ಬೈಕ್​ - ಕಾರು ಮಧ್ಯ ಭೀಕರ ಅಪಘಾತ... ಬೈಕ್​ ಸವಾರರಿಬ್ಬರನ್ನು 100 ಮೀಟರ್​ವರೆಗೆ ಎಳೆದೊಯ್ದ ವಾಹನ!

By

Published : Aug 3, 2023, 10:15 AM IST

thumbnail

ಹರಿಯಾಣದ ಪಂಚಕುಲದಲ್ಲಿ ಬುಧವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಎಕ್ಸ್‌ಯುವಿ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ, ಬೈಕ್​ ಸವಾರರಿಬ್ಬರನ್ನು ಕಾರ್​ ಸುಮಾರು 100 ಮೀಟರ್‌ವರೆಗೆ ಎಳೆದೊಯ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಸವಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.  

ಆರೋಪಿ ಎಕ್ಸ್‌ಯುವಿ ಕಾರ್ ಚಾಲಕ ಮೃತದೇಹವನ್ನು ವಾಹನದ ಡಿಕ್ಕಿಯಲ್ಲಿ ತಳ್ಳಲು ಪ್ರಯತ್ನಿಸುತ್ತಿದ್ದ. ಅಷ್ಟೇ ಅಲ್ಲ ವಾಹನದ ನಂಬರ್ ಪ್ಲೇಟ್ ಬದಲಾಯಿಸಲು ಯತ್ನಿಸುತ್ತಿದ್ದನು. ಈ ವೇಳೆ, ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎಕ್ಸ್‌ಯುವಿಯಲ್ಲಿ ನಾಲ್ವರು ಪ್ರಯಾಣಿಕರಿದ್ದರು. ಅದರಲ್ಲಿ ಮೂವರು ಪರಾರಿಯಾಗಿದ್ದಾರೆ. ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಆರೋಪಿ ಚಾಲಕನನ್ನು ಪಂಜಾಬ್‌ನ ಅಬೋಹರ್ ನಿವಾಸಿ ಕುಲರಾಜ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಅವರು ಪಾನಮತ್ತರಾಗಿದ್ದರು ಎನ್ನಲಾಗಿದೆ.

ಆರೋಪಿ ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ಪಂಚಕುಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಓದಿ: ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ನೀರಿನ ಟ್ಯಾಂಕ್ ಕುಸಿದು ಇಬ್ಬರ ಸಾವು 

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.