ಕರ್ನಾಟಕ

karnataka

ಇಂಧನ ಸಮಸ್ಯೆ: ನಾಸಾ ಬೆಂಬಲಿತ ಮೂನ್ ಲ್ಯಾಂಡರ್ ಉಡಾವಣೆ ವಿಳಂಬ

By ETV Bharat Karnataka Team

Published : Feb 14, 2024, 2:47 PM IST

ನಾಸಾ ಬೆಂಬಲಿತ ಖಾಸಗಿ ಕಂಪನಿಯ ಮೂನ್ ಲ್ಯಾಂಡರ್ ಉಡಾವಣೆ ಮತ್ತೆ ಮುಂದೂಡಿಕೆಯಾಗಿದೆ.

ನಾಸಾ ಬೆಂಬಲಿತ ಮೂನ್ ಲ್ಯಾಂಡರ್ ಉಡಾವಣೆ ವಿಳಂಬ
NASA-backed US firms moon lander launch delayed over methane fuel issue

ನವದೆಹಲಿ: ಮಿಥೇನ್ ಇಂಧನಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನಾಸಾ ಬೆಂಬಲಿತ ಖಾಸಗಿ ಕಂಪನಿ ಇಂಟ್ಯೂಟಿವ್​ ಮಶೀನ್ಸ್​ನ ಮೂನ್ ಲ್ಯಾಂಡರ್ ಉಡಾವಣೆ ವಿಳಂಬವಾಗಿದೆ. ಹ್ಯೂಸ್ಟನ್ ಮೂಲದ ಇಂಟ್ಯೂಟಿವ್ ಕಂಪನಿಯ ಐಎಂ-1 ಲೂನಾರ್ ಲ್ಯಾಂಡರ್ ಫೆಬ್ರವರಿ 14ರಂದು ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಫಾಲ್ಕನ್ 9 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಹಾರಬೇಕಿತ್ತು.

ಮಿಥೇನ್ ಲೋಡ್ ಮಾಡುವ ಮುನ್ನ ಆಫ್-ನಾಮಿನಲ್ (off-nominal) ಮಿಥೇನ್ ತಾಪಮಾನದಿಂದಾಗಿ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ. ಈಗ ಫೆಬ್ರವರಿ 15ರ ಗುರುವಾರ ಮುಂಜಾನೆ 1.05ಕ್ಕೆ ಮೂನ್ ಲ್ಯಾಂಡರ್ ಉಡಾವಣೆ ಮಾಡಲು ಸ್ಪೇಸ್ ಎಕ್ಸ್ ಮತ್ತು ಇಂಟ್ಯೂಟಿವ್ ಮಶೀನ್ಸ್​ ಉದ್ದೇಶಿಸಿವೆ ಎಂದು ಸಂಸ್ಥೆ ತಿಳಿಸಿದೆ.

ಲ್ಯಾಂಡರ್ ಇಂಟ್ಯೂಟಿವ್​ ಮಶೀನ್ಸ್​ನ ರೊಬೊಟಿಕ್ ನೋವಾ-ಸಿ ಲ್ಯಾಂಡರ್ "ಒಡಿಸ್ಸಿಯಸ್" ಅನ್ನು ಚಂದ್ರನ ಮೇಳೆ ಇಳಿಸುವ ಗುರಿಯನ್ನು ಹೊಂದಿದೆ. ಫೆ.22 ರಂದು ಒಡಿಸ್ಸಿಯಸ್ ಸಾಫ್ಟ್​ ಲ್ಯಾಂಡಿಂಗ್ ಆದರೆ, ಹಾಗೆ ಮಾಡಿದ ಪ್ರಥಮ ಖಾಸಗಿ ಬಾಹ್ಯಾಕಾಶ ನೌಕೆ ಎಂಬ ಖ್ಯಾತಿಗೆ ಇದು ಪಾತ್ರವಾಗಲಿದೆ.

