇಲ್ಲಿದೆ ಸಲಹೆ - remedies to remove blackheads

author img

By ETV Bharat Karnataka Team

Published : May 23, 2024, 5:18 PM IST

ಬ್ಲಾಕ್​ ಹೆಡ್ಸ್​ ಎಂಬುದು ಚರ್ಮದ ರಂಧ್ರಗಳಾಗಿವೆ. ಚರ್ಮದಲ್ಲಿ ಎಣ್ಣೆ ಮತ್ತು ಕೊಳೆಯಂತಹ ಸಣ್ಣ ಸತ್ತ ಜೀವಕೋಶಗಳಿಂದ ಮುಚ್ಚಿಹೋದಾಗ ಇವು ರೂಪುಗೊಳ್ಳುತ್ತವೆ.

remedies-to-remove-blackheads-what-are-the-reason-to-form-blackheads
remedies-to-remove-blackheads-what-are-the-reason-to-form-blackheads (etv bharat kannada)

ಹೈದರಾಬಾದ್​: ಬ್ಲಾಕ್​ ಹೆಡ್ಸ್​ ಪ್ರತಿಯೊಬ್ಬರನ್ನು ಕಾಡುತ್ತವೆ. ಇವುಗಳಿಂದ ಮುಕ್ತಿ ಪಡೆಯುವುದು ಕೂಡ ಸುಲಭದ ಮಾತಲ್ಲ. ಇದಕ್ಕಿಂತ ಹೆಚ್ಚಾಗಿ ತಜ್ಞರು ಹೇಳುವುದೆಂದರೆ, ಎಷ್ಟೇ ಇದನ್ನು ತೆಗೆಯಲು ಪ್ರಯತ್ನ ಮಾಡಿದರೂ, ಇದರಿಂದ ಶಾಶ್ವತ ಮುಕ್ತಿ ಸಿಗುವುದಿಲ್ಲ. ಆದರೆ, ಕೆಲವು ಕ್ರಮ ಮತ್ತು ಮುನ್ನೆಚ್ಚರಿಕೆಯಿಂದ ಇದರ ಪರಿಣಾಮವನ್ನು ತಗ್ಗಿಸಬಹುದು. ಮಾರುಕಟ್ಟೆಯಲ್ಲಿ ಇದಕ್ಕೆಂದೇ ಕೆಲವು ಕ್ರೀಂಗಳು ಲಭ್ಯಯಿವೆ. ಆದರೆ ಇವು ಕಲೆ, ಸೋಂಕು ಅಥವಾ ಕಿರಿಕಿರಿಯನ್ನು ಮೂಡಿಸುತ್ತವೆ. ಈ ಬ್ಲಾಕ್​ ಹೆಡ್ಸ್​​​ಗೆ ಕಾರಣವೇನು, ತ್ವಚೆಯ ಯಾವ ಭಾಗದಲ್ಲಿ ಇದು ಉಂಟಾಗುತ್ತದೆ? ಈ ಕುರಿತ ಮಾಹಿತಿ ಇಲ್ಲಿದೆ.

ಬ್ಲಾಕ್​ ಹೆಡ್ಸ್​​ ಉಂಟಾಗಲು ಕಾರಣ?

ಬ್ಲಾಕ್​ ಹೆಡ್ಸ್​​ಅನ್ನು ಬಹುತೇಕರು ಕಣ್ಣಿನ ಕೆಳಗೆ ಕಾಣುವ ಕಪ್ಪು ವರ್ತುಲ ಎಂದು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ, ಬ್ಲಾಕ್​ ಹೆಡ್ಸ್​​ ಎಂಬುದು ಕಣ್ಣಿನ ಕೆಳಗೆ ಮಾತ್ರ ಕಾಡುವುದಿಲ್ಲ. ಮುಖ ಸೇರಿದಂತೆ ಅನೇಕ ಭಾಗದಲ್ಲಿ ಕಾಡುತ್ತದೆ. ಮತ್ತೊಂದು ಪ್ರಮುಖ ಅಂಶ ಎಂದರೆ ಈ ಬ್ಲಾಕ್​ ಹೆಡ್ಸ್​​ ಕಪ್ಪು ಬಣ್ಣದಲ್ಲಿ ಮಾತ್ರ ಇರುವುದಿಲ್ಲ. ಬ್ಲಾಕ್​ ಹೆಡ್ಸ್​ ಎಂಬುದು ಚರ್ಮದ ರಂಧ್ರಗಳಾಗಿವೆ. ಚರ್ಮದಲ್ಲಿ ಎಣ್ಣೆ ಮತ್ತು ಕೊಳೆಯಂತಹ ಸಣ್ಣ ಸತ್ತ ಜೀವಕೋಶಗಳಿಂದ ಮುಚ್ಚಿಹೋದಾಗ ರೂಪುಗೊಳ್ಳುತ್ತವೆ. ಇವು ಆಕ್ಸಿಡೀಕರಣಗೊಳ್ಳುತ್ತವೆ. ಹೊರಗಿನ ಗಾಳಿಗೆ ಒಡ್ಡಿಕೊಳ್ಳುವುದರಿಂದ ಕಪ್ಪಾಗಿ ಗೋಚರಿಸುತ್ತವೆ.

ಎಲ್ಲಿ ರೂಪುಗೊಳ್ಳುತ್ತೆ ಬ್ಲಾಕ್​ಹೆಡ್ಸ್​​?

