ETV Bharat / health

ದೈಹಿಕ ಆರೋಗ್ಯವಷ್ಟೇ ಅಲ್ಲ, ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತವೆ ಈ ಯೋಗಾಸನಗಳು! - yoga asanas enhance beauty

author img

By ETV Bharat Karnataka Team

Published : May 24, 2024, 4:52 PM IST

ಮುಖದ ರಕ್ತ ಪರಿಚಲನೆ ಹೆಚ್ಚಿಸಲು ಆಸನಗಳು ಸಹಾಯ ಮಾಡುತ್ತವೆ. ಇದರಿಂದ ಮುಖದ ಕಾಂತಿ ಹೆಚ್ಚಿಸಲು ಸಹಾಯವಾಗುತ್ತದೆ.

yoga asanas put some pressure on the facial muscles to enhance beauty
yoga asanas put some pressure on the facial muscles to enhance beauty ((GettyImages))

ಹೈದರಾಬಾದ್​: ಯಾವುದೇ ಸೌಂದರ್ಯವರ್ಧಕ ಉತ್ಪನ್ನಗಳಿಲ್ಲದೇ ಅಂದವಾಗಿ ಕಾಣಿಸುವುದು ಪ್ರತಿಯೊಬ್ಬರ ಇಚ್ಚೆ. ಈ ರೀತಿ ನೈಸರ್ಗಿಕ ತ್ವಚೆಯ ಸೌಂದರ್ಯದ ಆರೈಕೆ ಹಿಂದೆ ಕೆಲವು ವ್ಯಾಯಾಮಗಳು ಕೂಡ ಪರಿಣಾಮ ಬೀರುವುದು ಸುಳ್ಳಲ್ಲ. ಅದರಲ್ಲೂ ಕೆಲವು ಪ್ರಮುಖ ಆಸನ, ನಿರ್ದಿಷ್ಟ ಭಂಗಿ ಮತ್ತು ಪ್ರಾಣಾಯಾಮ ತಂತ್ರಗಳು ರಕ್ತ ಪರಿಚಲನೆ ಹೆಚ್ಚಿಸಿ, ಮುಖದ ಸ್ನಾಯುಗಳ ಅಭಿವೃದ್ದಿಗೆ ಸಹಾಯ ಮಾಡುತ್ತದೆ. ಇದರಿಂದ ಸೌಂದರ್ಯ ಕೂಡ ಹೆಚ್ಚುತ್ತದೆ.

ಈ ಆಸನಗಳು ಮುಖ್ಯ ರಕ್ತಪರಿಚಲನೆ ಹೆಚ್ಚಿಸುತ್ತದೆ. ಮುಖದಲ್ಲಿನ ಹೆಚ್ಚುವರಿ ಕೊಬ್ಬು ಕರಗಿಸಲು ಇದು ಸಹಾಯ ಮಾಡುತ್ತದೆ. ಇದರಿಂದ ದೇಹ ಕೂಡ ಉತ್ತಮ ಅಕಾರ ಪಡೆಯಲು ಸಾಧ್ಯವಾಗುತ್ತದೆ. ಯೋಗವೂ ಆರೋಗ್ಯದ ಜೊತೆಗೆ ಮುಖದ ಕಾಂತಿ ಹೆಚ್ಚಿಸುವಲ್ಲಿ ಉತ್ತಮ ಫಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ. ಮುಖದ ಸೌಂದರ್ಯದ ಕಾಂತಿ ಹೆಚ್ಚಿಸಲು ಸಹಾಯ ಮಾಡುವ ವ್ಯಾಯಾಮಗಳ ಪಟ್ಟಿ ಇಲ್ಲಿದೆ.

ಸಿದ್ದ ನಡಿಗೆ: ಇದು ಸಾಮಾನ್ಯದ ಬದಲಾಗಿ ಕೊಂಚ ವಿಭಿನ್ನ ದಾರಿಯ ನಡಿಗೆಯಾಗಿದೆ. ಈ ನಡಿಗೆಯನ್ನು 8ರ ಆಕೃತಿಯಲ್ಲಿ ಸಾಗಬೇಕು. 8 ನಂಬರ್​ ಬರೆದು ಅಥವಾ ಅದನ್ನೇ ಕಲ್ಪಿಸಿ ಅದರ ಆಕೃತಿಯಲ್ಲಿ ನಡಿಗೆ ರೂಢಿಸಿಕೊಳ್ಳಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನ ಪಡೆಯುವಲ್ಲಿ ಈ ಸಿದ್ದ ನಡಿಗೆ ಪ್ರಮುಖವಾಗಿದೆ. ನಿಯಮಿತವಾಗಿ ಈ ರೀತಿ ಬಿರುಸಾದ ನಡಿಗೆ ರೂಡಿಸಿಕೊಳ್ಳುವುದರಿಂದ ಇದು ಉತ್ತಮ ಫಲಿತಾಂಶ ನೀಡುತ್ತದೆ. ನಿತ್ಯ 20 ರಿಂದ 30 ನಿಮಿಷ ಈ ರೀತಿ ನಡೆಯುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಫಿಟ್​ ಆಗಿರುವ ಜೊತೆ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ.

