ETV Bharat / state

ನೊಂದವರ ಕಣ್ಣೀರು ಒರೆಸುವುದು ನನ್ನ ಗುರಿ: ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ್​

author img

By

Published : May 31, 2023, 10:01 PM IST

Updated : Jun 1, 2023, 6:03 AM IST

ಇಂದು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಬಿ. ದಯಾನಂದ್​ ಅವರು ಅಧಿಕಾರ ವಹಿಸಿಕೊಂಡರು.

ಪೊಲೀಸ್ ಆಯುಕ್ತ ಬಿ.ದಯಾನಂದ್​
ಪೊಲೀಸ್ ಆಯುಕ್ತ ಬಿ.ದಯಾನಂದ್​

ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ‌ಲಾಗುವುದು.

ಬೆಂಗಳೂರು : ಅಮಾಯಕರು, ನೊಂದವರ ಕಣ್ಣೀರು ಒರೆಸಿ ನಗರದ ಜನಸಾಮಾನ್ಯರಿಗೆ ರಕ್ಷಣೆ ನೀಡಿ ನೆಮ್ಮದಿಯಿಂದ ಬದುಕುವಂತೆ ಮಾಡುವುದು ನನ್ನ ಗುರಿಯಾಗಿದೆ ಎಂದು ನಗರದ ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು. ಇಂದು ಆಂತರಿಕ ಭದ್ರತಾ ದಳದ ಡಿಜಿಪಿಯಾಗಿ ವರ್ಗಾವಣೆಯಾಗಿರುವ ಪ್ರತಾಪ್ ರೆಡ್ಡಿ ಅವರಿಂದ ಬ್ಯಾಟನ್ ಸ್ವೀಕರಿಸಿದ ದಯಾನಂದ ಪೊಲೀಸ್ ಆಯುಕ್ತ ಅಧಿಕಾರವನ್ನು ವಹಿಸಿಕೊಂಡರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದಲ್ಲಿ ಕಮಿಷನರ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ‌ ಅಲ್ಲಿಯೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಜನ ಸಾಮಾನ್ಯರ ಸಮಸ್ಯೆಗಳಿಗೆ ಪೊಲೀಸ್ ಠಾಣೆಗಳಲ್ಲಿ ಪರಿಹಾರ ದೊರಕದಿದ್ದರೆ ಹಿರಿಯ ಅಧಿಕಾರಿಗಳು ಜನ ಪ್ರತಿನಿಧಿಗಳ ಬಳಿಗೆ ಹೋಗುತ್ತಾರೆ.

ಅದನ್ನು ತಪ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಶ್ರೀಮಂತರು, ಬಲಾಢ್ಯರು, ರಾಜಕೀಯ ಬಲ ಹೊಂದಿರುವವರಿಗೆ ಮಾತ್ರ ಪೊಲೀಸ್ ಠಾಣೆಗಳಲ್ಲಿ ನೆರವು ಸಿಗಲಿದೆ ಎನ್ನುವ ಮನೋಭಾವವನ್ನು ತಪ್ಪಿಸಿ. ಎಲ್ಲರಿಗೂ ನ್ಯಾಯ ಸಮಸ್ಯೆಗಳಿಗೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರೌಡಿಗಳ ನಿಗ್ರಹ : ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಹಿಂದಿನ ಪೊಲೀಸ್ ಆಯುಕ್ತರುಗಳು ಶ್ರಮಿಸಿ ಕೈಗೊಂಡಿರುವ ಹಲವು ಕ್ರಮಗಳನ್ನು ಮುಂದುವರೆಸಿ ನಗರವನ್ನು ರೌಡಿ ಚಟುವಟಿಕೆಗಳಿಂದ ಮುಕ್ತಗೊಳಿಸಲು ಶ್ರಮಿಸುತ್ತೇನೆ ಎಂದು ಬಿ.ದಯಾನಂದ ಹೇಳಿದರು.

