ETV Bharat / health

ಎತ್ತರಕ್ಕೆ ತಕ್ಕಂತೆ ನಿಮ್ಮ ತೂಕ ಎಷ್ಟಿರಬೇಕು? ಆರೋಗ್ಯ ದೃಷ್ಟಿಯಿಂದ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು! - Body Weight According to Height

author img

By ETV Bharat Karnataka Team

Published : May 25, 2024, 7:43 PM IST

ಆರೋಗ್ಯವೇ ಭಾಗ್ಯ ಎನ್ನುವ ನಾಣ್ಣುಡಿಯಿದೆ. ನಮ್ಮಲ್ಲಿ ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಅನಾರೋಗ್ಯ ದೇಹವನ್ನು ಕಾಡುತ್ತಲಿದ್ದರೆ, ಯಾವ ಕೆಲಸವೂ ಅಸಾಧ್ಯ. ಹೀಗಾಗಿ ಆರೋಗ್ಯಕ್ಕೆ ನಾವು ಮೊದಲ ಆದ್ಯತೆ ನೀಡಬೇಕಾಗಿದೆ. ಇನ್ನು ನಿಮ್ಮ ಎತ್ತರ ಮತ್ತು ದೇಹದ ತೂಕ ಎರಡಕ್ಕೂ ಒಂದೊಕ್ಕೊಂದು ಬಿಡಸಲಾರದ ನಂಟ್ಟಿದೆ. ಹಾಗಾದರೆ ಸಾಮಾನ್ಯವಾಗಿ ನಿಮ್ಮ ಎತ್ತರದ ಆಧಾರದ ಮೇಲೆ ನಿಮ್ಮ ತೂಕ ಎಷ್ಟು ಇರಬೇಕು? ಎಂಬ ಮಾಹಿತಿ ತಿಳಿದುಕೊಳ್ಳಬೇಕೆ? ಇಲ್ಲಿ ಗಮನಿಸಬಹುದು.

Body Weight According To Height
ಸಂಗ್ರಹ ಚಿತ್ರ (ETV Bharat)

ಹೈದರಾಬಾದ್: ಇಂದಿನ ಕಾಲಘಟ್ಟದಲ್ಲಿ ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಸವಾಲಿನ ಕೆಲಸವೇ ಸರಿ. ಎಷ್ಟೋ ಜನ ದೇಹದ ಆರೋಗ್ಯವನ್ನು ಬದಿಗಿಡುವ ಮೂಲಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಉದಾಹರಣೆಗಳಿವೆ. ಕಾರಣ ಹಲವರಿಗೆ ಇದರ ಬಗೆಗಿರುವ ಅರಿವಿನ ಕೊರತೆ. ಹೀಗೆ ನಿರ್ಲಕ್ಷ್ಯ ಮಾಡುವ ಎಷ್ಟೋ ಜನ ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆಯಿಂದ (ಬೊಜ್ಜು) ಬಲಿಯಾಗುತ್ತಿರುವ ಮಾಹಿತಿ ಇದೆ. ಹಾಗಾದರೆ ಎತ್ತರಕ್ಕೆ ತಕ್ಕಂತೆ ತೂಕ ಎಷ್ಟಿರಬೇಕು? ಎಂಬ ಮಾಹಿತಿ ಇಲ್ಲಿದೆ.

ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯವಾದ ಅಂಶ. ಇದು ಪ್ರತಿ ವ್ಯಕ್ತಿಯ ದೈಹಿಕ ಸಾಮರ್ಥ್ಯ ಮತ್ತು ಆತನ ಆರೋಗ್ಯದ ಮೇಲೆಯೇ ಅವಲಂಬನೆ ಇರುತ್ತದೆ. ಒಂದು ಸಾರಿ ಸ್ಥೂಲಕಾಯತೆ (ಬೊಜ್ಜು) ಹೆಚ್ಚಾದರೆ ಅದನ್ನು ಕರಗಿಸುವುದು ಬಹಳ ಕಷ್ಟ. ಹಾಗಾಗಿ ಮೊದಲು ಬೊಜ್ಜು ಬರದಂತೆ ನೋಡಿಕೊಳ್ಳಬೇಕು. ಇದೊಂದು ಸವಾಲಿನ ಕೆಲಸವೇ ಸರಿ. ಆದರೆ, ಎತ್ತರಕ್ಕೆ ತಕ್ಕಂತೆ ದೇಹದ ತೂಕ ಬಲು ಮುಖ್ಯ. ಇನ್ನು ಎತ್ತರಕ್ಕೆ ತಕ್ಕಂತೆ ತೂಕ ಎಷ್ಟಿರಬೇಕು? ಯಾವ ಯಾವ ವಯಸ್ಸಿನಲ್ಲಿ ಎಷ್ಟು ಎತ್ತರಬೇಕು? ಆ ಎತ್ತರ ತಕ್ಕಂತೆ ಎಷ್ಟು ದೇಹ ತೂಕ ಹೊಂದಿರಬೇಕು ಎಂಬುದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿವಳಿಕೆಯೇ ಇರುವುದಿಲ್ಲ.

