ETV Bharat / spiritual

ನಿಮ್ಮ ಅಂಗೈಯಲ್ಲೂ ಈ ತರಹದ ಗುರುತುಗಳಿವೆಯೇ?: ಇವುಗಳಿದ್ದರೆ ಏನಾಗುತ್ತದೆ ಗೊತ್ತಾ? ಒಮ್ಮೆ ಚೆಕ್​ ಮಾಡಿಕೊಂಡು ಬಿಡಿ! - Lucky Signs in Palmistry

author img

By ETV Bharat Karnataka Team

Published : May 16, 2024, 6:00 PM IST

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈಯಲ್ಲಿರುವ ರೇಖೆಗಳ ಬಗ್ಗೆ ವಿವರಿಸಲಾಗಿದೆ. ಅಂಗೈಯಲ್ಲಿ ಇರುವ ಈ ತರಹದ ರೇಖೆಗಳು ಜೀವನವನ್ನು ನಿರ್ದೇಶಿಸುತ್ತವೆ ಎಂಬುದು ಹಲವರ ನಂಬಿಕೆ ಆಗಿದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಜೀವನ ರೇಖೆ, ಅದೃಷ್ಟ ರೇಖೆ, ವಿವಾಹ ರೇಖೆ, ಹೃದಯ ರೇಖೆ ಮುಂತಾದ ರೇಖೆಗಳಿವೆ. ಆದಾಗ್ಯೂ ಇವುಗಳು ಮಾತ್ರವಲ್ಲದೇ ಇನ್ನೂ ಕೆಲವು ಚಿಹ್ನೆಗಳು ಇವೆ. ಹಲವು ರೇಖೆಗಳನ್ನು ಹೊಂದಿರುವವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸುತ್ತವೆ ಎನ್ನುವುದು ಶಾಸ್ತ್ರಜ್ಞರ ಆಂಬೋಣವಾಗಿದೆ.

Etv Bharat
Etv Bharat (Etv Bharat)

ಹಸ್ತಸಾಮುದ್ರಿಕ ಶಾಸ್ತ್ರ. ದೇಶದಲ್ಲಿ ಜನಜನಿತವಾದ ಭವಿಷ್ಯಶಾಸ್ತ್ರವಾಗಿದೆ. ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಜೀವನಕ್ಕೆ ಸಂಬಂಧಿಸಿವೆ ಎನ್ನುವುದು ಹಸ್ತಮುದ್ರಿಕ ಶಾಸ್ತ್ರರ ಹೇಳಿಕೆಯಾಗಿದೆ. ಅಂದ ಹಾಗೆ ನಮ್ಮ ಅಂಗೈ ಮೇಲಿನ ರೇಖೆಗಳು ಮತ್ತು ಗುರುತುಗಳು ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತವೆ, ಹೀಗಂತ ಬಹುತೇಕರು ಇದನ್ನು ನಂಬುತ್ತಾರೆ ಕೂಡಾ. ಅದೇನೇ ಇರಲಿ, ಕೈಯಲ್ಲಿ ಐದು ಗುರುತುಗಳಿದ್ದರೆ ಅಂತಹವರು ಜೀವನದಲ್ಲಿ ಪವಾಡಗಳನ್ನು ಕಾಣುತ್ತೀರಿ ಎನ್ನುತ್ತಾರೆ ಹಸ್ತಸಾಮುದ್ರಿಕ ಪರಿಣತರು.

