ETV Bharat / sukhibhava

ಭಾರತದಲ್ಲಿ ವಿನಾಶಕಾರಿ ಪರಿಣಾಮ ಬೀರುತ್ತಿದೆ ತಂಬಾಕು; ಜಾಗತಿಕ ಅಧ್ಯಯನದಿಂದ ಬಯಲು

author img

By ETV Bharat Karnataka Team

Published : Nov 17, 2023, 4:27 PM IST

ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ ಹೆಡ್​ ಅಂಡ್​ ನೆಕ್​ ಕ್ಯಾನ್ಸರ್​ನಿಂದಾಗಿ ಜೀವ ಕಳೆದುಕೊಳ್ಳುತ್ತಿರುವ ಪುರುಷರ ಸಂಖ್ಯೆ ಹೆಚ್ಚಿದ್ದು, ಇದಕ್ಕೆ ಧೂಮಪಾನವೇ ಕಾರಣ ಎಂದು ಅಧ್ಯಯನದಿಂದ ಬಹಿರಂಗವಾಗಿದೆ.

Global study reveals devastating impact of tobacco in India
Global study reveals devastating impact of tobacco in India

ಲಂಡನ್​: ಭಾರತ ಸೇರಿದಂತೆ ಇತರ ಆರು ದೇಶಗಳಲ್ಲಿ ಧೂಮಪಾನ ತಂಬಾಕಿನ ಕ್ಯಾನ್ಸರ್​ನಿಂದಾಗಿ ಪ್ರತಿವರ್ಷ 1.3 ಮಿಲಿಯನ್​ ಜನರು ಜೀವನ ಕಳೆದುಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಹೊಸ ಸಂಶೋಧನೆ ಬಯಲು ಮಾಡಿದೆ.

ಯುಕೆ ಕ್ಯಾನ್ಸರ್​ ರಿಸರ್ಚ್​​ ನಡೆಸಿದ ಈ ಅಧ್ಯಯನದಲ್ಲಿ ಭಾರತ, ಇಂಗ್ಲೆಂಡ್​, ಅಮೆರಿಕ​, ಬ್ರೆಜಿಲ್​, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಧೂಮಪಾನದ ಕ್ಯಾನ್ಸರ್​ ಅಪಾಯ ಪ್ರತಿವರ್ಷ ಹೆಚ್ಚಿದೆ. ಇದು ಕ್ಯಾನ್ಸರ್​​ ಅಪಾಯದಲ್ಲಿನ ವಿಶ್ವದ ಅರ್ಧದಷ್ಟು ಹೊರೆ ಹೊಂದಿದೆ ಎಂಬ ಆಘಾತಕಾರಿ ಸುದ್ದಿ ಹೊರ ಹಾಕಿದೆ.

ಧೂಮಪಾನ ಜೊತೆಗೆ ಆಲ್ಕೋಹಾಲ್​, ಅಧಿಕ ತೂಕ ಅಥವಾ ಸ್ಥೂಲಕಾಯ ಹಾಗೂ ಅಥವಾ ಎಚ್​ಐವಿ ಸೋಂಕಿನಿಂದಾಗಿ 2 ಮಿಲಿಯನ್​ ಮಂದಿ ವಾರ್ಷಿಕವಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಐಎಆರ್​ಸಿ ಮತ್ತು ಕ್ವೀನ್​ ಮೇರಿ ಯುನಿವರ್ಸಿಟಿ ಆಫ್​ ಲಂಡನ್​ ಮತ್ತು ಲಂಡನ್​ ಕಿಂಗ್​ ಕಾಲೇಜ್​ನ ಸಂಶೋಧಕರು ತೋರಿಸಿದ್ದಾರೆ.

