ETV Bharat / international

ಪಾಕಿಸ್ತಾನದ ಭದ್ರತಾ ಸ್ಥಿತಿಗತಿ ವಿಚಾರಿಸಿದ ಅಮೆರಿಕ ಸೇನಾ ಮುಖ್ಯಸ್ಥ

author img

By

Published : Sep 2, 2021, 7:15 AM IST

ಆಫ್ಘನ್​ನಿಂದ ಅಮೆರಿಕ ಸೇನೆ ಮರಳಿದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ನಡುವೆ ರಕ್ಷಣೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ. ಈ ವೇಳೆ ಪಾಕಿಸ್ತಾನ ಹಾಗೂ ಅಲ್ಲಿನ ಸುತ್ತಲಿನ ಪ್ರಸ್ತುತ ರಕ್ಷಣಾ ಸ್ಥಿತಿಗತಿ ಬಗ್ಗೆ ಅಮೆರಿಕ ಮಿಲಿಟರಿ ಮುಖ್ಯಸ್ಥರು ಮಾಹಿತಿ ಪಡೆದಿದ್ದಾರೆ.

senior-us-general-pak-army-chief-discuss-security-situation-in-pakistan
ಪಾಕಿಸ್ತಾನದ ಭದ್ರತಾ ಸ್ಥಿತಿಗತಿ ವಿಚಾರಿಸಿದ ಅಮೆರಿಕಾ ಸೇನಾ ಮುಖ್ಯಸ್ಥ

ವಾಷಿಂಗ್ಟನ್: ಆಫ್ಘನ್ ನೆಲದಿಂದ ಅಮೆರಿಕ ಸೇನೆ ನಿರ್ಗಮಿಸುತ್ತಿದ್ದಂತೆ ಇದೀಗ ಪಾಕಿಸ್ತಾನಕ್ಕೂ ತಾಲಿಬಾನಿಗಳ ಆತಂಕ ಎದುರಾಗಿದೆ. ಈ ನಡುವೆ ಅಮೆರಿಕ ಜಂಟಿ ಸೇನಾ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೆ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ ಎಂದು ಪೆಂಟಗನ್ ತಿಳಿಸಿದೆ.

ಆಫ್ಘನ್​ನಿಂದ ಯುಎಸ್ ಸೇನೆ ಮರಳಿದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ನಡುವೆ ರಕ್ಷಣೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ. ಈ ವೇಳೆ, ಪಾಕಿಸ್ತಾನ ಹಾಗೂ ಅಲ್ಲಿನ ಸುತ್ತಲಿನ ಪ್ರಸ್ತುತ ರಕ್ಷಣಾ ಸ್ಥಿತಿಗತಿ ಬಗ್ಗೆ ಯುಎಸ್ ಮಿಲಿಟರಿ ಮುಖ್ಯಸ್ಥ ಮಾಹಿತಿ ಪಡೆದಿದ್ದಾರೆ.

ಆಫ್ಘನ್​ನಿಂದ ವಿಮಾನವೇರಿದ್ದ ಯುಎಸ್ ಸೇನೆಯ ಕೆಲವು ತಂಡ ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿವೆ. ಇಲ್ಲಿಂದ ಅಮೆರಿಕ ತಲುಪಲಿವೆ. ಹಿರಿಯ ನಾಯಕರು ಪಾಕಿಸ್ತಾನ ಮತ್ತು ಪ್ರದೇಶದ ಪ್ರಸ್ತುತ ಭದ್ರತಾ ವಾತಾವರಣ ಸೇರಿದಂತೆ ಕೆಲ ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಜಂಟಿ ಸಿಬ್ಬಂದಿ ವಕ್ತಾರ ಕರ್ನಲ್ ಡೇವ್ ಬಟ್ಲರ್ ಮಾಹಿತಿ ನೀಡಿದ್ದಾರೆ.

ಆದರೆ, ಈ ಎರಡೂ ದೇಶಗಳ ನಡುವಿನ ಸಂಭಾಷಣೆ ಕುತೂಹಲಕ್ಕೂ ಕಾರಣವಾಗಿದೆ.

ಓದಿ: ಹವಾಮಾನ ಮಾತುಕತೆಗೆ ‘ವೈಷಮ್ಯ’ ಅಡ್ಡಿಯಾಗಬಹುದು: ಅಮೆರಿಕಕ್ಕೆ ಚೀನಾ​ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.