ದೇವಾಲಯ: ಅಂಗೈಯಲ್ಲಿ ದೇವಾಲಯದ ಚಿಹ್ನೆಯನ್ನು ಹೊಂದಿರುವವರ ಜೀವನವು ತುಂಬಾ ಮಂಗಳಕರವಾಗಿರುತ್ತದೆ ಎನ್ನುತ್ತದೆ ಶಾಸ್ತ್ರ. ಇದು ಬಹಳ ಅಪರೂಪದ ಸಂಕೇತವಾಗಿದೆ. ಈ ಚಿಹ್ನೆಯು ಜ್ಞಾನವನ್ನು ಪ್ರತಿನಿಧಿಸುತ್ತದೆ, ವಿಶೇಷವಾಗಿ ಆಧ್ಯಾತ್ಮಿಕ ಜ್ಞಾನ. ಈ ಚಿಹ್ನೆಯು ಜೀವನದಲ್ಲಿ ಉನ್ನತ ಮಟ್ಟವನ್ನು ಸೂಚಿಸುತ್ತದೆ ಎಂದು ಹಸ್ತಸಾಮುದ್ರಿಕ ತಜ್ಞರು ಹೇಳುತ್ತಾರೆ. ಈ ರಾಶಿಯವರಿಗೆ ಅದೃಷ್ಟ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. ದೇವಾಲಯದ ಚಿಹ್ನೆ ಹೇಗಿರಬೇಕು.. ಸ್ಪಷ್ಟವಾಗಿ ಕಾಣುವ ಗುಮ್ಮಟದ ಆಕಾರದಲ್ಲಿರಬೇಕು. ಅಲ್ಲದೇ ಈ ಚಿಹ್ನೆಯ ಒಳಗೆ ಯಾವುದೇ ಗುರುತುಗಳು ಅಥವಾ ಗೆರೆಗಳು ಇರಬಾರದು ಎಂಬುದನ್ನು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ತ್ರಿಶೂಲ: ಈ ಚಿಹ್ನೆಯು ಶಿವನ ಸಂಕೇತ ಅಂತಲೇ ನಂಬಲಾಗಿದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ತ್ರಿಶೂಲ ಚಿಹ್ನೆ ಇರುವವರು, ಆ ಮಹಾದೇವನ ಕೃಪೆಗೆ ಪಾತ್ರರಾಗುತ್ತಾರೆ ಎಂದು ಬಲವಾಗಿ ನಂಬಲಾಗಿದೆ. ಅಷ್ಟೇ ಅಲ್ಲದೇ, ಈ ಚಿಹ್ನೆಯನ್ನು ಹೊಂದಿರುವವರು ಸಮಾಜದಲ್ಲಿ ಗೌರವ ಮತ್ತು ಶ್ರೀಮಂತರಾಗಿರುತ್ತಾರೆ ಎನ್ನುವ ಮಾತಿದೆ. ಅದೃಷ್ಟವೂ ಕೂಡಿ ಬರುತ್ತದೆ ಎಂಬುದು ನಂಬಿಕೆ. ತ್ರಿಶೂಲವನ್ನು ಹೊಂದಿರುವ ಜನರು ಜೀವನದಲ್ಲಿ ಯಾವುದೇ ದೊಡ್ಡ ತೊಂದರೆಗಳನ್ನು ಎದುರಿಸುವುದಿಲ್ಲ ಮತ್ತು ಯಾವಾಗಲೂ ಸಂತೋಷವಾಗಿರುತ್ತಾರೆ ಎಂಬುದು ಹಸ್ತಮುದ್ರಿಕಾ ಶಾಸ್ತ್ರಜ್ಞರ ಹೇಳಿಕೆಯಾಗಿದೆ. ಅದಕ್ಕಾಗಿಯೇ ಹಸ್ತಸಾಮುದ್ರಿಕ ತಜ್ಞರು ಈ ಚಿಹ್ನೆಯನ್ನು ಮನಸ್ಸಿನಲ್ಲಿ ತೃಪ್ತಿ, ಸಂತೋಷ ಮತ್ತು ಸಂಪತ್ತಿನ ಸಂಕೇತ ಎಂದು ಕರೆಯುತ್ತಾರೆ. ಈ ಗುರುತಿನ ಒಳಗೆ ಯಾವುದೇ ಗೆರೆಗಳು ಅಥವಾ ಗುರುತುಗಳು ಇರಬಾರದು.

ಮಿಸ್ಟಿಕ್ ಕ್ರಾಸ್( ಅತೀಂದ್ರಿಯ ಸಾಮರ್ಧ್ಯ): ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಕಂಡುಬರುವ ಮಿಸ್ಟಿಕ್ ಕ್ರಾಸ್ ಚಿಹ್ನೆಯು ಅತ್ಯಂತ ಅಪರೂಪದ ಮತ್ತು ಮಂಗಳಕರ ಚಿಹ್ನೆ ಎಂದು ಹೇಳಲಾಗುತ್ತದೆ. ಈ ಚಿಹ್ನೆಯು ತಲೆ ರೇಖೆ ಮತ್ತು ಹೃದಯ ರೇಖೆಯ ನಡುವೆ ಕಾಣಿಸಿಕೊಳ್ಳುತ್ತದೆ. ಮಿಸ್ಟಿಕ್ ಕ್ರಾಸ್ ಚಿಹ್ನೆಯನ್ನು ಹೊಂದಿರುವ ಜನರು ಉತ್ತಮ ಆಧ್ಯಾತ್ಮಿಕ ಸ್ವಭಾವ ಮತ್ತು ಒಳನೋಟವನ್ನು ಹೊಂದಿರುತ್ತಾರೆ ಎಂದು ಹಸ್ತಸಾಮುದ್ರಿಕ ತಜ್ಞರು ಹೇಳುತ್ತಾರೆ. ಅಲ್ಲದೆ, ಈ ಮುದ್ರಿಕೆ ಹೊಂದಿರುವವರು ಸಾಮಾನ್ಯವಾಗಿ ಇತರರಿಗಿಂತ ಹೆಚ್ಚಿನ ಜ್ಞಾನ ಇರುತ್ತದೆ. ಆದಾಗ್ಯೂ, ಈ ಎರಡು ಸಾಲುಗಳು ಪರಸ್ಪರ ಸಮಾನಾಂತರವಾಗಿರುತ್ತವೆ ಎಂಬುದನ್ನು ನೀವು ಗಮನಿಸಬೇಕು.

