ETV Bharat / health

ನಿಮ್ಮ ಮಕ್ಕಳು ದೀರ್ಘಕಾಲ ಟಿವಿ, ಫೋನ್​ ನೋಡ್ತಿದ್ದಾರಾ?; ಭಾರತದ ಮೂವರಲ್ಲಿ ಒಬ್ಬ ಮಗುವಿಗೆ ಸಮೀಪ ದೃಷ್ಟಿ ದೋಷ - Prolonged sitting screen use

author img

By IANS

Published : May 16, 2024, 3:17 PM IST

ಭಾರತದಲ್ಲಿ ಅದರಲ್ಲೂ ನಗರ ಪ್ರದೇಶದ ಜನರಲ್ಲಿ ಸಮೀಪ ದೃಷ್ಟಿ ದೋಷ ಸಾಮಾನ್ಯವಾಗಿದೆ. ಈ ಪ್ರವೃತ್ತಿಯನ್ನು ಅನೇಕ ಅಧ್ಯಯನ ಮತ್ತು ವರದಿಗಳು ದೃಢಪಡಿಸಿವೆ. ಆದರೂ ಮಕ್ಕಳು ಮಾತ್ರ ಮೊಬೈಲ್ ನೋಡುವುದನ್ನೇನು ಬಿಟ್ಟಿಲ್ಲ ಬಿಡಿ.

one third of all children in urban India suffer from myopia
ದೀರ್ಘಕಾಲ ಕುಳಿತು ಸ್ಕ್ರೀನ್​ ವೀಕ್ಷಣೆ; ಭಾರತದ ಮೂರರಲ್ಲಿ ಒಂದು ಮಕ್ಕಳಲ್ಲಿ ಸಮೀಪ ದೃಷ್ಟಿ ದೋಷ (IANS)

ನವದೆಹಲಿ: 2030ರ ಹೊತ್ತಿಗೆ 5 ರಿಂದ 15 ವರ್ಷದ ಭಾರತದ ನಗರದ ಮೂರನೇ ಒಂದು ಮಗುವಿನಲ್ಲಿ ಸಮೀಪ ದೃಷ್ಟಿ ಸಮಸ್ಯೆ ಕಾಡಲಿದೆ ಎಂದು ನೇತ್ರತಜ್ಞರು ಎಚ್ಚರಿಸಿದ್ದಾರೆ. ಆಲಸ್ಯ ಜೀವನಶೈಲಿ ಮತ್ತು ದೀರ್ಘಕಾಲದ ಸ್ಕ್ರೀನ್​ಗಳ ವೀಕ್ಷಣೆ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಸಮೀಪ ದೃಷ್ಟಿದೋಷ ಎಂಬುದು ಕಣ್ಣಿನ ಗುಣಪಡಿಸಲಾಗದ ದೃಷ್ಟಿ ದೋಷವಾಗಿದೆ. ಹತ್ತಿರ ಇರುವ ವಸ್ತುಗಳು ಸ್ಪಷ್ಟವಾಗಿ ಮತ್ತು ದೂರದ ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತದೆ. ಜಾಗತಿಕವಾಗಿ ಕಾಡುತ್ತಿರುವ ಇದು ಗಮನಾರ್ಹ ಸಾರ್ವಜನಿಕ ಸಮಸ್ಯೆಯಾಗಿದ್ದು, 2050ರ ಹೊತ್ತಿಗೆ ಇಬ್ಬರಲ್ಲಿ ಒಬ್ಬರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಇದು ಮಕ್ಕಳಲ್ಲಿ ಮತ್ತು ಯುವ ಜನತೆಯಲ್ಲಿ ಹೆಚ್ಚಲಿದೆ.

ಭಾರತ ಸೇರಿದಂತೆ ಜಾಗತಿಕವಾಗಿ ಸಮೀಪ ದೃಷ್ಟಿ ದೋಷ ಸಮಸ್ಯೆ ಹೆಚ್ಚುತ್ತಿದೆ. ಅದರಲ್ಲೂ ಭಾರತದಲ್ಲಿ ನಗರ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿರುವ ಕುರಿತು ಅನೇಕ ಪುರಾವೆಗಳು ಲಭ್ಯವಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

1999 ರಿಂದ 2019ರವರೆಗೆ 20 ವರ್ಷದ ಅವಧಿಯಲ್ಲಿ ಭಾರತದಲ್ಲಿ ನಗರದ ಮಕ್ಕಳಲ್ಲಿ ಈ ಸಮೀಪ ದೃಷ್ಟಿ ದೋಷ ಸಮಸ್ಯೆ ಮೂರು ಪಟ್ಟು ಹೆಚ್ಚಾಗಿದೆ. 1999ರಲ್ಲಿ 4.44ರಷ್ಟಿದ್ದ ಈ ಸಮಸ್ಯೆ 2019ರ ಹೊತ್ತಿಗೆ 21.15ರಷ್ಟಾಗಿದೆ.

