ETV Bharat / health

ಮನೆ ಸುಲಭವಾಗಿ ಸ್ವಚ್ಛಗೊಳಿಸಬೇಕೆ? ಈ 9 ಸಲಹೆಗಳನ್ನು ಅನುಸರಿಸಿದರೆ ಫುಲ್​ ನೀಟ್​ ಅಂಡ್​​ ಕ್ಲೀನ್​! - Home Clean Tips

author img

By ETV Bharat Karnataka Team

Published : May 24, 2024, 8:14 PM IST

Tips To Keep Home Clean Easy : ಅನೇಕ ಜನರು ಮನೆಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಅಲಂಕರಿಸಲು ಇಷ್ಟಪಡುತ್ತಾರೆ. ನಿಮ್ಮ ಕೆಲಸವನ್ನು ಸುಲಭಗೊಳಿಸಲು ಮತ್ತು ಕಡಿಮೆ ಮಾಡಲು ಇಲ್ಲಿ ಕೆಲವು ಸಲಹೆಗಳಿವೆ.

EASY HOME CLEAN TIPS  TIPS TO KEEP HOME CLEAN EASY  EASY HOME CLEANING SCHEDULE  QUICK EASY HOUSE CLEANING TIPS
ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬೇಕೆ (ಕೃಪೆ: Getty Images)

Tips To Keep Home Clean Easy : ಅನೇಕ ಜನರು ಮನೆಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಅಲಂಕರಿಸಲು ಇಷ್ಟಪಡುತ್ತಾರೆ. ಆದರೆ ಮನೆ ಮತ್ತು ಮನೆಯಲ್ಲಿರುವ ಎಲ್ಲವನ್ನೂ ಹೊಳೆಯುವಂತೆ ಮಾಡುವುದು ಸುಲಭದ ಕೆಲಸವಲ್ಲ. ಬಹಳ ಕಷ್ಟಕರ ಮತ್ತು ಸಮಯ ತೆಗೆದುಕೊಳ್ಳುವ ಕೆಲಸ. ಅದಕ್ಕಿಂತ ಮುಖ್ಯವಾಗಿ ಇಂದಿನ ಬ್ಯುಸಿ ಲೈಫ್ ಸ್ಟೈಲ್​ನಲ್ಲಿ ಎಲ್ಲ ಕೆಲಸಗಳನ್ನು ಒಂದೇ ಬಾರಿಗೆ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಕೆಲವು ಕೆಲಸಗಳನ್ನು ತಕ್ಷಣವೇ ಮಾಡಿ ಪ್ರತ್ಯೇಕವಾಗಿ ಮಾಡಿಕೊಳ್ಳಬೇಕು. ಕಾರ್ಯಗಳನ್ನು ವಿಭಜಿಸಲು, ಯೋಜಿಸಲು, ಮನೆ ಮತ್ತು ಮನೆಯಲ್ಲಿರುವ ವಸ್ತುಗಳನ್ನು ಸುಂದರವಾಗಿ ಆಕರ್ಷಕವಾಗಿಸಲು ನಿಮಗಾಗಿ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

ಹಾಸಿಗೆ ಮಡಿಚಿಟ್ಟುಕೊಳ್ಳಿ: ಕೆಲವು ಅಧ್ಯಯನಗಳ ಪ್ರಕಾರ, ಬೆಳಗ್ಗೆ ತಮ್ಮ ಹಾಸಿಗೆಯನ್ನು ಮಡಿಚಿಡುವ ಜನರು ದಿನವಿಡೀ ಹೆಚ್ಚು ಸಕ್ರಿಯ ಮತ್ತು ಸಂಘಟಿತರಾಗುತ್ತಾರೆ ಎಂದು ತೋರಿಸುತ್ತವೆ. ನೀವು ಎದ್ದಾಗ ಪ್ರತಿದಿನ ನಿಮ್ಮ ಹಾಸಿಗೆಯನ್ನು ಸ್ವಚ್ಛಗೊಳಿಸಿ. ಕೇವಲ ಎರಡು ನಿಮಿಷಗಳಲ್ಲಿ ನೀವು ಮಾಡಬಹುದಾದ ಈ ಕಾರ್ಯವು ನಿಮ್ಮ ಮನೆಯನ್ನು ಯಾವಾಗಲೂ ಸುಂದರವಾಗಿ ಮತ್ತು ಆಕರ್ಷಕವಾಗಿ ಇರಿಸಲು ಸಹಾಯ ಮಾಡುತ್ತದೆ.