"ಮಿಥೇನ್ ಲೋಡ್​ ಮಾಡುವ ಮುನ್ನ ಕಾಣಿಸಿಕೊಂಡ ಆಫ್-ನಾಮಿನಲ್ ಮಿಥೇನ್ ತಾಪಮಾನದಿಂದಾಗಿ ಇಂದು ರಾತ್ರಿಯ ಉಡಾವಣಾ ಪ್ರಯತ್ನವನ್ನು ರದ್ದು ಮಾಡಲಾಗಿದೆ" ಎಂದು ಸ್ಪೇಸ್ಎಕ್ಸ್ X.comನಲ್ಲಿ ಅಪ್ಡೇಟ್ ನೀಡಿದೆ.

ಸಿಎಲ್​ಪಿಎಸ್​ನ ಭಾಗವಾಗಿ ಚಂದ್ರನ ಮೇಲ್ಮೈಗೆ ಕಳುಹಿಸಲಾಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಪೇಲೋಡ್​ಗಳು ಭವಿಷ್ಯದಲ್ಲಿ ಮಾನವ ಇಳಿಯುವ ಕಾರ್ಯಾಚರಣೆಗಳಿಗೆ ನೆರವಾಗುವ ಮತ್ತು ಚಂದ್ರನ ಮೇಲ್ಮೈಯಲ್ಲಿ ಮಾನವರ ವಾಸಕ್ಕೆ ಅಡಿಪಾಯ ಹಾಕಲು ಉದ್ದೇಶಿಸಿವೆ.

ಈ ಮಿಷನ್ ಯಶಸ್ವಿಯಾದರೆ, ಸುಮಾರು 50 ವರ್ಷಗಳ ನಂತರ ಯುಎಸ್ ಮತ್ತೊಮ್ಮೆ ಚಂದ್ರನ ಮೇಲೆ ಕಾಲಿಟ್ಟಂತಾಗುತ್ತದೆ. ಡಿಸೆಂಬರ್ 1972ರಲ್ಲಿ ಅಪೊಲೊ 17ರ ನಂತರ ಯುಎಸ್ ಚಂದ್ರನ ಮೇಲೆ ಇಳಿಯಲು ಪ್ರಯತ್ನಿಸಿಲ್ಲ. ಜನವರಿಯಲ್ಲಿ, ನಾಸಾ ಬೆಂಬಲಿತ ಮತ್ತೊಂದು ಕಂಪನಿ, ಆಸ್ಟ್ರೋಬಯೋಟಿಕ್ ಟೆಕ್ನಾಲಜಿಯ ಲೂನಾರ್ ಲ್ಯಾಂಡರ್ ಇಂಧನ ಸೋರಿಕೆಯಿಂದಾಗಿ ಚಂದ್ರನನ್ನು ತಲುಪಲು ಸಾಧ್ಯವಾಗಿರಲಿಲ್ಲ.

ಆರ್ಟೆಮಿಸ್ ಯೋಜನೆಯು ನಾಸಾ ನಡೆಸುತ್ತಿರುವ ಚಂದ್ರಯಾನಗಳ ಸರಣಿಯಾಗಿದೆ. ಒಂದು ಆರ್ಟೆಮಿಸ್ ಮಿಷನ್ ಈಗಾಗಲೇ ಪೂರ್ಣಗೊಂಡಿದೆ. 2022ರ ಕೊನೆಯಲ್ಲಿ ಆರ್ಟೆಮಿಸ್-1 ಸಿಬ್ಬಂದಿಯಿಲ್ಲದ ಪರೀಕ್ಷಾ ಹಾರಾಟಕ್ಕಾಗಿ ಚಂದ್ರನ ಆಚೆಗೆ ಕಕ್ಷೆಯಲ್ಲಿ ಹಾರಿತು.

ಇದನ್ನೂ ಓದಿ: ಚಾಟ್​ ಜಿಪಿಟಿಗೆ ಬರಲಿದೆ ಸ್ಮರಣಶಕ್ತಿ: ನಿಮ್ಮ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಲಿದೆ ಚಾಟ್ ಬಾಟ್

ABOUT THE AUTHOR

...view details