ಹೆಚ್ಚುತ್ತಿರುವ ಅಪಾಯ: ಕ್ಯಾನ್ಸರ್​ನಿಂದ ಜೀವ ಹಾನಿ ಕುರಿತು ಇಷ್ಟು ವರ್ಷದ ವಿಶ್ಲೇಷಣೆಯಲ್ಲಿ, ನಾಲ್ಕು ತಡೆಗಟ್ಟಬಹುದಾದ ಅಪಾಯದ ಅಂಶಗಳಿಂದ ವರ್ಷಕ್ಕೆ 30 ಮಿಲಿಯನ್​ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ತಂಡ ಕಂಡು ಕೊಂಡಿದೆ. ಧೂಮಪಾನ ತಂಬಾಕು ಇದರಲ್ಲಿ ಹೆಚ್ಚಿನ ದೊಡ್ಡ ಪರಿಣಾಮ ಹೊಂದಿದೆ. ಇದರಿಂದ ವರ್ಷಕ್ಕೆ 10.8 ಮಿಲಿಯನ್​ ಮಂದಿ ಪ್ರತಿ ವರ್ಷ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಜಾಗತಿಕ ಅಧ್ಯಯನದ ಪ್ರಕಾರ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಕ್ಯಾನ್ಸರ್​ ಪ್ರಮಾಣ ಹೆಚ್ಚುತ್ತಿದೆ.

ಹೊಸ ಕ್ಯಾನ್ಸರ್​ ಪ್ರಕರಣ ಶೇ 400ರಷ್ಟು ಹೆಚ್ಚುವ ನಿರೀಕ್ಷೆ ಇದೆ. ಮುಂದಿನ 50 ವರ್ಷದಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಇದರ ಪ್ರಮಾಣ 0.6 ಮಿಲಿಯನ್​ನಿಂದ 3.1 ಮಿಲಿಯನ್​ಗೆ ಹೆಚ್ಚಲಿದೆ. ಇಂಗ್ಲೆಂಡ್​ನಂತಹ ಅಧಿಕ ಆದಾಯ ತರುವ ದೇಶಗಳಲ್ಲಿ ಇದೇ ಅವಧಿಯಲ್ಲಿ ಇದರ ಪ್ರಮಾಣ ಶೇ 50ರಷ್ಟು ಆಗಿದೆ.