ಪ್ರಚೋದಕಾರಿ ಪೋಸ್ಟ್ ಗಳ ಮೇಲೆ ನಿಗಾ : ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಎಷ್ಟು ಪ್ರಯೋಜನಗಳಿವೆಯೋ ಅಷ್ಟೇ ದುಷ್ಪರಿಣಾಮಗಳಿವೆ. ಅದರಿಂದಾಗಿ ಒಳ್ಳೆಯದನ್ನು ಬಳಸಬೇಕು. ನಕಲಿ ಪ್ರಚೋದಕಾರಿ ಪೋಸ್ಟ್ ಕಾಮೆಂಟ್ ಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.

ನಗರದ ಬದಲಾವಣೆಗೆ ಒತ್ತು : ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು, ನಗರದಲ್ಲಿ ಎಲ್ಲ ಆಗು ಹೋಗು ಪೊಲೀಸ್ ವ್ಯವಸ್ಥೆಯನ್ನು ಬಲ್ಲೆ. ಇಲ್ಲಿ ಬಹಳಷ್ಟು ಸವಾಲುಗಳಿವೆ. ಅದನ್ನು ಎದರಿಸಲು ಎಲ್ಲ ಸಿಬ್ಬಂದಿಯನ್ನು ಗಮನಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಬೆಂಗಳೂರು ಬದಲಾವಣೆ ಬಗ್ಗೆ ಹೆಚ್ಚಿನ ಹೊತ್ತು ನೀಡುತ್ತೇನೆ ಎಂದು ಬಿ.ದಯಾನಂದ್​ ತಿಳಿಸಿದರು.

ವಿಶ್ವಾಸ ನಂಬಿಕೆ : ಭಾಸ್ಕರ್ ರಾವ್, ಕಮಲ್ ಪಂತ್, ಪ್ರತಾಪ್ ರೆಡ್ಡಿ ಸೇರಿ ನಗರದಲ್ಲಿ ಹಿರಿಯ ಅಧಿಕಾರಿಗಳು ಬಂದು ಹೋಗಿದ್ದಾರೆ. ಇದೀಗ ನಾನು ಅಧಿಕಾರವನ್ನು ವಹಿಸಿಕೊಂಡಿದ್ದು, ನಗರದ ನಾಗರಿಕರು ಇಲಾಖೆ ಮೇಲಿಟ್ಟಿರುವ ಅಪಾರ ವಿಶ್ವಾಸ ನಂಬಿಕೆಯನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಗುಪ್ತಚರದಳದ ಬಲವರ್ಧನೆ : ನಗರದ ಗುಪ್ತಚರದಳ ಬಲವರ್ಧನೆ ಮಾಡಬೇಕು. ಗುಪ್ತದಳ ಪೊಲೀಸ್ ಇಲಾಖೆಯ ಬೆನ್ನೆಲಬು. ಅದನ್ನು ಹೆಚ್ಚು ಬಲವರ್ಧನೆ ಮಾಡಬೇಕು. ಇವತ್ತಿನ ಪೊಲೀಸ್ ವ್ಯವಸ್ಥೆಗೆ ಅನುಗುಣವಾಗಿ ಇರಬೇಕು ಗುಪ್ತದಳದಿಂದ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು. ಪ್ರಿಡಿಕ್ಟಿಂಗ್ ಪೊಲೀಸಿಂಗ್ ಬಗ್ಗೆ ರಿಸರ್ಚ್ ನಡೆಯುತ್ತಿದೆ. ಅದನ್ನು ನಗರ ಪೊಲೀಸಿಂಗ್ ಗೆ ಅಳವಡಿಸಿಕೊಳ್ಳಲಾಗುವುದು ಎಂದರು.