ಮಾಹಿತಿ ಇದ್ದರೆ ಅದನ್ನು ನಿಯಂತ್ರಿಸಲು ಪ್ರಯತ್ನಿಸಬಹುದು. ಇನ್ನು ಮಾಹಿತಿ ಇದ್ದವರೂ ಉದಾಸೀನತೆ ಕೂಡ ತೋರಬಹುದು. ನೀವು ಅಧಿಕ ತೂಕ ಹೊಂದಿದ್ದರೆ, ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಅಂತಲೇ ಅರ್ಥ! ಪುರುಷನಾಗಿರಲಿ ಅಥವಾ ಮಹಿಳೆಯಾಗಿಲಿ ನಿಮ್ಮ ಎತ್ತರಕ್ಕೆ ಅನುಗುಣವಾಗಿ ನಿಮ್ಮ ತೂಕ ಇರಬೇಕು. ಅದು ಹೇಗಿರಬೇಕು, ಎಷ್ಟಿರಬೇಕು ಎಂಬುದರ ಮಾಹಿತಿ ಇಲ್ಲಿದೆ. ಆದರೆ, ಅದಕ್ಕೂ ಮೊದಲು, ಎತ್ತರ ಮತ್ತು ತೂಕದ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳನ್ನು ಗಮನಿಸೋಣ.

ಎತ್ತರ ಮತ್ತು ತೂಕದ ಮೇಲೆ ಪರಿಣಾಮ ಬೀರುವ ಅಂಶಗಳು: ನಿಮ್ಮ ಎತ್ತರ ಮತ್ತು ತೂಕದ ಸಾಮರ್ಥ್ಯವನ್ನು ನಿರ್ಧರಿಸುವಲ್ಲಿ ಜೆನೆಟಿಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಣೆ, ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಗಳು ನಿಮ್ಮ ಎತ್ತರ ಮತ್ತು ತೂಕದ ಮೇಲೆ ಅಧಿಕ ಪರಿಣಾಮ ಬೀರುತ್ತದೆ. ಇದು ಸಹಜ ಕೂಡ ಹೌದು. ನೀವು ಸಮತೋಲಿತ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಹೊಂದಿದ್ದರೆ, ಅದು ದೇಹದ ಬೆಳವಣಿಗೆ ಮತ್ತು ತೂಕದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಲ್ಲದೇ, ಹಾರ್ಮೋನುಗಳ ಸಮಸ್ಯೆಗಳು ಮನುಷ್ಯನ ಎತ್ತರ ಮತ್ತು ತೂಕದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ವಯಸ್ಸಿಗೆ ತಕ್ಕಂತೆ ಬೆಳವಣಿಗೆ: ಸಹಜವಾಗಿ ಮನುಷ್ಯನ ವಯಸ್ಸಿನ ಅನುಗುಣವಾಗಿ ಬೆಳವಣಿಗೆ ಪ್ರಮಾಣ ಹಂತ ಹಂತವಾಗಿ ಬದಲಾಗುತ್ತಾ ಹೋಗುತ್ತದೆ. ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಬೆಳವಣಿಗೆ ಪ್ರಮಾಣ ವೇಗವಾಗಿ ಕಂಡು ಬರುತ್ತದೆ. ಹದಿಹರೆಯದವರೆಗೂ ಅವರ ಬೆಳವಣಿಗೆ ನಿಧಾನವಾಗುತ್ತದೆ. ಈ ವಯಸ್ಸಿನಲ್ಲಿ ಅವರ (ಹೆಣ್ಣು ಅಥವಾ ಗಂಡು) ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಂಭವಿಸಿದರೆ ಬೆಳವಣಿಗೆಯ ವೇಗವು ಮತ್ತಷ್ಟು ಹೆಚ್ಚಾಗುತ್ತದೆ. ಹುಡುಗರು ಮತ್ತು ಹುಡುಗಿಯರಲ್ಲಿ ಪ್ರೌಢಾವಸ್ಥೆ ಸಹಜವಾಗಿ ಬೇರೆ ಬೇರೆ ವಯಸ್ಸಿನಲ್ಲಿ ಕಂಡು ಬರುತ್ತದೆ. ಇದರಿಂದಾಗಿ ಅವರ ಬೆಳವಣಿಗೆಯ ಪ್ರಮಾಣ ಕೂಡ ಬೇರೆ ಬೇರೆ ಆಗಿರುತ್ತದೆ.

