ನವದೆಹಲಿ: ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ (X3 xDrive20d M Sport Shadow Edition) ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆ 74,90,000 ರೂ. ಆಗಿರಲಿದೆ ಎಂದು ಕಂಪನಿ ತಿಳಿಸಿದೆ.
ಈ ವಿಶೇಷ ಆವೃತ್ತಿಯು ಡೀಸೆಲ್ ಮಾದರಿಯಲ್ಲಿ ಎಲ್ಲಾ ಬಿಎಂಡಬ್ಲ್ಯು ಇಂಡಿಯಾ ಡೀಲರ್ಗಳು ಮತ್ತು ಆನ್ ಲೈನ್ ಶಾಪ್ಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ವಾಹನವು ಬ್ರೂಕ್ಲಿನ್ ಗ್ರೇ ಮತ್ತು ಕಾರ್ಬನ್ ಬ್ಲ್ಯಾಕ್ ಎಂಬ ಮೆಟಾಲಿಕ್ ಬಣ್ಣಗಳಲ್ಲಿ ಸಿಗಲಿದೆ. ಕಂಪನಿಯ ಪ್ರಕಾರ, ಹೊಸ ಕಾರಿನ ವಿನ್ಯಾಸವು ಸ್ಪೋರ್ಟಿಯರ್ ದೃಷ್ಟಿಕೋನವನ್ನು (sportier orientation) ಹೊಂದಿದೆ.
ಹೊಸ ವಾಹನವು ಎರಡು ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ಗಳನ್ನು ಹೊಂದಿದ್ದು, ಇದು 140 ಕಿಲೋವ್ಯಾಟ್ / 190 ಬಿಹೆಚ್ ಪಿ (ಅಶ್ವಶಕ್ತಿ) ಮತ್ತು 1,750 - 2,500 ಆರ್ ಪಿಎಂನಲ್ಲಿ 400 ಎನ್ಎಂ (ನ್ಯೂಟನ್ ಮೀಟರ್) ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 0-100 ಕಿ.ಮೀ ವೇಗವನ್ನು ಕೇವಲ 7.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.
ಇದಲ್ಲದೆ, ಆಪರೇಟಿಂಗ್ ಸಿಸ್ಟಮ್ 7.0 ನಲ್ಲಿ ಚಲಿಸುವ ತನ್ನ ಬಿಎಂಡಬ್ಲ್ಯು ಲೈವ್ ಕಾಕ್ ಪಿಟ್ ಪ್ರೊಫೆಷನಲ್ 3 ಡಿ ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಕಾರು ಸ್ಟೀರಿಂಗ್ ಚಕ್ರದ ಹಿಂದೆ ಹೆಚ್ಚಿನ ರೆಸಲ್ಯೂಶನ್ 12.3-ಇಂಚಿನ ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕಂಟ್ರೋಲ್ ಡಿಸ್ ಪ್ಲೇಯನ್ನು ಹೊಂದಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಸುರಕ್ಷತೆಗಾಗಿ ಈ ಕಾರಿನಲ್ಲಿ ಆರು ಏರ್ ಬ್ಯಾಗ್ ಗಳು, ಬ್ರೇಕ್ ಅಸಿಸ್ಟ್ ನೊಂದಿಗೆ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಅಟೆಂಟಿವ್ನೆಸ್ ಅಸಿಸ್ಟೆನ್ಸ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್ ಮತ್ತು ಕ್ರ್ಯಾಶ್ ಸೆನ್ಸರ್ ಮುಂತಾದ ಉಪಯುಕ್ತ ವೈಶಿಷ್ಟ್ಯಗಳಿವೆ.
ಕ್ರಾಸ್ಒವರ್ ಬೈಕ್ ಎಂ 1000 ಎಕ್ಸ್ಆರ್ ಬಿಡುಗಡೆ: ಬಿಎಂಡಬ್ಲ್ಯು ಕಂಪನಿಯು ವಿಶ್ವದ ಅತ್ಯಂತ ಶಕ್ತಿಶಾಲಿ ಕ್ರಾಸ್ಒವರ್ ಬೈಕ್ ಎಂ 1000 ಎಕ್ಸ್ಆರ್ ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ ರೂ. 45 ಲಕ್ಷಗಳಾಗಿದೆ. ಬಿಎಂಡಬ್ಲ್ಯು ಎಂ 1000 ಎಕ್ಸ್ಆರ್ ಅತ್ಯಂತ ಶಕ್ತಿಶಾಲಿ ಟೂರಿಂಗ್ ಬೈಕ್ ಎಂದು ಕಂಪನಿ ಹೇಳಿಕೊಂಡಿದೆ. ಇದರ ಎಂಜಿನ್ ಎಸ್ 1000 ಆರ್ ಆರ್ ಸೂಪರ್ ಬೈಕ್ ನಂತೆಯೇ ಇದೆ. ಕಂಪನಿಯ ಶಿಫ್ಟ್ ಕ್ಯಾಮ್ ವೇರಿಯಬಲ್ ಟೈಮಿಂಗ್ / ಲಿಫ್ಟ್ ತಂತ್ರಜ್ಞಾನವನ್ನು ಈ ಎಂಜಿನ್ನಲ್ಲಿ ಬಳಸಲಾಗಿದೆ. ಈ ಎಂಜಿನ್ 201 ಬಿ ಹೆಚ್ ಪಿ ಪವರ್ ಮತ್ತು 113 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
ಇದನ್ನೂ ಓದಿ : ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆಯಲ್ಲಿ ಮಹಿಳೆಯರ ಸಂಖ್ಯೆ ಶೇ. 37ರಷ್ಟು ಏರಿಕೆ! - WOMEN USING INTERNET