ಪ್ರಕೃತಿ ನಿಯಮ : ಮಾತನಾಡುವಾಗ ಮೊದಲಿಗೆ ನಾನು ಬೆಂಗಳೂರಿಗ ಎಂದು ಹೇಳುತ್ತೇನೆ. ಬೆಂಗಳೂರು ನಗರ ತಾನು ಹುಟ್ಟಿ ಬೆಳೆದ ಸ್ಥಳ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ಜೊತೆಗೊಂಡಂತೆ‌ ಕೆಲಸ ಮಾಡುತ್ತೇವೆ. ಚಿಕ್ಕಂದಿನಿಂದ ನಗರ ಹಾಗೂ ಪೊಲೀಸ್ ಇಲಾಖೆಯನ್ನು ನೋಡಿದ್ದೇನೆ. ಬದಲಾವಣೆ ಪ್ರಕೃತಿ ನಿಯಮ. ಬದಲಾವಣೆ ಜೊತೆಗೆ ಐತಿಹಾಸಿಕ ವ್ಯವಸ್ಥೆಗಳನ್ನು ನೋಡಿದ್ದೇವೆ. ಸಾಕಷ್ಟು ಹಿರಿಯ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಮಾಡಿರುವಂತಹ ವ್ಯವಸ್ಥೆ ಹಾಗೂ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಬದಲಾವಣೆ ಅವಶ್ಯಕತೆ ಇರುವ ಕಡೆ ಬದಲಾವಣೆ ಮಾಡಬೇಕು. ಟೆಕ್ನಾಲಜಿ ಹಾಗೂ ಸೈಬರ್ ಬಗ್ಗೆ ಕೆಲಸ ಆಗಬೇಕು ಎಂದು ಬಿ.ದಯಾನಂದ್​ ವಿವರಿಸಿದರು.

ಟೋಯಿಂಗ್ ಪರಿಶೀಲನೆ : ನಗರ ಪೊಲೀಸ್ ಆಂದರೆ ಅದು ವಿಜಿಬಲ್ ಪೊಲೀಸಿಂಗ್ ಅದು ಆಗಬೇಕು ಜನರಿಗೆ ಹತ್ತಿರವಾಗಬೇಕು. ಹಿಂದೆ ತಾನು ಟ್ರಾಫಿಕ್ ಅಡಿಶನಲ್ ಕಮಿಷನರ್ ಆಗಿ ಕೆಲಸ ಮಾಡಿದ್ದೆ. ಟ್ರಾಫಿಕ್ ಮ್ಯಾನೆಜ್‌ಮೆಂಟ್‌ ಇರುವುದು ಒಂದು ಇಲಾಖೆ ಯಿಂದ ಆಗುವ ಕೆಲಸ ಅಲ್ಲ. ಬಿಬಿಎಂಪಿಯಿಂದ ಪರಿಹಾರಕ್ಕೆ ಇತರ ಇಲಾಖೆಯ ಸಹಯೋಗ ಸಹಕಾರಬೇಕು. ಅರ್ಬನ್ ಡೆವಲಪ್ಮೆಂಟ್ ಎಲ್ಲವರನ್ನು ಸೇರಿಕೊಂಡು ಸುಧಾರಣೆ ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳ ಸಲಹೆ ಮೇರೆ ಉತ್ತಮವಾಗಿ ಉಪಯೋಗವಾಗುವ ಕೆಲಸ ಮಾಡಬೇಕು ಎಂದು ಹೇಳಿದರು.

ಟೋಯಿಂಗ್ ಜೊತೆಗೆ ಪರ್ಯಾಯ ವ್ಯವಸ್ಥೆ : ನಗರದ ಸಂಚಾರ ಸಮಸ್ಯೆಯನ್ನು ಪೊಲೀಸ್ ಇಲಾಖೆಯನ್ನು ಪರಿಹರಿಸುವುದು ಆಸಾಧ್ಯ. ಅದರಿಂದಾಗಿ ಬಿಬಿಎಂಪಿ, ಸಾರಿಗೆ, ಇಂಧನ ಇನ್ನಿತರ ಇಲಾಖೆಯ ಸಹಯೋಗದೊಂದಿಗೆ ಸಂಚಾರ ಉತ್ತಮಗೊಳಿಸಲು ಶ್ರಮಿಸಲಾಗುವುದು. ಟೋಯಿಂಗ್ ಜೊತೆಗೆ ಪರ್ಯಾಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಪ್ರತಾಪ್​ ರೆಡ್ಡಿ, ಬೆಂಗಳೂರು ಪೊಲೀಸ್ ಆಯುಕ್ತರಾಗಿ ದಯಾನಂದ್ ನೇಮಕ

Last Updated :Jun 1, 2023, 6:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.