ನೀವು ಅಪ್ರಾಪ್ತ ವಯೋಮಾನದಿಂದ ಪ್ರಾಪ್ತ (ವಯಸ್ಕ) ವಯೋಮಾನಕ್ಕೆ ಕಾಲಿಡುತ್ತಿದ್ದಂತೆ ಸಹಜವಾಗಿ ನಿಮ್ಮ ಬೆಳವಣಿಗೆ ತಟಸ್ಥಗೊಳ್ಳುತ್ತದೆ. ಬಳಿಕ ನಿಮ್ಮ ಪೋಷಣೆ, ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯನ್ನು ಅವಲಂಬಿಸಿ ನಿಮ್ಮ ತೂಕ ಹೆಚ್ಚಾಗಲೂಬಹುದು ಅಥವಾ ಕಡಿಮೆಯಾಗಲೂಬಹುದು. ಎರಡೂ ಸಾಧ್ಯತೆ ಉಂಟು. ಹಾಗಾಗಿ ಭಾರತದಲ್ಲಿನ ಸರಾಸರಿ ಎತ್ತರಕ್ಕೆ ಅನುಗುಣವಾಗಿ ಸರಾಸರಿ ತೂಕದ ಬಗ್ಗೆ ಇಲ್ಲಿ ನಾವು ಕೆಲವು ಮಾಹಿತಿಯನ್ನು ನೀಡಿದ್ದೇವೆ. ಆದ್ದರಿಂದ ನೀವು ಆರೋಗ್ಯಕರ ಜೀವನಶೈಲಿಯನ್ನು ಬಯಸಿದರೆ, ಈ ಚಾರ್ಟ್ ಅನ್ನು ಆಧರಿಸಿ ನಿಮ್ಮ ತೂಕವನ್ನು ನೀವು ನಿರ್ಧರಿಸಬೇಕು. ಸದ್ಯಕ್ಕೆ ನೀವು ನಿಮ್ಮ ತೂಕವನ್ನು ಇದರ ಆಧಾರ ಮೇಲೆ ನೋಡಬಹುದು.

ಸಂ.ಎತ್ತರ (ಅಡಿ ಮತ್ತು ಸೆ.ಮೀ)ಪುರುಷರ ತೂಕ (ಕೆ.ಜಿ)ಮಹಿಳೆಯರ ತೂಕ (ಕೆ.ಜಿ)
14.6 ಅಡಿ (137 ಸೆ.ಮೀ)28.5 - 34.9 ಕೆ.ಜಿ28.5 - 34.9 ಕೆ.ಜಿ
24.7 ಅಡಿ (140 ಸೆ.ಮೀ)30.5 - 40.8 ಕೆ.ಜಿ30.8 - 37.6 ಕೆ.ಜಿ
34.8 ಅಡಿ (142 ಸೆ.ಮೀ)33.5 - 40.8 ಕೆ.ಜಿ32.6 - 39.9 ಕೆ.ಜಿ
44.9 ಅಡಿ (145 ಸೆ.ಮೀ)35.8 - 43.9 ಕೆ.ಜಿ34.9 - 42.6 ಕೆ.ಜಿ
54.10 ಅಡಿ (147 ಸೆ.ಮೀ)38.5 - 46.7 ಕೆ.ಜಿ36.4 - 44.9 ಕೆ.ಜಿ
64.11 ಅಡಿ (150 ಸೆ.ಮೀ)40.8 - 49.9 ಕೆ.ಜಿ39 - 47.6 ಕೆ.ಜಿ
75.0 ಅಡಿ (152 ಸೆ.ಮೀ)43.1 - 53 ಕೆ.ಜಿ40.8 - 49.9 ಕೆ.ಜಿ
85.1 ಅಡಿ (155 ಸೆ.ಮೀ)45.8 - 55.8 ಕೆ.ಜಿ43.1 - 52.6 ಕೆ.ಜಿ
95.2 ಅಡಿ (157 ಸೆ.ಮೀ)48.1 - 58.9 ಕೆ.ಜಿ44.9 - 54.9 ಕೆ.ಜಿ
105.3 ಅಡಿ (160 ಸೆ.ಮೀ)50.8 - 61.6 ಕೆ.ಜಿ47.2 - 57.6 ಕೆ.ಜಿ

ಇದನ್ನೂ ಓದಿ: ದೈಹಿಕ ಆರೋಗ್ಯವಷ್ಟೇ ಅಲ್ಲ, ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತವೆ ಈ ಯೋಗಾಸನಗಳು! - yoga asanas enhance beauty

ETV Bharat Logo

Copyright © 2024 Ushodaya Enterprises Pvt. Ltd., All Rights Reserved.