ETV Bharat / bharat

ದೆಹಲಿ ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ.. ಬ್ರೆಜಿಲ್​ ಪ್ರಜೆಯಿಂದ 11 ಕೋಟಿ ಮೌಲ್ಯದ ಕೊಕೇನ್​ ಜಪ್ತಿ

author img

By

Published : Mar 18, 2023, 11:08 PM IST

ದೆಹಲಿ ಐಜಿಐ ಏರ್​ಪೋರ್ಟ್​ನಲ್ಲಿ ಬ್ರೆಜಿಲ್​ ಪ್ರಜೆ ವಶಕ್ಕೆ -82 ಕ್ಯಾಪ್ಸುಲ್​ಗಳು - ಕ್ಯಾಪ್ಸುಲ್​ಗಳಿದ್ದ ಕೊಕೇನ್​ ಮೌಲ್ಯ 11 ಕೋಟಿ ರೂ.

ದೆಹಲಿ ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ
ದೆಹಲಿ ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ

ನವದೆಹಲಿ: ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆದಾರನನ್ನು ಬಂಧಿಸಿದ್ದಾರೆ. ಈ ಮೂಲಕ ಕೊಕೇನ್ ಕಳ್ಳಸಾಗಣೆಯ ಪ್ರಮುಖ ಪ್ರಕರಣವನ್ನು ಅವರು ಭೇದಿಸಿದ್ದಾರೆ. ಬ್ರೆಜಿಲ್ ಪ್ರಜೆ ತನ್ನ ಹೊಟ್ಟೆಯಲ್ಲಿ ಕೊಕೇನ್ ತುಂಬಿದ 82 ಕ್ಯಾಪ್ಸುಲ್ ಗಳನ್ನು ತಂದಿದ್ದ. ಆರೋಪಿ ಬ್ರೆಜಿಲ್ ನಿಂದ ದುಬೈ ತಲುಪಿ ಅಲ್ಲಿಂದ ನವದೆಹಲಿಗೆ ಬರುತ್ತಿದ್ದಂತೆ ಆತನಿಗೆ ಕಸ್ಟಮ್ಸ್​ ಅಧಿಕಾರಿಗಳು ಬಲೆ ಹಾಕಿದ್ದಾರೆ.

ಆರೋಪಿಗೆ ವೈದ್ಯಕೀಯ ಮೇಲ್ವಿಚಾರಣೆ.. ಕಸ್ಟಮ್ಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬ್ರೆಜಿಲ್​ ರಾಜಧಾನಿ ಸಾವೊ ಪಾಲೊದಿಂದ ದುಬೈ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಈ ಪ್ರಜೆಯು ಮಾದಕ ದ್ರವ್ಯ ನುಂಗುತ್ತಿದ್ದ ಶಂಕೆಯ ಮೇಲೆ ಕಸ್ಟಮ್ಸ್ ಗುಪ್ತಚರ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ಆರೋಪಿಯಿಂದ ಬಿಳಿ ಬಣ್ಣದ ಪೌಡರ್​​ ಒಳಗೊಂಡ 82 ಕ್ಕೂ ಹೆಚ್ಚು ಕ್ಯಾಪ್ಸುಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕ್ಯಾಪ್ಸುಲ್​ನಲ್ಲಿ ಕೊಕೇನ್​ ತುಂಬಿರುವ ಆರೋಪಿ.. ಈ ಕ್ಯಾಪ್ಸುಲ್‌ಗಳಲ್ಲಿ ಒಟ್ಟು 752 ಗ್ರಾಂ ಬಿಳಿ ಪುಡಿ ಪತ್ತೆಯಾಗಿದೆ. ಪರಿಶೀಲನೆ ವೇಳೆ ಇದರಲ್ಲಿ ಕೊಕೇನ್ ಇರುವುದು ದೃಢಪಡಿಪಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಶಪಡಿಸಿಕೊಂಡಿರುವ ಕೊಕೇನ್ ಮೌಲ್ಯ ಬರೋಬ್ಬರಿ 11 ಕೋಟಿ 28 ಲಕ್ಷ ರೂಪಾಯಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅಂತಾರಾಜ್ಯ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರ ಬಂಧನ.. ಏತನ್ಮಧ್ಯೆ, ದೆಹಲಿ ಪೊಲೀಸರ ವಿಶೇಷ ತಂಡವು ಅಂತಾರಾಜ್ಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಸಿಂಡಿಕೇಟ್ ಅನ್ನು ಭೇದಿಸಿದೆ ಮತ್ತು ಮಧ್ಯಪ್ರದೇಶದ ಛತ್ತರ್‌ಪುರದಿಂದ ಇಬ್ಬರು ಕುಖ್ಯಾತ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಅಜೀಜ್ ಮತ್ತು ಅರ್ಷದ್ ಖಾನ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ 32 ಗುಂಡುಗಳಿರುವ ಸುಮಾರು 12 ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಿಬ್ಬರೂ ದೆಹಲಿ ಎನ್‌ಸಿಆರ್, ಯುಪಿ, ರಾಜಸ್ಥಾನದ ದರೋಡೆಕೋರರಿಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು. ಅಕ್ರಮ ಪಿಸ್ತೂಲ್ ಗಳನ್ನು 10 ರಿಂದ 12 ಸಾವಿರ ರೂ.ಗೆ ಖರೀದಿಸಿ ಮತ್ತೆ ಅದನ್ನು ಪ್ರತಿ ಪೀಸ್ ಗೆ 35ರಿಂದ 50 ಸಾವಿರ ರೂ.ಗೆ ಕ್ರಿಮಿನಲ್ ಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳು ದಿನೇಶ್ ಅಲಿಯಾಸ್ ಯಶ್ ಅವರ ಸೂಚನೆಯ ಮೇರೆಗೆ ರಶೀದ್ ಕೇಬಲ್ ವಾಲಾ ಅವರ ಸಹಚರರಿಗೆ ಅಕ್ರಮ ಪಿಸ್ತೂಲ್ ರವಾನೆಯನ್ನು ತಲುಪಿಸಲು ದೆಹಲಿಗೆ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ದೆಹಲಿ ಎನ್‌ಸಿಆರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಸ್ತ್ರಾಸ್ತ್ರ ಪೂರೈಕೆದಾರರು ಮತ್ತು ಅವರ ಸಹಚರರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಾಗ ಗ್ಯಾಂಗ್ ಅನ್ನು ಭೇದಿಸಲಾಗಿದೆ ಎಂದು ವಿಶೇಷ ಸೆಲ್ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.