ಬಟ್ಟೆ ಒಗೆಯುವುದು: ನಿಮ್ಮ ವಾರಾಂತ್ಯದ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನೆಯನ್ನು ಅಚ್ಚುಕಟ್ಟಾಗಿ ಕಾಣುವಂತೆ ಮಾಡಲು ನೀವು ವಾರಕ್ಕೆ ಎರಡು ಬಾರಿಯಾದ್ರೂ ಬಟ್ಟೆ ಒಗೆಯಬೇಕು. ಕಾಲಕಾಲಕ್ಕೆ ಬಟ್ಟೆ ಒಗೆಯುವುದರಿಂದ ಮನೆ ಸ್ವಚ್ಛವಾಗಿಯೂ ಇರುತ್ತೆ ಮತ್ತು ನಿಮಗೆ ವಾರಾಂತ್ಯದ ವಿಶ್ರಾಂತಿಯೂ ನೀಡುತ್ತದೆ.

ಅಡುಗೆ ಮನೆ: ಅಡುಗೆಮನೆ ಇಡೀ ಮನೆಯಲ್ಲಿ ಹೆಚ್ಚಾಗಿ ಬಳಸುವ ಸ್ಥಳಗಳಲ್ಲಿ ಒಂದಾಗಿದೆ. ಗೊಂದಲಮಯವಾದ ಅಡುಗೆ ಮತ್ತು ನಾವು ಮಾಡುವ ಅಡುಗೆ ಕೆಲಸಗಳು ಕೋಣೆಯನ್ನು ಗಲೀಜು ಮತ್ತು ಅಶುದ್ಧವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ಸ್ವಲ್ಪ ಸಮಯ ಸಿಕ್ಕರೂ ಅಡುಗೆ ಮನೆಯನ್ನು ಒರೆಸಿ, ಪಾತ್ರೆಗಳನ್ನು ತೊಳೆದು, ಕೋಣೆಯನ್ನು ಗುಡಿಸಿ ಸ್ವಚ್ಛಗೊಳಿಸಬೇಕು.

ಡೈನಿಂಗ್ ಟೇಬಲ್: ಎಲ್ಲರೂ ಊಟ ಮಾಡಿ ಮುಗಿಸಿದಾಗ ಮೊದಲು ಡೈನಿಂಗ್ ಟೇಬಲ್ ಅನ್ನು ಕ್ಲೀನ್ ಮಾಡಲು ಮರೆಯಬೇಡಿ. ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಪಾತ್ರೆಗಳಲ್ಲಿ ತೆಗೆದಿಟ್ಟು ಮೇಜಿನ ಮೇಲೆ ನೀಟಾಗಿ ಜೋಡಿಸಿದರೆ ಸಾಕು ಇಡೀ ಮನೆ ಸ್ವಚ್ಛವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತದೆ. ಇದಲ್ಲದೇ, ಮೇಜಿನ ಮೇಲೆ ಆಹಾರ ಸೋರಿಕೆಯಿಂದ ಬ್ಯಾಕ್ಟೀರಿಯಾವನ್ನು ತಡೆಯುತ್ತದೆ.

ಸಲಕರಣೆಗಳನ್ನು ಸ್ವಚ್ಛಗೊಳಿಸಿ: ಇದೊಂದು ದೊಡ್ಡ ಕೆಲಸ ಎಂದೇ ಹೇಳಬಹುದು. ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ಮಿಕ್ಸರ್, ಮೈಕ್ರೋವೇವ್ ಮುಂತಾದ ವಸ್ತುಗಳನ್ನು ಪ್ರತಿ ವಾರ ಸ್ವಚ್ಛಗೊಳಿಸಲು ಸಮಯ ಇರುವುದಿಲ್ಲ. ಆದರೆ ಇವುಗಳನ್ನು ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಇಡಬೇಕು. ಹಾಗಾಗಿ ತಿಂಗಳಲ್ಲಿ ಒಂದು ದಿನ ಅವುಗಳನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಬೇಕು.

