ETV Bharat / sports

ಭಾರತ ತಂಡಕ್ಕೆ ರೈಸಿಂಗ್​ ಸ್ಟಾರ್ ಅಭಿಷೇಕ್​ ಶರ್ಮಾ​ ಕೊಟ್ಟ ಯುವರಾಜ್​ ​: ಯುವಿ ಹೊಗಳಿದ ರೈನಾ - Rising Star Abhishek Sharma

author img

By ETV Bharat Karnataka Team

Published : May 25, 2024, 7:28 PM IST

Suresh Raina on Yuvraj Singh : ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರನ್ನು ಹೊಗಳಿದ್ದಾರೆ. ಅಲ್ಲದೆ, ಯುವ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ರೈಸಿಂಗ್ ಸ್ಟಾರ್ ಎಂದು ಬಣ್ಣಿಸಿದ್ದಾರೆ.

ABHISHEK SHARMA  YUVRAJ SINGH  INDIAN PREMIER LEAGUE
ಯುವರಾಜ್ ಸಿಂಗ್, ಅಭಿಷೇಕ್​ ಶರ್ಮಾ (ಕೃಪೆ: IANS PHOTOS)

ನವದೆಹಲಿ: ಐಪಿಎಲ್ 2024ರ ಕ್ವಾಲಿಫೈಯರ್-2ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಸೀಸನ್​ನಲ್ಲಿ ಹೈದರಾಬಾದ್‌ನ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ತಮ್ಮ ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.

ರಾಜಸ್ಥಾನ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಅವರು ಬ್ಯಾಟ್‌ನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ, ಬೌಲಿಂಗ್​ನಲ್ಲಿ ಅವರು 4 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ತೋರಿದರು. ಪ್ರಮುಖ ವಿಕೆಟ್​ಗಳನ್ನು ಕಬಳಿಸುವ ಮೂಲಕ ಅಭಿಷೇಕ್​ ಶರ್ಮಾ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚಿದ್ದರು.

ಅಭಿಷೇಕ್ ಆಟದ ಬಗ್ಗೆ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಶರ್ಮಾ ಬಗ್ಗೆ ರೈನಾ, ''ಅಭಿಷೇಕ್ ಶರ್ಮಾಗೆ ತರಬೇತಿ ನೀಡುತ್ತಿರುವವರು ಯಾರು ಗೊತ್ತಾ? ಅದು ಯುವರಾಜ್ ಸಿಂಗ್. 2011ರ ವಿಶ್ವಕಪ್‌ನ ಹೀರೋ, ಇದರೊಂದಿಗೆ ಯುವಿ ಭಾರತಕ್ಕೆ ಉದಯೋನ್ಮುಖ ನಕ್ಷತ್ರವನ್ನು ನೀಡಿದ್ದಾರೆ'' ಎಂದು ಹೇಳಿದ್ದಾರೆ. ಆದರೆ, ಮುಂದಿನ ವಾರದಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಭಾರತ ತಂಡದಲ್ಲಿ ರೈಸಿಂಗ್​ ಸ್ಟಾರ್​ ಅಭಿಷೇಕ್ ಶರ್ಮಾ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಎಂದು ರೈನಾ ಬೇಸರ ವ್ಯಕ್ತಪಡಿಸಿದ್ದಾರೆ.

ಯುವರಾಜ್ ಸಿಂಗ್ ಅವರು ಅಭಿಷೇಕ್ ಶರ್ಮಾಗೆ ತರಬೇತಿ ಮತ್ತು ಬೇಕಾಗುವ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಚೆನ್ನೈ ವಿರುದ್ಧದ ಅದ್ಭುತ ಇನ್ನಿಂಗ್ಸ್‌ನ ನಂತರ ಅವರು ಯುವರಾಜ್ ಸಿಂಗ್‌ಗೆ ಧನ್ಯವಾದ ತಿಳಿಸಿದ್ದರು. ಅಭಿಷೇಕ್ ಐಪಿಎಲ್‌ಗೂ ಮುನ್ನ ಯುವರಾಜ್ ಸಿಂಗ್ ಅವರೊಂದಿಗೆ ಸಮಯ ಕಳೆದಿದ್ದರು ಮತ್ತು ಕೆಲವು ಪ್ರಮುಖ ಸಲಹೆಗಳನ್ನು ಪಡೆದಿದ್ದರು. ಅದರ ನಂತರ, ಈ ಸೀಸನ್​ನಲ್ಲಿ ಅಭಿಷೇಕ್ ಶರ್ಮಾ ಅನೇಕ ಅದ್ಭುತ ಇನ್ನಿಂಗ್ಸ್​ಗಳನ್ನು ಆಡಿದ್ದಾರೆ.

ಯುವರಾಜ್ ಸಿಂಗ್ 2011 ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಆ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ 351 ರನ್‌ ಗಳಿಕೆ ಜೊತೆಗೆ 15 ವಿಕೆಟ್​ಗಳನ್ನೂ ಪಡೆದಿದ್ದರು. ಇದರಿಂದಾಗಿ ಯುವಿ ಪಂದ್ಯಾವಳಿಯ ಪುರುಷೋತ್ತಮ ಗೌರವ ಪಡೆದಿದ್ದರಲ್ಲದೆ, ಮಹಾ ಟೂರ್ನಿಯಲ್ಲಿ ನಾಲ್ಕು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

ಓದಿ: ರಾಜಸ್ಥಾನ ಮಣಿಸಿದ ಹೈದರಾಬಾದ್​: ಭಾನುವಾರ ಫೈನಲ್​ ಕದನ - SRH vs RR match

ETV Bharat Logo

Copyright © 2024 Ushodaya Enterprises Pvt. Ltd., All Rights Reserved.