ETV Bharat / technology

Appleನ ಹೊಸ ಆವೃತ್ತಿ IOS 17.5 ಬಿಡುಗಡೆ; ನಿಮ್ಮ ಐಫೋನ್ ಟ್ರ್ಯಾಕ್ ಮಾಡಲು ಪ್ರಯತ್ನಿಸಿದರೆ ಬರುತ್ತೆ ಎಚ್ಚರಿಕೆ ಸಂದೇಶ! - Apple Releases iOS 17 5 Update

author img

By ETV Bharat Karnataka Team

Published : May 14, 2024, 7:45 PM IST

Apple ಕಂಪನಿ iOS 17.5 ಹೊಸ ಅಪ್ಡೇಟ್​ವೊಂದನ್ನು ಬಿಡುಗಡೆ ಮಾಡಿದೆ. ಇದು ತನ್ನ ಬಳಕೆದಾರರಿಗೆ ಅನೇಕ ಅತ್ಯುತ್ತಮ ಭದ್ರತಾ ವೈಶಿಷ್ಟ್ಯಗಳನ್ನು ಲಭ್ಯವಾಗುವಂತೆ ಮಾಡಿದೆ. ಈ ಬಗೆಗಿನ ಎಲ್ಲ ವಿಚಾರಗಳನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

apple-releases-ios-17-point-5-launched-with-a-huge-security-feature-for-your-iphone
Appleನ ಹೊಸ ಆವೃತ್ತಿ IOS 17.5 ಬಿಡುಗಡೆ; ಇದರಲ್ಲಿವೆ ಹಲವು ಭದ್ರತಾ ವೈಶಿಷ್ಟ್ಯಗಳು (ETV Bharat)

ಹೈದರಾಬಾದ್​: ವಿಶ್ವದ ಜನಪ್ರಿಯ ಮೊಬೈಲ್​ ಬ್ರ್ಯಾಂಡ್​ ಆಪಲ್​ ಕಂಪನಿ ತನ್ನ iOS 17.5 ನವೀಕರಣವನ್ನು ಬಿಡುಗಡೆ ಮಾಡಿದೆ. ಇದನ್ನು ಎಲ್ಲಾ ಐಫೋನ್ ಮಾದರಿಗಳಲ್ಲಿ ಅಪ್ಡೇಟ್​ ಮಾಡಿಕೊಳ್ಳಬಹುದು, ಇಲ್ಲವೇ ಇನ್​​ಸ್ಟಾಲ್ ಮಾಡಿಕೊಳ್ಳಬಹುದು. ಐಒಎಸ್ 17.5 ಅಪ್‌ಡೇಟ್‌ನ ಉತ್ತಮ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಈ ಇಲ್ಲಿ ತಿಳಿದುಕೊಳ್ಳೋಣ .

ಯುರೋಪಿಯನ್ ಯೂನಿಯನ್‌ ರಾಷ್ಟ್ರಗಳಲ್ಲಿ ಐಫೋನ್ ಬಳಕೆದಾರರಿಗೆ ವೆಬ್ ಡಿಸ್ಟ್ರಿಬ್ಯೂಷನ್ ಎಂಬ ಹೊಸ ವೈಶಿಷ್ಟ್ಯ ಈಗಾಗಲೇ ಲಭ್ಯವಿದೆ. ಆದ್ದರಿಂದ ಅವರು ಐಫೋನ್ ಅಪ್ಲಿಕೇಶನ್ ಸ್ಟೋರ್‌ನಿಂದ ಮಾತ್ರವಲ್ಲದೇ ಅಪ್ಲಿಕೇಶನ್‌ಗಳನ್ನು ಸೈಡ್‌ಲೋಡ್ ಕೂಡಾ ಮಾಡಬಹುದು. ಆಪಲ್ 'ಫೈಂಡ್ ಮೈ' ಟ್ರ್ಯಾಕಿಂಗ್ ವ್ಯವಸ್ಥೆ ಪರಿಚಯಿಸಿದ್ದು, ಬಳಕೆದಾರರು ತಮ್ಮ ಐಫೋನ್‌ನ ರಿಪೇರಿ ಸ್ಥಿತಿಯನ್ನು ತಿಳಿಯಲು ಹೆಣಗಾಡಬೇಕಿಲ್ಲ. ಈ ಆಯ್ಕೆ ಮೂಲಕ ಬಳಕೆದಾರರು ಐಫೋನ್ ರಿಪೇರಿ ಸ್ಥಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ವಿಶ್ವಾದ್ಯಂತ iPhone ಬಳಕೆದಾರರಿಗೆ, ಇತ್ತೀಚಿನ ನವೀಕರಣವು Apple News+ ಅಪ್ಲಿಕೇಶನ್ ಆಫ್‌ಲೈನ್ ಮೋಡ್ ನಲ್ಲೂ ಲಭ್ಯವಾಗುವಂತೆ ಮಾಡಲಾಗಿದೆ. ಇದರ ಮೂಲಕ ಬಳಕೆದಾರರು ನ್ಯೂಸ್+ ಟ್ಯಾಬ್, ಟುಡೇ ಫೀಡ್ ಅನ್ನು ಇಂಟರ್ನೆಟ್ ಇಲ್ಲದಿದ್ದರೂ ಪ್ರವೇಶಿಸಲು ಸಾಧ್ಯವಾಗಲಿದೆ.