ಈ ಸಂಖ್ಯೆಯು ದಿಗ್ಭ್ರಮೆ ಮೂಡಿಸುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಕ್ರಮದ ಅಗತ್ಯತೆ ತೋರಿಸಿದೆ. ತಡೆಗಟ್ಟಬಹುದಾದ ಕ್ಯಾನ್ಸರ್​​ನಿಂದಾಗಿ ಮಿಲಿಯನ್​​​​ಗಟ್ಟಲೇ ಜನರ ಜೀವನ ಉಳಿಸಬಹುದಾಗಿದೆ. ತಂಬಾಕಿನ ವಿರುದ್ಧ ಕೈಗೊಳ್ಳುವ ಕ್ರಮ ದೊಡ್ಡ ಪರಿಣಾಮ ಬೀರಲಿದೆ ಎಂದು ಯುಕೆಯ ಕ್ಯಾನ್ಸರ್​​ ರಿಸರ್ಚ್​ನ ನಿಯಮ ಮತ್ತು ಮಾಹಿತಿಯ ಕಾರ್ಯಕಾರಿ ನಿರ್ದೇಶಕ ಲಾನ್​ ವಾಕರ್​ ತಿಳಿಸಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣ: ಈ ಅಧ್ಯಯನವನ್ನು ಇ-ಕ್ಲಿನಿಕಲ್ ​ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದ ಅನ್ವಯ ಭಾರತದಲ್ಲಿ ಪುರುಷರಲ್ಲಿ ಹೆಡ್​ ಅಂಡ್​ ನೆಕ್​ ಕ್ಯಾನ್ಸರ್​ನಿಂದ ಅಕಾಲಿಕ ಸಾವು ಮತ್ತು ಮಹಿಳೆಯರಲ್ಲಿ ಸ್ತ್ರೀರೋಗದ ಕ್ಯಾನ್ಸರ್​ ಸಾವು ಹೆಚ್ಚಲಿದೆ ಎಂದು ತಿಳಿಸಿದೆ. ಕಾರಣ ಇಂಗ್ಲೆಂಡ್​ ಮತ್ತು ಅಮೆರಿಕದ​ ಬಳಿಕ ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್​ ಪ್ರಕರಣಗಳು ಹೆಚ್ಚಿವೆ. ಭಾರತದಲ್ಲಿ ಎಚ್​ಪಿವಿ ಸೋಂಕಿನಂತಹ ಸ್ತ್ರೀರೋಗದ ಕ್ಯಾನ್ಸರ್​ನಿಂದ ಅಕಾಲಿಕ ಸಾವು ಹೆಚ್ಚಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ ಹೆಡ್​ ಅಂಡ್​ ನೆಕ್​ ಕ್ಯಾನ್ಸರ್​ನಿಂದಾಗಿ ಜೀವ ಕಳೆದುಕೊಳ್ಳುತ್ತಿರುವ ಪುರುಷರ ಸಂಖ್ಯೆ ಹೆಚ್ಚಿದ್ದು, ಇದಕ್ಕೆ ಧೂಮಪಾನ ಕಾರಣವಾಗಿದೆ. ಇನ್ನು ಧೂಮಪಾನದ ಅಭ್ಯಾಸಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಕಾರಣ ತಂಬಾಕಿನ ಉತ್ಪನ್ನಗಳು ವಿಭಿನ್ನವಾಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಅಧ್ಯಯನವು ಲಿಂಗದ ವ್ಯತ್ಯಾಸವನ್ನು ಗುರುತಿಸಿದೆ. ಭಾರತ, ಚೀನಾ ಮತ್ತು ರಷ್ಯಾದಲ್ಲಿ ತಂಬಾಕು ಧೂಮಪಾನ ಮತ್ತು ಆಲ್ಕೋಹಾಲ್​ ಸೇವನೆ ಪುರಷರಿಗಿಂತ ಒಂಬತ್ತು ಪಟ್ಟು ಮಹಿಳೆಯರಲ್ಲಿ ಹೆಚ್ಚಾಗಿದೆ. ಈ ನಡುವೆ ಸ್ಥೂಲಕಾಯ ಮತ್ತು ಎಚ್​ಪಿವಿ ಸೋಂಕು ಕೂಡ ಅನೇಕ ಮಹಿಳೆ ಮತ್ತು ಪುರಷರ ಸಾವಿಗೆ ಕಾರಣವಾಗುತ್ತಿರುವ ಅಂಶಗಳಲ್ಲಿ ಪ್ರಮುಖವಾಗಿದೆ.

ಎಚ್​ಪಿವಿಯ ಸಾವಿನ ದರ ಭಾರತದಲ್ಲಿ ಪುರಷರಿಗಿಂತ ಮಹಿಳೆಯರಲ್ಲಿ11 ಪಟ್ಟು ಹೆಚ್ಚಿದೆ. ಇದು ಗರ್ಭಕಂಠ ಪರಿಶೀಲನೆ ಅಗತ್ಯವನ್ನು ಒತ್ತಿ ಹೇಳಿದ್ದು, ಇದರ ಜೊತೆಗೆ ಎಚ್​ಪಿವಿ ಲಸಿಕೆಯ ಬೇಡಿಕೆ ಹೆಚ್ಚಿಸಿದೆ ಎಂದು ತೋರಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ವಿಶ್ವ ಮಧುಮೇಹ ದಿನ: 25ಕ್ಕಿಂತ ಕಡಿಮೆ ವಯಸ್ಸಿನವರಿಗೂ ಕಾಡುತ್ತಿದೆ ಸಕ್ಕರೆಕಾಯಿಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.