ETV Bharat / state

ಕೆಎಎಸ್ ಅಧಿಕಾರಿ ಪತ್ನಿ ಸಾವು ಪ್ರಕರಣ: ಆತ್ಮಹತ್ಯೆ ಹಿಂದೆ ಯಾರ ಕೈವಾಡವೂ ಇಲ್ಲ‌ವೆಂದ ಪೊಲೀಸರು - KAS officer wife death case

author img

By ETV Bharat Karnataka Team

Published : May 23, 2024, 9:21 PM IST

ಹೈಕೋರ್ಟ್ ವಕೀಲೆ ಹಾಗೂ ಕೆಎಎಸ್ ಅಧಿಕಾರಿ ಪತ್ನಿ ಚೈತ್ರಗೌಡ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು, ಪ್ರಾರ್ಪಟಿ ವಿಚಾರವಾಗಿ ಮನಸ್ತಾಪ ಹಾಗೂ ಖಿನ್ನತೆಯಿಂದ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕುರಿತು ತನಿಖೆ ಮುಂದುವರೆದಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

Chaitra Gowda
ಕೆಎಎಸ್ ಅಧಿಕಾರಿ ಪತ್ನಿ ಚೈತ್ರಗೌಡ (ETV Bharat)

ಬೆಂಗಳೂರು: ಹೈಕೋರ್ಟ್ ವಕೀಲೆ ಹಾಗೂ ಕೆಎಎಸ್ ಅಧಿಕಾರಿ ಪತ್ನಿ ಚೈತ್ರಾಗೌಡ ಅನುಮಾನಸ್ಪಾದ ಸಾವು ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಮಾನಸಿಕ ಖಿನ್ನತೆಯಿಂದಾಗಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಹಿಂದೆ ಯಾರ ಕೈವಾಡ ಇಲ್ಲದಿರುವುದು ಇದು ವರೆಗಿನ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

ಹೈಕೋರ್ಟ್ ವಕೀಲೆಯಾಗಿ ಕ್ರಿಯಾಶೀಲರಾಗಿದ್ದ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಚೈತ್ರಾಗೌಡ ಗುರುತಿಸಿಕೊಂಡಿದ್ದರು. ಕೆಎಎಸ್ ಅಧಿಕಾರಿ ಆಗಿರುವ ಪತಿ ಶಿವಕುಮಾರ್ ಜೊತೆ ಸಂಜಯನಗರದ ಅಣ್ಣಯಪ್ಪ ಲೇಔಟ್​​ನಲ್ಲಿ ವಾಸವಾಗಿದ್ದರು‌. ಈ ಮಧ್ಯೆ ಮೇ 11ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಪರಿಶೀಲನೆ ವೇಳೆ ಎರಡು ತಿಂಗಳ ಹಿಂದೆ ಬರೆದಿದ್ದ ಎನ್ನಲಾಗಿದ್ದ ಡೆತ್ ನೋಟ್ ಪೊಲೀಸರಿಗೆ ಮನೆಯಲ್ಲಿ ಪತ್ತೆಯಾಗಿತ್ತು.

ಈ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಆರೋಪ ಕೇಳಿ ಬಂದಿತ್ತು.‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು‌ ಮೃತರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯೇ‌ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಪತ್ತೆಯಾಗಿದ್ದ ಡೆತ್ ನೋಟ್ ಬಗ್ಗೆ ತನಿಖೆ ನಡೆಸಿದಾಗ ಅವರೇ ಬರೆದಿರುವುದನ್ನ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

ಆರಂಭದಲ್ಲಿ ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಪತಿ ಶಿವಕುಮಾರ್ ಅವರನ್ನು ಕರೆದು ವಿಚಾರಣೆ‌‌ ನಡೆಸಿದ್ದರು. ಪತ್ನಿಯೊಂದಿಗೆ ಯಾವುದೇ ವೈಷ್ಯಮ್ಯವಿರದೇ ಅನೋನ್ಯವಾಗಿದ್ದವು. ಅಲ್ಲದೇ ವೃತ್ತಿ ವೈಷ್ಯಮ್ಯ ಹಾಗೂ ಹಣಕಾಸಿನ ವಿಚಾರದಲ್ಲಿ ಯಾವುದೇ ಕಿರಿಕಿರಿ ಇಲ್ಲದಿರುವುದಾಗಿ ಹೇಳಿಕೆ ನೀಡಿದ್ದರು‌‌. ಮತ್ತೊಂದೆಡೆ ಮೃತ ಸಹೋದರ ಹಾಗೂ‌ ಕುಟುಂಬಸ್ಥರನ್ನ ಕರೆದು ವಿಚಾರಣೆ ನಡೆಸಿದಾಗ ಪ್ರಾಪರ್ಟಿ ವಿಚಾರವಾಗಿ ಚೈತ್ರಾಳೊಂದಿಗೆ ಮನಸ್ತಾಪವಾಗಿತ್ತು‌.‌ ಇದೇ ವಿಚಾರವಾಗಿ ಕಳೆದೊಂದು ವರ್ಷದಿಂದ ವೈಮನಸ್ಸು ಇತ್ತು ಎಂದು ಹೇಳಿಕೆ‌ ನೀಡಿದ್ದರು‌.

‌ಮೂರು ತಿಂಗಳ ಹಿಂದೆಯಷ್ಟೇ ಕುಟುಂಬಸ್ಥರೊಂದಿಗೆ ಮಾತನಾಡುವಾಗ ಸಾಯುವ ಮಾತನ್ನು ಚೈತ್ರಾ ಹೇಳಿದ್ದಳು ಎನ್ನಲಾಗಿದ್ದು, ಕುಟುಂಬಸ್ಥರು ಇದನ್ನ ಲಘುವಾಗಿ ಪರಿಗಣಿಸಿದ್ದರು. ಹೀಗಾಗಿ ಮೂರು ತಿಂಗಳ ಹಿಂದೆಯೇ ಡೆತ್ ನೋಟ್ ಅನ್ನು ಚೈತ್ರಾ ಬರೆದಿದ್ದಳು. ಪ್ರಾರ್ಪಟಿ ವಿಚಾರವಾಗಿ ಮನಸ್ತಾಪ ಹಾಗೂ ಖಿನ್ನತೆಯಿಂದಾಗಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಅಂಜಲಿ ಅಂಬಿಗೇರ ಕೊಲೆ ಪ್ರಕರಣ; ಆರೋಪಿಯನ್ನು 8 ದಿನ ಸಿಐಡಿ ವಶಕ್ಕೆ ನೀಡಿ ಕೋರ್ಟ್​ ಆದೇಶ - ANJALI MURDER CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.