ETV Bharat / technology

6,000mAh ಬ್ಯಾಟರಿಯ ಐಕ್ಯೂ Z9x ಸ್ಮಾರ್ಟ್​ಫೋನ್ ಬಿಡುಗಡೆ: ಕೇವಲ 12,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯ - IQOO PHONE JUST STARTING RS 13K

author img

By ETV Bharat Karnataka Team

Published : May 16, 2024, 8:05 PM IST

6,000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಝಡ್ 9ಎಕ್ಸ್​ ಸ್ಮಾರ್ಟ್​ಫೋನ್​ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ.

6,000mAh ಬ್ಯಾಟರಿಯ ಐಕ್ಯೂ ಸ್ಮಾರ್ಟ್​ಫೋನ್ ಬಿಡುಗಡೆ
6,000mAh ಬ್ಯಾಟರಿಯ ಐಕ್ಯೂ ಸ್ಮಾರ್ಟ್​ಫೋನ್ ಬಿಡುಗಡೆ (ians)

ನವದೆಹಲಿ : ದೇಶದ ಪ್ರಮುಖ ಸ್ಮಾರ್ಟ್​ಪೋನ್ ಬ್ರಾಂಡ್ ಐಕ್ಯೂ (iQOO) ಗುರುವಾರ ತನ್ನ ಝಡ್ ಸರಣಿಯ 6,000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಝಡ್ 9ಎಕ್ಸ್​ (Z9x) ಹೆಸರಿನ ಹೊಸ ಸ್ಮಾರ್ಟ್​ಫೋನ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

4ಜಿಬಿ +128 ಜಿಬಿ ಮಾದರಿಗೆ 12,999 ರೂ (ಪರಿಣಾಮಕಾರಿ ಬೆಲೆ - 11,999 ರೂ.), 6 ಜಿಬಿ + 128 ಜಿಬಿ ಮಾದರಿಗೆ 14,499 ರೂ.(ಪರಿಣಾಮಕಾರಿ ಬೆಲೆ - 12,999 ರೂ.) ಮತ್ತು 8 ಜಿಬಿ + 128 ಜಿಬಿ ಮಾದರಿಗೆ 15,999 ರೂ. (ಪರಿಣಾಮಕಾರಿ ಬೆಲೆ - 14,499 ರೂ.) ಬೆಲೆ ಶ್ರೇಣಿಗಳ ಈ ಹೊಸ ಸ್ಮಾರ್ಟ್​ಫೋನ್ ಮೇ 2 ರಿಂದ ಅಮೆಜಾನ್ ಮತ್ತು ಐಕ್ಯೂ ಇ-ಸ್ಟೋರ್​ಗಳಲ್ಲಿ ಖರೀದಿಗೆ ಲಭ್ಯವಿದೆ. ಟೊರ್ನಾಡೊ ಗ್ರೀನ್ ಮತ್ತು ಸ್ಟಾರ್ಮ್ ಗ್ರೇ ವರ್ಣಗಳಲ್ಲಿ ಹೊಸ ಸ್ಮಾರ್ಟ್​​ಫೋನ್ ಸಿಗಲಿದೆ.

"ಐಕ್ಯೂ ಝಡ್ 9 ಎಕ್ಸ್ ನಯವಾದ 7.99 ಎಂಎಂ ವಿನ್ಯಾಸದೊಂದಿಗೆ, ಶಕ್ತಿಯುತ 6000 ಎಂಎಎಚ್ ಬ್ಯಾಟರಿ ಹೊಂದಿದೆ. ಇದು ನಮ್ಮ ಡೈನಾಮಿಕ್ ಜೆನ್ ಝಡ್ ಬಳಕೆದಾರರ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುತ್ತದೆ. ಸತತ ಪ್ರಯಾಣದಲ್ಲಿರುವವರಿಗಾಗಿ ವಿನ್ಯಾಸಗೊಳಿಸಲಾದ ಈ ಫೋನ್​ನ ಬ್ಯಾಟರಿ ಪೂರ್ಣ ದಿನ ಬಾಳಿಕೆ ಬರುತ್ತದೆ." ಎಂದು ಐಕ್ಯೂ ಸಿಇಒ ನಿಪುಣ್ ಮರ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐಕ್ಯೂ ಝಡ್ 9 ಎಕ್ಸ್ 6.72 ಇಂಚಿನ ಅಲ್ಟ್ರಾ ಬ್ರೈಟ್ 120 ಹೆರ್ಟ್ಜ್ ಅಡಾಪ್ಟಿವ್ ಡಿಸ್ ಪ್ಲೇ ಹೊಂದಿದ್ದು, ಡ್ಯುಯಲ್ ಸ್ಟಿರಿಯೊ ಸ್ಪೀಕರ್​ಗಳೊಂದಿಗೆ ಬಳಕೆದಾರರಿಗೆ ಇಮ್ಮರ್ಸಿವ್ ಆಡಿಯೊ ವಿಶುವಲ್ ಅನುಭವವನ್ನು ನೀಡುತ್ತದೆ. ಹೊಸ ಸ್ಮಾರ್ಟ್​ಪೋನ್ 50 ಎಂಪಿ ಎಐ ಹಿಂಭಾಗದ ಕ್ಯಾಮೆರಾ ಹೊಂದಿದ್ದು, ಈ ಪ್ರಭಾವಶಾಲಿ ಕ್ಯಾಮೆರಾ ಮೂಲಕ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಹುದು. ಹೆಚ್ಚುವರಿಯಾಗಿ ಇದು 2 ಎಂಪಿ ಬೊಕೆ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಐಕ್ಯೂಒ ಝಡ್ 9 ಎಕ್ಸ್ 16 ಜಿಬಿ ವಿಸ್ತರಿತ ರ್ಯಾಮ್ ಅನ್ನು ಹೊಂದಿದೆ. (8 ಜಿಬಿ ರ್ಯಾಮ್ ಅನ್ನು ಹೆಚ್ಚುವರಿ 8 ಜಿಬಿ ವಿಸ್ತರಿತ ರ್ಯಾಮ್ ಜೊತೆಗೆ 1 ಟಿಬಿವರೆಗೆ ವಿಸ್ತರಿಸಬಹುದು). ಆಂಡ್ರಾಯ್ಡ್ 14 ಆಧಾರಿತ ಹೊಸ ಫನ್​ ಟಚ್ ಓಎಸ್ 14 ಅನ್ನು ಇದು ಹೊಂದಿದೆ. ಇದಲ್ಲದೆ, ಐಕ್ಯೂಒ ಝಡ್ 9 ಎಕ್ಸ್ 2 + 3 ವರ್ಷಗಳ ಆಂಡ್ರಾಯ್ಡ್ ಮತ್ತು ಸೆಕ್ಯೂರಿಟಿ ಅಪ್ಡೇಟ್​ಗಳನ್ನು ಸಹ ನೀಡುತ್ತದೆ.

ಇದನ್ನೂ ಓದಿ : ಇವಿ ಘಟಕದಲ್ಲಿ ₹ 12 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಮಹೀಂದ್ರಾ ಅಂಡ್​ ಮಹೀಂದ್ರಾ - Mahindra and Mahindra EV unit

ETV Bharat Logo

Copyright © 2024 Ushodaya Enterprises Pvt. Ltd., All Rights Reserved.