ETV Bharat / state

ನಸುಕಿನ ಜಾವ ಸ್ನೇಹಿತೆಯೊಂದಿಗೆ ಬೈಕ್​ನಲ್ಲಿ ಪ್ರಯಾಣ​.. ಮರಕ್ಕೆ ಡಿಕ್ಕಿ ಹೊಡೆದು ಇಬ್ಬರೂ ಸಾವು!

author img

By

Published : Jun 3, 2022, 2:42 PM IST

Two members died in Bengaluru road accident, Rider dead over Bike collided with tree in Bengaluru, Bengaluru accident news, ಬೆಂಗಳೂರು ರಸ್ತೆ ಅಪಘಾತದಲ್ಲಿ ಇಬ್ಬರು ಸಾವು, ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರರು ಸಾವು, ಬೆಂಗಳೂರು ಅಪಘಾತ ಸುದ್ದಿ,
ಮರಕ್ಕೆ ಡಿಕ್ಕಿ ಹೊಡೆದು ಇಬ್ಬರೂ ಸಾವು

ನಸನುಕಿನ ಜಾವದಲ್ಲಿ ಯುವಕನೊಬ್ಬ ತನ್ನ ಸ್ನೇಹಿತೆಯೊಂದಿಗೆ ಪ್ರಯಾಣಿಸುತ್ತಿದ್ದ ಬೈಕ್​ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಬೈಕ್​ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತರು ಮಾರತಹಳ್ಳಿ ಮೂಲದ ಗಗನ್ ದೀಪ್ ಹಾಗೂ ಬನಶಂಕರಿ ಮೂಲದ ಯಶಸ್ವಿನಿ ಎಂದು ಗುರುತಿಸಲಾಗಿದೆ.

Two members died in Bengaluru road accident, Rider dead over Bike collided with tree in Bengaluru, Bengaluru accident news, ಬೆಂಗಳೂರು ರಸ್ತೆ ಅಪಘಾತದಲ್ಲಿ ಇಬ್ಬರು ಸಾವು, ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರರು ಸಾವು, ಬೆಂಗಳೂರು ಅಪಘಾತ ಸುದ್ದಿ,
ನಸುಕಿನ ಜಾವ ಸ್ನೇಹಿತೆಯೊಂದಿಗೆ ಬೈಕ್​ನಲ್ಲಿ ಜಾಲಿ ರೈಡ್

ಓದಿ: ಗೋವಾದಲ್ಲಿ ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ.. ಹೊತ್ತಿ ಉರಿದ ಬಸ್​, 7 ಜನ ಸಜೀವ ದಹನ‌ ಶಂಕೆ!

ಸರ್ಜಾಪುರದ ಪ್ರೆಸ್ಟೀಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಗನ್​ ದೀಪ್​ ಇಂದು ಬೆಳಗ್ಗೆ ತನ್ನ ಸ್ನೇಹಿತೆ ಯಶಸ್ವಿನಿ ಜೊತೆ ಬೈಕ್​ನಲ್ಲಿ ತೆರಳಿದ್ದಾರೆ. ನಸುಕಿನ ಜಾವ 3 ಗಂಟೆಗೆ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಬೈಕ್​ನ ನಿಯಂತ್ರಣ ಕಳೆದುಕೊಂಡ ಗಗನ್​ ದೀಪ್​ ನೇರ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬೈಕ್​​ ನಜ್ಜುಗುಜ್ಜಾಗಿದೆ.

ಓದಿ: ಕಾಪಾಡಿ... ಕಾಪಾಡಿ ಎಂಬ ಚೀರಾಟ: ಕಲಬುರಗಿ ಬಸ್​​ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾತು

ಅತೀ ವೇಗದಿಂದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಗನ್​ ದೀಪ್​ ತಲೆ ಸೀಳಿದೆ. ಇನ್ನು ಯಶಸ್ವಿನಿಗೆ ತಲೆ ಸೇರಿದಂತೆ ಇನ್ನಿತರ ಮೈ - ಕೈಗೆ ಪೆಟ್ಟಾಗಿತ್ತು. ಆದರೆ ಹೆಚ್ಚು ಹೊತ್ತು ಬದುಕುಳಿಯದ ಅವರಿಬ್ಬರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

Two members died in Bengaluru road accident, Rider dead over Bike collided with tree in Bengaluru, Bengaluru accident news, ಬೆಂಗಳೂರು ರಸ್ತೆ ಅಪಘಾತದಲ್ಲಿ ಇಬ್ಬರು ಸಾವು, ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರರು ಸಾವು, ಬೆಂಗಳೂರು ಅಪಘಾತ ಸುದ್ದಿ,
ನಸುಕಿನ ಜಾವ ಸ್ನೇಹಿತೆಯೊಂದಿಗೆ ಬೈಕ್​ನಲ್ಲಿ ಜಾಲಿ ರೈಡ್

ಓದಿ: ಬೀಳಗಿ ಬಳಿ ನಿಂತಿದ್ದ ಕ್ಯಾಂಟರ್​ಗೆ ವಾಹನ ಡಿಕ್ಕಿ : ನಾಲ್ವರು ಸ್ಥಳದಲ್ಲೇ ದುರ್ಮರಣ

ಸುದ್ದಿ ತಿಳಿಯುತ್ತಿದ್ದಂತೆ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.