ದೇಹದಲ್ಲಿ ಅತಿ ಹೆಚ್ಚು ಎಣ್ಣೆ ಉತ್ಪಾದನೆಯಾಗುವ ಪ್ರದೇಶದಲ್ಲಿ ಈ ಬ್ಲಾಕ್​ಹೆಡ್ಸ್​ ರೂಪುಗೊಳ್ಳುತ್ತವೆ. ಮೂಗು ಮತ್ತು ಗಲ್ಲ ಪ್ರದೇಶದಲ್ಲಿ ಇವು ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ಹಣೆ, ಬೆನ್ನು ಮತ್ತು ಎದೆ ಭಾಗದಲ್ಲೂ ಆವರಿಸುತ್ತೆ.

ತೆಗೆದು ಹಾಕುವುದು ಹೇಗೆ?

ಸ್ಯಾಲಿಸಿಲಿಕ್ ಆಮ್ಲ: ಮಾರುಕಟ್ಟೆಯಲ್ಲಿ ಲಭ್ಯವಾಗುವ ಕೆಲವು ಕ್ಲೆನ್ಸರ್​ ರೂಪದಲ್ಲಿ ಇದು ಲಭ್ಯವಿದೆ. ಇದು ಎಣ್ಣೆ ಸಂಗ್ರಹ ಮತ್ತು ಸತ್ತ ಚರ್ಮ ಸಂಗ್ರಹವಾಗುವುದನ್ನು ತಡೆಯುತ್ತದೆ. ಈ ರೀತಿಯ ಆಮ್ಲವೊಂದಿಗೆ ಕ್ಲೆನ್ಸರ್​ನಿಂದ ಮುಖವನ್ನು ತೊಳೆಯುವುದು ಸೂಕ್ತ. ಇದು ನಿಮ್ಮ ತ್ವಚೆಗೆ ಹೊಂದಿಕೆಯಾಗುತ್ತಿದೆ ಎಂದು ಭಾವಿಸಿದರೆ, ದಿನಕ್ಕೆ ಎರಡು ಬಾರಿ ಇದರಿಂದ ಮುಖ ತೊಳೆಯುವುದು ಒಳ್ಳೆಯದು.

ಎಕ್ಸ್ಫೋಲಿಷನ್​: ಇದು ಮುಖದಲ್ಲಿರುವ ಪಿಂಪಲ್​​ ಮತ್ತು ಇತರೆ ಸಮಸ್ಯೆಯನ್ನು ಕಡಿಮೆ ಮಾಡುವುದಿಲ್ಲ. ಆದರೆ, ಇದು ಬ್ಲಾಕ್​ಹೆಡ್ಸ್​​ಗೆ ಉಪಯುಕ್ತವಾಗಿದೆ. ವಿಶೇಷವಾಗಿ, ಇದರಲ್ಲಿರುವ ಅಂಶಗಳು ಅಲ್ಫಾ ಮತ್ತು ಬಿಟಾ ಹೈಡ್ರಿಕ್ಸಿ ಆಮ್ಲ (ಹೆಚ್​ಎ, ಬಿಹೆಚ್​ಎ) ಹೊಂದಿರುತ್ತದೆ. ಇದು ಬ್ಲಾಕ್​ ಹೆಡ್ಸ್​ಗೆ ಉತ್ತಮ ಪರಿಹಾರವಾಗಿದೆ.

ಮಾಸ್ಕ್​: ಮಣ್ಣಿನ ಮಾಸ್ಕ್​ ಕೂಡ ತ್ವಚೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಧೂಳು, ಕೊಳೆ, ಎಣ್ಣೆ ಮತ್ತು ಸತ್ತ ಕೋಶದ ವಿರುದ್ಧ ಹೋರಾಡುತ್ತದೆ. ಮಣ್ಣಿನಲ್ಲಿರುವ ಸಲ್ಫರ್​ ಅಂಶ ಸತ್ತ ಚರ್ಮದ ಕೋಶ ತೆಗೆದು ಹಾಕುತ್ತದೆ.

ಮೇಕಪ್​: ಮೇಕಪ್​ ಕೂಡ ಬ್ಲಾಕ್​ಹೆಡ್​​ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದರೆ, ಈ ಮೇಕಪ್​ ಉತ್ಪನ್ನಗಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಜೊತೆಗೆ ಈ ಉತ್ಪನ್ನಗಳಲ್ಲಿ ಕಾಮಿಡೊಗೆನಿಕ್ಸ್​​ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಮಲಗುವ ಮುನ್ನ, ನಿಮ್ಮ ಮುಖದಿಂದ ಮೇಕಪ್​ ತೆಗೆಯುವುದನ್ನು ಮರೆಯಬೇಡಿ.

ಪ್ರಮುಖ ಸೂಚನೆ: ಇಲ್ಲಿ ನೀಡಿರುವ ಮಾಹಿತಿಗಳು ಸಂಶೋಧನೆ, ಅಧ್ಯಯನಗಳ ಆಧರಿಸಿ ನೀಡಲಾಗಿದೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಗಂಟಲ ಆರೋಗ್ಯದ ಬಗ್ಗೆ ನೀವು ಎಂದಾದರೂ ಗಮನ ನೀಡಿದ್ದೀರಾ?: ಈ ಬಗ್ಗೆ ಇರಲಿ ತೀರಾ ಕಾಳಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.