ನಕ್ಷತ್ರ: ಸಾಮಾನ್ಯವಾಗಿ ಪರ್ವತಗಳು ಎಂದು ಕರೆಯಲ್ಪಡುವ ಪ್ರದೇಶಗಳು ಅಂಗೈಯಲ್ಲಿ ಕಂಡುಬರುತ್ತವೆ. ಈ ಬೆಟ್ಟಗಳ ಮೇಲೆ ಕಂಡುಬರುವ ವಿವಿಧ ನಕ್ಷತ್ರ ಚಿಹ್ನೆಗಳು ಅದೃಷ್ಟ ಅಥವಾ ದುರದೃಷ್ಟಗಳನ್ನು ಪ್ರತಿನಿಧಿಸುತ್ತವೆ. ಆದಾಗ್ಯೂ, ನಕ್ಷತ್ರ ಚಿಹ್ನೆಯ ಐದು ಅಥವಾ ಹೆಚ್ಚಿನ ಸಾಲುಗಳು ಸೂರ್ಯನ ಪರ್ವತದಲ್ಲಿ ಕಾಣಿಸಿಕೊಂಡರೆ, ಅದು ತುಂಬಾ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಹಸ್ತಸಾಮುದ್ರಿಕ ತಜ್ಞರು ತಮ್ಮ ಅಂಗೈಯಲ್ಲಿ ಈ ಸಂಯೋಜನೆಯನ್ನು ಹೊಂದಿರುವ ಜನರು ಅನಿರೀಕ್ಷಿತವಾಗಿ ಅದೇ ಸಮಯದಲ್ಲಿ ಖ್ಯಾತಿ, ಸಂಪತ್ತು ಮತ್ತು ಯಶಸ್ಸನ್ನು ಸಾಧಿಸುತ್ತಾರೆ ಎಂದು ಹೇಳುತ್ತಾರೆ.

ಮನಿ ಟ್ರಯಾಂಗಲ್​​: ಅಂಗೈಯಲ್ಲಿರುವ ಹಣದ ತ್ರಿಕೋನ ಚಿಹ್ನೆಯು ಕಿರುಬೆರಳು ಮತ್ತು ಉಂಗುರದ ಬೆರಳಿನ ಕೆಳಗಿರುವ ರೇಖೆಗಳಿಂದ ರೂಪುಗೊಳ್ಳುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಈ ಚಿಹ್ನೆಯನ್ನು ಸಂಪತ್ತು ಮತ್ತು ಆರ್ಥಿಕ ಯಶಸ್ಸಿನ ಸಂಕೇತವೆಂದು ಹೇಳಲಾಗುತ್ತದೆ. ಈ ಚಿಹ್ನೆಯು ಹೆಚ್ಚಾಗಿ ಶ್ರೀಮಂತರ ಅಂಗೈಗಳಲ್ಲಿ ಕಂಡು ಬರುತ್ತದೆ ಎಂದು ನಂಬಲಾಗಿದೆ.

ಓದುಗರ ಗಮನಕ್ಕೆ: ಮೇಲಿನ ವಿವರಗಳನ್ನು ಕೆಲವು ಹಸ್ತಸಾಮುದ್ರಿಕ ತಜ್ಞರು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಅಂಶಗಳ ಆಧಾರದ ಮೇಲೆ ನೀಡಲಾಗಿದೆ. ಆದರೆ ಇದ್ಯಾವುದಕ್ಕೂ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. ನಂಬಿಕೆಗಳು ಅವರವರಿಗೆ ಬಿಟ್ಟದ್ದು, ನಾವಿಲ್ಲ ಯಾವುದೇ ಮೂಢನಂಬಿಕೆಯನ್ನು ಪ್ರಸ್ತುತ ಪಡಿಸುತ್ತಿಲ್ಲ. ಶಾಸ್ತ್ರದಲ್ಲಿ ಹೇಳಿರುವುದನ್ನು ತಿಳಿಸುವ ಭಾಗವಷ್ಟೇ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.