ಕಳೆದ ಕೆಲವು ವರ್ಷದಲ್ಲಿ ನಗರದಲ್ಲಿ ಈ ಸಮಸ್ಯೆ ಹೆಚ್ಚಳ ಮತ್ತಷ್ಟು ಹೆಚ್ಚಳ ಕಂಡಿದೆ. 2030ರ ಹೊತ್ತಿಗೆ ಭಾರತದ ನಗರದ ಮಕ್ಕಳಲ್ಲಿ ಈ ಸಮಸ್ಯೆ ದರ 31. 89ರಷ್ಟಿರಲಿದೆ. 2040ರ ಹೊತ್ತಿಗೆ ಶೇ 40 ಮತ್ತು 2050ರ ಹೊತ್ತಿಗೆ 48.1ರಷ್ಟಿರಲಿದೆ. ಮುಂದಿನ 25 ವರ್ಷದಲ್ಲಿ ಭಾರತದಲ್ಲಿ ಪ್ರತಿ ಎರಡು ಮಕ್ಕಳಲ್ಲಿ ಒಂದು ಮಗುವಿನಲ್ಲಿ ಸಮೀಪ ದೃಷ್ಟಿ ದೋಷ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಮುಂಬೈನ ಥಾಣೆಯ ಡಾ ಅಗರ್ವಾಲ್​​ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಎಂ ಬವರಿಯಾ ತಿಳಿಸಿದ್ದಾರೆ.

ಭಾರತದಲ್ಲಿ ಅದರಲ್ಲೂ ನಗರ ಪ್ರದೇಶದ ಜನರಲ್ಲಿ ಸಮೀಪ ದೃಷ್ಟಿ ದೋಷ ಸಾಮಾನ್ಯವಾಗಿದೆ. ಈ ಪ್ರವೃತ್ತಿಯನ್ನು ಅನೇಕ ಅಧ್ಯಯನ ಮತ್ತು ವರದಿಗಳು ದೃಢಪಡಿಸಿವೆ. ಇತ್ತೀಚಿನ ದಿನದಲ್ಲಿ ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಇದು ಸಾಮಾನ್ಯವಾಗುತ್ತಿದೆ ಎಂದು ನವದೆಹಲಿಯ ಸೆಂಟರ್​ ಫಾರ್​ ಸೈಟ್​ನ ಅಧ್ಯಕ್ಷ ಮಹಿಪಾಲ್​ ಸಿಂಗ್​ ಸಚ್ದೇವ್​ ತಿಳಿಸಿದ್ದಾರೆ.

ಸಮೀಪ ದೃಷ್ಟಿ ದೋಷದ ಲಕ್ಷಣಗಳು: ದೂರದ ವಸ್ತುಗಳು ಅಸ್ಪಷ್ಟವಾಗಿ ಕಾಣುವುದು. ಕಣ್ಣಿನ ಒತ್ತಡ, ತಲೆನೋವು, ಆಯಾಸ ಉಂಟಾಗುವುದು. ಆಲಸ್ಯದ ಜೀವನ ಮತ್ತು ದೀರ್ಘಾವಧಿ ಪರದೆ ವೀಕ್ಷಣೆ, ಹೊರಾಂಗಿಣ ಚಟುವಟಿಕೆ ಕಡಿಮೆ ಮಾಡಿರುವುದು ಮಕ್ಕಳಲ್ಲಿ ಈ ಸಮಸ್ಯೆ ಅಭಿವೃದ್ಧಿಗೆ ಕಾರಣವಾಗಿದೆ.

ಅತಿ ಹೆಚ್ಚು ಸ್ಕ್ರೀ ಟೈಂ ಮಕ್ಕಳ ಕಣ್ಣು, ರೆಟಿನಾ ಮತ್ತು ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣಿನ ಗುಡ್ಡೆ ಬೆಳವಣಿಗೆಯಲ್ಲಿ ಶೀಘ್ರ ಬದಲಾವಣೆ ಕಂಡು ಸಮೀಪ ದೃಷ್ಟಿದೋಷಕ್ಕೆ ಕಾರಣವಾಗುತ್ತದೆ. ಜೊತೆಗೆ ನೈಸರ್ಗಿಕ ಬೆಳಕಿನ ಕೊರತೆ ಮತ್ತು ಮನೆಯೊಳಗಿನ ಬೆಳಕುಗಳು ಕೂಡ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ಸಮೀಪದೃಷ್ಟಿ ದೋಷದಲ್ಲಿ ಅನುವಂಶಿಕತೆ ಅಪಾಯವನ್ನು ಹೊಂದಿದೆ. ಇದು ಕೂಡ ಸಮಸ್ಯೆ ಅಭಿವೃದ್ಧಿಯಲ್ಲಿ ಕೊಡುಗೆ ನೀಡುತ್ತದೆ. ಹೆಚ್ಚುತ್ತಿರುವ ಈ ಆರೋಗ್ಯ ಸಮಸ್ಯೆ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಿದೆ. ಜೀವನಶೈಲಿ ಹೊಂದಾಣಿ, ಕಣ್ಣಿನ ಆರೈಕೆ ಸೇವೆಗೆ ಉತ್ತೇಜನ ನೀಡಬೇಕಿದೆ. ಆರಂಭಿಕ ಹಂತದಲ್ಲೇ ಮಕ್ಕಳ ಈ ಸಮಸ್ಯೆ ಪತ್ತೆ ಹಚ್ಚಬೇಕಿದೆ. ಈ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿಲ್ಲ. ಆದರೆ, ಕನ್ನಡಕ ಅಥವಾ ಕಾಂಟಾಕ್ಟ್​ ಲೆನ್ಸ್​ ಇದಕ್ಕೆ ಸಹಾಯ ಮಾಡಲಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ನಿಯಮಿತ ಕಣ್ಣಿನ ತಪಾಸಣೆಗೆ ಒಳಗಾಗಿಸಬೇಕಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳ ಸ್ಕ್ರೀನ್​ ಟೈಂ ಕಡಿಮೆ ಮಾಡಿ, ಆರೋಗ್ಯಯುತ ಡಿಜಿಟಲ್​ ಬಳಕೆಗೆ ಪ್ರೋತ್ಸಾಹಿಸಲು ಇಲ್ಲಿದೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.