ಮೊಬೈಲ್​​ನಲ್ಲಿರುವ ಭದ್ರತಾ ವೈಶಿಷ್ಟ್ಯಗಳೇನು?: ಯಾರಾದರೂ ನಿಮ್ಮ ಐಫೋನ್ ಟ್ರ್ಯಾಕ್ ಮಾಡಲು ಪ್ರಯತ್ನಿಸಿದರೆ, ನಿಮಗೆ ತಿಳಿಸುವ ಭದ್ರತಾ ವೈಶಿಷ್ಟ್ಯವಿದೆ. ಈ ಕ್ರಾಸ್ - ಪ್ಲಾಟ್‌ಫಾರ್ಮ್ ಟ್ರ್ಯಾಕಿಂಗ್ ಪತ್ತೆ ವೈಶಿಷ್ಟ್ಯದೊಂದಿಗೆ, ನಿಮ್ಮ ಹತ್ತಿರದ ಟ್ರ್ಯಾಕರ್ ಅನ್ನು ನೀವು ಸುಲಭವಾಗಿ ಹುಡುಕಬಹುದು.

ಈ iOS 17.5 ಅಪ್‌ಡೇಟ್‌ನಲ್ಲಿ ಏರ್‌ಟ್ಯಾಗ್ ವೈಶಿಷ್ಟ್ಯದ ಮೂಲಕ ನಿಮ್ಮ ಸಾಧನಗಳನ್ನು ನೀವು ಟ್ರ್ಯಾಕ್ ಕೂಡಾ ಮಾಡಬಹುದು. ನೀವು ಈ ಏರ್‌ಟ್ಯಾಗ್ ಅನ್ನು ಸಕ್ರಿಯಗೊಳಿಸಿದರೆ, ನಿಮ್ಮ ಫೋನ್, ಕಾರು ಇತ್ಯಾದಿಗಳು ಕಳ್ಳತನವಾದಾಗ ನಿಮಗೆ ತಕ್ಷಣ ಎಚ್ಚರಿಕೆ ಸಂದೇಶ ಬರುತ್ತದೆ. iOS 17.5 ಹೊಸ ಅಪ್ಡೇಟ್​ ಟಿಪ್ಪಣಿಯ ಪ್ರಕಾರ, ಕ್ರಾಸ್-ಪ್ಲಾಟ್‌ಫಾರ್ಮ್ ಟ್ರ್ಯಾಕಿಂಗ್ ಪತ್ತೆ ವೈಶಿಷ್ಟ್ಯವು ಬಳಕೆದಾರರ ಫೋನ್ ಅನ್ನು ಟ್ರ್ಯಾಕ್ ಮಾಡುವ ಸಾಧನವನ್ನು ಸುಲಭವಾಗಿ ಪತ್ತೆ ಮಾಡುತ್ತದೆ. ಅಂದರೆ ಯಾರಾದರೂ ನಿಮ್ಮ ಮೊಬೈಲ್ ಟ್ರ್ಯಾಕ್ ಮಾಡುತ್ತಿದ್ದರೆ, ಅದು ಅಧಿಸೂಚನೆಯ ಮೂಲಕ ನಿಮ್ಮ ಗಮನಕ್ಕೆ ತರುತ್ತದೆ. ಈ ಭದ್ರತಾ ವೈಶಿಷ್ಟ್ಯವನ್ನು 2023 ರಲ್ಲಿ ಗೂಗಲ್ ಮತ್ತು ಆಪಲ್ ಜಂಟಿಯಾಗಿ ತಂದಿವೆ ಎಂಬುದು ನೆನಪಿರಲಿ.

ಅಪ್‌ಗ್ರೇಡ್ ಮಾಡುವುದು ಹೇಗೆ?

  • ಮೊದಲು ನೀವು ಐಫೋನ್ ಸೆಟ್ಟಿಂಗ್‌ಗೆ ಹೋಗಬೇಕು.
  • ಸಾಮಾನ್ಯ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.
  • ಸಾಫ್ಟ್‌ವೇರ್ ನವೀಕರಣವನ್ನು ಟ್ಯಾಪ್ ಮಾಡಿ.
  • ಡೌನ್​ಲೋಡ್​ ಬಳಿಕ ಇನ್​ಸ್ಟಾಲ್​ ಮಾಡಿಕೊಳ್ಳಿ

ಇದನ್ನು ಓದಿ: ಬೆಂಗಳೂರು: ಇವತ್ತು ಬಂಗಾರದ ಬೆಲೆಯಲ್ಲಿ ಬರೋಬ್ಬರಿ 400 ರೂ ಇಳಿಕೆ.. ಆಭರಣ ಚಿನ್ನ, ಚಿನ್ನದ ಗಟ್ಟಿಗೆ ಎಷ್ಟಿದೆ ಬೆಲೆ? - GOLD RATE TODAY

ಫ್ರೀ ಫ್ರೀ ಫ್ರೀ... ಜಿಯೋ ಫೈಬರ್ - ಏರ್ ಫೈಬರ್ ಗ್ರಾಹಕರಿಗೆ ಭರ್ಜರಿ ಆಫರ್ - Jio new plan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.