ಬಟ್ಟೆಯ ಅಲ್ಮಾರ: ಸೀಸನ್ ಬದಲಾದಂತೆ ಅಲ್ಮಾರದಲ್ಲಿರುವ ಬಟ್ಟೆಗಳು ಬದಲಾಗಬೇಕು. ನಾವು ಧರಿಸುವ ಬಟ್ಟೆಯನ್ನು ಹವಾಮಾನಕ್ಕೆ ಅನುಗುಣವಾಗಿ ಬದಲಾಯಿಸದಿದ್ದರೆ, ನಮಗೆ ಅನಾನುಕೂಲ ಮತ್ತು ಉಸಿರುಕಟ್ಟುವಿಕೆ ಉಂಟಾಗುತ್ತದೆ. ಹಾಗಾಗಿ ಎರಡು ಮೂರು ತಿಂಗಳಿಗೊಮ್ಮೆಯಾದರೂ ಬಟ್ಟೆಯ ಕಪಾಟನ್ನು ಗುಡಿಸಿ ಸ್ವಚ್ಛಗೊಳಿಸಿ ಮುಂದಿನ ಸೀಸನ್​ಗೆ ತಕ್ಕಂತೆ ಬಟ್ಟೆ ಜೋಡಿಸಬೇಕು.

ಹಾಸಿಗೆ ಕ್ಲೀನ್​: ದಿಂಬುಗಳು, ರಗ್ಗುಗಳು ಮತ್ತು ಕಂಬಳಿಗಳ ಮೇಲೆ ಆದಷ್ಟುಬೇಗ ಕೊಳೆಯಾಗುತ್ತವೆ. ಆದ್ದರಿಂದ ನೀವು ಆಗಾಗ್ಗೆ ಬಳಸುವ ಶಾಲುಗಳನ್ನು ಮತ್ತು ರಗ್ಗುಗಳನ್ನು ವಾರಕ್ಕೊಮ್ಮೆ ತೊಳೆಯಲು ಮರೆಯದಿರಿ ಮತ್ತು ಅವುಗಳನ್ನು ಸಂಪೂರ್ಣವಾಗಿ ಒಣಗಲು ಬಿಡಿ. ಅದರ ನಂತರ, ಮನೆಯನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಯಾವಾಗಲೂ ಸುವಾಸನೆ ಮತ್ತು ಸುಂದರವಾಗಿರುತ್ತದೆ. ಇದು ನಿಮಗೆ ಆರಾಮವಾಗಿ ಮತ್ತು ಶಾಂತಿಯುತವಾಗಿ ಮಲಗಲು ಸಹಾಯ ಮಾಡುತ್ತದೆ.

ಕಸ ಎಸೆಯುವುದು: ಕಸದ ಪುಟ್ಟಿ ತುಂಬಿದ್ರೂ ಸಹ ಆ ಕಸವನ್ನು ಎಸೆಯುದೇ ಇರುವುದು ಹಲವರ ಅಭ್ಯಾಸ. ಆದರೆ ಇದು ಒಳ್ಳೆಯದಲ್ಲ. ಮನೆಯಲ್ಲಿ ಹೆಚ್ಚು ದಿನ ಕಸ ಇಡುವುದರಿಂದ ಮನೆಯಲ್ಲಿ ದುರ್ವಾಸನೆ ಉಂಟಾಗಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಉಪ್ಪು ನೀರಿನಿಂದ ಕೊಠಡಿಗಳನ್ನು ಸ್ವಚ್ಛಗೊಳಿಸಿ: ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಣಲು ಪ್ರತಿ ವಾರ ನೀವು ಮಾಡಬೇಕಾದ ಮತ್ತೊಂದು ಕೆಲಸವಿದು.. ಸ್ವಲ್ಪ ಉಪ್ಪು ಹಾಕಿದ ಬೆಚ್ಚಗಿನ ನೀರನ್ನು ಮನೆಯಾದ್ಯಂತ ತೊಳೆಯಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕತೆಯೂ ದೂರವಾಗುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ.

ನಿಮ್ಮ ಗಮನಕ್ಕೆ: ಈ ವೆಬ್‌ಸೈಟ್‌ನಲ್ಲಿ ನಿಮಗೆ ಒದಗಿಸಲಾದ ಎಲ್ಲಾ ಮಾಹಿತಿ ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ.

ಓದಿ: ದೈಹಿಕ ಆರೋಗ್ಯವಷ್ಟೇ ಅಲ್ಲ, ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತವೆ ಈ ಯೋಗಾಸನಗಳು! - yoga asanas enhance beauty

ETV Bharat Logo

Copyright © 2024 Ushodaya Enterprises Pvt. Ltd., All Rights Reserved.