ETV Bharat / technology

ಭಾರತದಲ್ಲಿ ಮೊಬೈಲ್​ ಇಂಟರ್​ನೆಟ್​​ ಬಳಕೆಯಲ್ಲಿ ಮಹಿಳೆಯರ ಸಂಖ್ಯೆ ಶೇ. 37ರಷ್ಟು ಏರಿಕೆ! - WOMEN USING INTERNET

author img

By ETV Bharat Karnataka Team

Published : May 16, 2024, 1:40 PM IST

ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿನ ಜನರು ಈ ಮೊದಲಿಗಿಂತ ಹೆಚ್ಚು ಮೊಬೈಲ್​ ಇಂಟರ್ನೆಟ್​ ಬಳಕೆ ಮಾಡುತ್ತಿದ್ದಾರೆ ಎಂಬುದು ವರದಿಯಲ್ಲಿ ಕಂಡು ಬಂದಿದೆ.

Womens internet adoption on mobile phones has reached 37 per cent in India
ಮೊಬೈಲ್​ ಇಂಟರ್​ನೆಟ್​​ ಬಳಕೆಯಲ್ಲಿ ಮಹಿಳೆಯರು ಮುಂದು (IANS)

ನವದೆಹಲಿ: ಭಾರತದಲ್ಲಿ ಮಹಿಳೆಯರು ಮೊಬೈಲ್​ ಇಂಟರ್​ನೆಟ್​​ ಬಳಕೆ ದರ ಶೇ 37ರಷ್ಟು ಏರಿಕೆ ಕಂಡಿದೆ. ಈ ನಡುವೆ ಪುರುಷರ ಸಂಖ್ಯೆ ಸ್ಥಿರವಾಗಿದೆ. ಮಹಿಳೆಯರು ಮತ್ತು ಪುರುಷರ ನಡುವಿನ ಅಂತರ ಶೇ 30 ರಿಂದ 40ರಷ್ಟು ಕಡಿಮೆ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.

2023ರಲ್ಲಿ ಜಾಗತಿಕವಾಗಿ 120 ಮಿಲಿಯನ್​ ಮಹಿಳೆಯರು ಮೊಬೈಲ್​ ಮೂಲಕ ಇಂಟರ್ನೆಟ್​​ ಸಂಪರ್ಕಕ್ಕೆ ಒಳಗಾಗಿದ್ದಾರೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿನ ಜನರು ಈ ಮೊದಲಿಗಿಂತ ಹೆಚ್ಚು ಮೊಬೈಲ್​ ಇಂಟರ್ನೆಟ್​ ಬಳಕೆ ಮಾಡುತ್ತಿದ್ದಾರೆ ಎಂದು ಜಾಗತಿಕ ಸಂಘಟನೆಯಾಗಿರುವ ಜಿಎಸ್​ಎಂಎ ತಿಳಿಸಿದೆ. ಆದಾಗ್ಯೂ, 785 ಮಿಲಿಯನ್​ ಮಹಿಳೆಯರು ಈ ಇಂಟರ್ನೆಟ್​​ ಸಂಪರ್ಕದಿಂದ ದೂರ ಉಳಿದಿದ್ದಾರೆ. ದಕ್ಷಿಣ ಏಷ್ಯಾ ಮತ್ತು ಉಪ ಸಹರಾನ್​ ಆಫ್ರಿಕನ್​​ ದೇಶಗಳಲ್ಲಿ ಶೇ 60ರಷ್ಟು ಮಂದಿ ಸಂಪರ್ಕಿತರಾಗಿಲ್ಲ ಎಂದು ಜಿಎಸ್​ಎಂಎಯ ಮೊಬೈಲ್​ ಜೆಂಡರ್​ ಗ್ಯಾಪ್​ ರಿಪೋರ್ಟ್​​ 2024ರ ವರದಿಯಲ್ಲಿ ವಿವರಿಸಲಾಗಿದೆ.

ಮೊಬೈಲ್​ ಇಂಟರ್ನೆಟ್​​ ಲಿಂಗ ಅಂತರವೂ ಭರವಸೆದಾಯಕವಾಗಿದೆ. ಆದರೆ, ಆವೇಗವನ್ನು ಉಳಿಸಿಕೊಳ್ಳುವುದು ದುರ್ಬಲವಾಗಿರುತ್ತದೆ. ಮಹಿಳೆಯರು ಇಂಟರ್​ನೆಟ್​​ ಬಳಕೆಗೆ ಮೊಬೈಲ್​​ಗಳು ಕೈಗೆಟುಕುವಿಕೆ, ಅರಿವು ಮತ್ತು ಡಿಜಿಟಲ್ ಕೌಶಲ್ಯಗಳು ಸೇರಿದಂತೆ ಪ್ರಮುಖ ಅಡೆತಡೆಗಳನ್ನು ಪರಿಹರಿಸಲು ನಾವು ಉದ್ಯಮ, ನೀತಿ ನಿರೂಪಕರು ಮತ್ತು ಇತರ ಸಂಬಂಧಿತ ಪಾಲುದಾರರೊಂದಿಗೆ ಸಹಕರಿಸುತ್ತಿದ್ದೇವೆ ಎಂದು ಜಿಎಸ್​ಎಂಎ ತಿಳಿಸಿದೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಮೊಬೈಲ್​ ಒಡೆತನ ಮತ್ತು ಬಳಕೆಯ ನಡುವಿನ ಅಂತರ ಕಡಿಮೆಯಾಗುತ್ತಿದೆ. ಇದರಿಂದಾಗಿ ಕಳೆದ 8 ವರ್ಷದಲ್ಲಿ ಮೊಬೈಲ್​ ಉದ್ಯಮ 230 ಬಿಲಿಯನ್​ ಡಾಲರ್​ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

2020ರ ಬಳಿಕ ಇದೇ ಮೊದಲ ಬಾರಿಗೆ ಮೊಬೈಲ್​ ಬಳಕೆ ನಡುವಿನ ಅಂತರ ಕಡಿಮೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಮೊಬೈಲ್​ ಹೊಂದುತ್ತಿದ್ದಾರೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಮಹಿಳೆಯರು ಮೊಬೈಲ್​ ಇಂಟರ್​ನೆಟ್​​ ಬಳಕೆಯಲ್ಲಿ ಪುರುಷರಿಗಿಂತ ಕೇವಲ ಶೇ 15ರಷ್ಟು ಕಡಿಮೆ ಇದ್ದಾರೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ 1.4 ಬಿಲಿಯನ್​ ಅಂದರೆ ಶೇ 60ರಷ್ಟು ಮಹಿಳೆಯರು ಸ್ಮಾರ್ಟ್​ಫೋನ್​ ಹೊಂದಿದ್ದಾರೆ. ಶೇ 40ರಷ್ಟು ಮಹಿಳೆಯರು ಇನ್ನೂ ಸ್ಮಾರ್ಟ್​ ಫೋನ್​ ಹೊಂದಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್​ನಿಂದ ಸಿಹಿ ಸುದ್ದಿ, ಆದಷ್ಟು ಬೇಗ ಹ್ಯಾಂಡ್​ ಫ್ರೀ ವೈಶಿಷ್ಯ ಪರಿಚಯಿಸಲಿರುವ AI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.