ETV Bharat / health

ಪಾದ - ಕೈಯಲ್ಲಿ ನೋವು, ಮರಗಟ್ಟುವ ಅನುಭವ ಆಗುತ್ತಿದೆಯಾ?; ಹಾಗಾದರೆ ಇದು ನರ ಹಾನಿಯ ಲಕ್ಷಣ ಇರಬಹುದು! - Pricking pain numbness in hands

author img

By ETV Bharat Karnataka Team

Published : May 11, 2024, 4:20 PM IST

Updated : May 11, 2024, 4:33 PM IST

ಈ ನರ ಸಮಸ್ಯೆ ಮೂರನೇ ಒಂದರಷ್ಟು ಜನರ ಕಾಲಿನಲ್ಲಿ ತೀಕ್ಷ್ಣವಾದ ನೋವು, ಮುಳ್ಳು ಚುಚ್ಚಿದ ಅಥವಾ ಆಘಾತದಂತಹ ನೋವನ್ನು ಉಂಟು ಮಾಡುತ್ತದೆ.

numbness in your hands and feet may signal a nerve damage condition
numbness in your hands and feet may signal a nerve damage condition (IANS)

ನವದೆಹಲಿ: ನಿಯಮಿತವಾಗಿ ಪಾದ ಅಥವಾ ಕೈಗಳಲ್ಲಿ ಜುಮ್ಮೆನಿಸುವಿಕೆ, ಸುಡುವಿಕೆ, ಮರಗಟ್ಟುವಿಕೆ ಅನುಭವ ಆಗುತ್ತಿದ್ದರೆ, ನರ ಹಾನಿ ಪರಿಸ್ಥಿತಿಯ ಚಿಹ್ನೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.

ಈ ಪರಿಸ್ಥಿತಿಯು ಬೀಳುವಿಕೆ, ಸೋಂಕು ಮತ್ತು ಅಂಗಚ್ಛೇದನಕ್ಕೂ ಕಾರಣವಾಗಬಹುದು ಎಂದು ಅಧ್ಯಯನ ಎಚ್ಚರಿಸಿದೆ. ಸಂವೇದನಾ ನರವನ್ನು ಇಕ್ಕಟ್ಟಾದ ಅಥವಾ ವಿಚಿತ್ರವಾದ ಪರಿಸ್ಥಿತಿಯಲ್ಲಿ ಇಂತಹ ಸಮಸ್ಯೆ ಉಂಟಾಗುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ನ್ಯೂರಾಲಜಿ ಜರ್ನಲ್‌ನಲ್ಲಿ ಅಧ್ಯಯನವನ್ನು ಪ್ರಕಟಿಸಲಾಗಿದೆ. ಪಾದದ ಈ ಸಮಸ್ಯೆ ಸಾಮಾನ್ಯವಾದರೂ ಮುಂದಿನ ದಿನಗಳಲ್ಲಿ ಇದು ರೋಗದ ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ನರ ಸಮಸ್ಯೆ ಮೂರನೇ ಒಂದರಷ್ಟು ಜನರ ಕಾಲಿನಲ್ಲಿ ತೀಕ್ಷ್ಣವಾದ ನೋವು, ಮುಳ್ಳು ಚುಚ್ಚಿದ ಅಥವಾ ಆಘಾತದಂತಹ ನೋವನ್ನು ಉಂಟುಮಾಡುತ್ತದೆ ಎಂದು ಅಮೆರಿಕದ ಆನ್ ಆರ್ಬರ್‌ನಲ್ಲಿರುವ ಮಿಚಿಗನ್ ವಿಶ್ವವಿದ್ಯಾಲಯದ ಮೆಲಿಸ್ಸಾ ಎ. ಎಲಾಫ್ರೋಸ್ ಹೇಳಿದ್ದಾರೆ.

ಇದು ಅಕಾಲಿಕ ಸಾವಿನ ಅಪಾಯ ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ನರದ ಸಮಸ್ಯೆ ಕುರಿತು ಜನರನ್ನು ಪತ್ತೆ ಮಾಡುವ ಮೂಲಕ ಜನರಿಗೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯ ಇದೆ ಎಂದು ಮೆಲಿಸ್ಸಾ ಎ ಎಲಾಫ್ರೋಸ್​​​ ತಿಳಿಸಿದ್ದಾರೆ. ಈ ಅಧ್ಯಯನಕ್ಕಾಗಿ 169 ಜನರನ್ನು ಭಾಗಿಯಾಗಿಸಿದ್ದು, ಭಾಗಿಯಾದವರಲ್ಲಿ ಅರ್ಧದಷ್ಟು ಮಂದಿ ಮಧುಮೇಹ ಹೊಂದಿದ್ದಾರೆ. ಇದಕ್ಕೆ ನರ ಹಾನಿ ಸ್ಥಿತಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ.

ಈ ನರರೋಗದ ಸಮಸ್ಯೆಯಿಂದ ಶೇ 73ರಷ್ಟು ಜನರು ಬಳಲುತ್ತಿದ್ದಾರೆ. ಇವರಲ್ಲಿ ಶೇ 75ರಷ್ಟು ಮಂದಿಯಲ್ಲಿ ಆರಂಭಿಕ ಹಂತದಲ್ಲಿ ಈ ಸ್ಥಿತಿ ಪತ್ತೆ ಆಗಿರಲಿಲ್ಲ. ಮೆಟಾಬಾಲಿಕ್ ಸಿಂಡ್ರೋಮ್ ನರರೋಗದ ಅಪಾಯವನ್ನು ನಾಲ್ಕು ಪಟ್ಟು ಹೆಚ್ಚು ಹೆಚ್ಚಿಸಿದೆ ಎಂದು ತಂಡ ಪತ್ತೆ ಮಾಡಿದೆ.

ಮೆಟಾಬಾಲಿಕ್ ಸಿಂಡ್ರೋಮ್ ಅನ್ನು ಹೆಚ್ಚುವರಿ ಹೊಟ್ಟೆಯ ಕೊಬ್ಬು ಮತ್ತು ಅಧಿಕ ರಕ್ತದೊತ್ತಡ, ಸಾಮಾನ್ಯ ಟ್ರೈಗ್ಲಿಸರೈಡ್‌ಗಳಿಗಿಂತ ಹೆಚ್ಚು (ರಕ್ತದಲ್ಲಿ ಕಂಡುಬರುವ ಕೊಬ್ಬು), ಮಧುಮೇಹ ಮತ್ತು ಕಡಿಮೆ ಮಟ್ಟದ ಉತ್ತಮ ಕೊಲೆಸ್ಟ್ರಾಲ್ ನಂತಹ ಹೆಚ್ಚಿನ ಅಪಾಯಕಾರಿ ಅಂಶವನ್ನು ಹೊಂದಿದೆ.

ಈ ರೀತಿ ನರ ಹಾನಿಯು ಅಧಿಕ ರಕ್ತದೊತ್ತಡವೂ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನರವನ್ನು ಚಿವುಟಿದಂತೆ, ನೋವು, ಮರಗಟ್ಟಿದ ಅನುಭವ ಉಂಟಾಗುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ಅಸ್ಥಿಸಂಧಿವಾತ ರೋಗಿಗಳಲ್ಲಿ ಉರಿಯೂತವಿಲ್ಲದೆ ಕಾಡುವ ನೋವಿಗೆ ಕಾರಣ ಪತ್ತೆ ಮಾಡಿದ ಸಂಶೋಧಕರು

Last Updated : May 11, 2024, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.