ಪದ್ಮಾಸನ: ಸೊಂಟವನ್ನು ಬಾಗಿಸಿ ಎರಡು ಕೈಗಳಿಂದ ಕಾಲನ್ನು ಮುಟ್ಟುವ ಈ ಆಸನದಲ್ಲಿ ತಲೆ ನಿಮ್ಮ ಮಂಡಿಯನ್ನು ಮುಟ್ಟಬೇಕು. ದೀರ್ಘವಾಧಿ ಉಸಿರಾಟ ನಡೆಸಬೇಕು. ಇದು ಕೂಡ ಮುಖ, ಕತ್ತು ಸೇರಿದಂತೆ ಒಟ್ಟಾರೆ ದೇಹದಲ್ಲಿ ರಕ್ತ ಪರಿಚಲನೆಗೆ ಸುಧಾರಣೆ ಮಾಡುತ್ತದೆ.

ಧನುರಾಸನ: ದೇಹವನ್ನು ಬಿಲ್ಲಿನಂತೆ ಬಾಗಿಸುವ ಆಸನ ಇದಾಗಿದೆ. ನೆಲದ ಮೇಲೆ ಎದೆತಾಗಿಸಿ ಮಲಗಿ, ಬಳಿಕ ಎರಡು ಕೈ ಮತ್ತು ಕಾಲನ್ನು ಬಾಗಿಸಿ ಹಿಡಿದಿರಬೇಕು. ಈ ರೀತಿ 15 ರಿಂದ 20 ಸೆಕೆಂಡ್​ ಮಾಡುವುದರಿಂದ ದೇಹ ಸಂಪೂರ್ಣವಾಗಿ ವಿಶ್ರಮಿಸುತ್ತದೆ.

ಚಕ್ರಾಸನ: ಇದು ದೇಹವನ್ನು ಸಂಪೂರ್ಣವಾಗಿ ಚಕ್ರದ ಆಕಾರದಲ್ಲಿ ರೂಪಿಸುವುದಾಗಿದೆ. ಬೆನ್ನು ಬಾಗಿಸಿ ಅದನ್ನು ನೆಲದ ಮೇಲೆ ಇಡುವಾಗ ದೇಹದ ಸಂಪೂರ್ಣ ಸ್ನಾಯುಗಳಿಗೆ ಉತ್ತಮಗೊಳ್ಳಲು ಸಹಾಯವಾಗುತ್ತದೆ. ಕುತ್ತಿಗೆಯನ್ನು ಕೆಳಗೆ ಜೋತು ಬಿಡುವುದರಿಂದ ರಕ್ತ ಪರಿಚಲನೆ ಕೂಡ ಹೆಚ್ಚಿ, ಮುಖದ ಆಕರ್ಷಣೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಹಾಲಾಸನ: ಬೆನ್ನಿನ ಮೇಲೆ ಮಲಗಿ ಕೈಗಳನ್ನು ಹಿಂದೆ ಸ್ಟ್ರೆಚ್​ ಮಾಡಿ, ಬಳಿಕ ಕಾಲನ್ನು ನಿಧಾನವಾಗಿ 90 ಡಿಗ್ರಿ ಆಕೃತಿಯಲ್ಲಿ ಎತ್ತಬೇಕು. ಈ ಆಸನದಲ್ಲೂ ಕೂಡ ಮುಖ್ ಸ್ನಾಯುಗಳ ಚಲನೆ ಹೆಚ್ಚಿದ್ದು, ಮುಖದ ಕೊಬ್ಬು ಕರಗಲು ಸಾಧ್ಯವಾಗುತ್ತದೆ.

ಪ್ರಮುಖ ಮಾಹಿತಿ: ಈ ಮೇಲಿನ ಎಲ್ಲ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳನ್ನು ಸಂಶೋಧನೆ ಮತ್ತು ಅಧ್ಯಯನಗಳನ್ನು ಆಧರಿಸಿ ನೀಡಲಾಗಿದೆ. ಆದರೆ, ಇವುಗಳನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಅವಶ್ಯವಾಗಿದೆ.

ಇದನ್ನೂ ಓದಿ: ದಿನಕ್ಕೆ ಇಷ್ಟು ಪ್ರಮಾಣದ ನೀರು ಕುಡಿಯೋದಿಲ್ವ? ಹಾಗಾದ್ರೆ ಈ 5 ಸಲಹೆ ನೆನಪಿರಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.