ETV Bharat / technology

ನಿಮ್ಮ ರೆಫ್ರಿಜಿರೇಟರ್ ದೀರ್ಘಾವಧಿಯವರೆಗೆ ಬಾಳಿಕೆ ಬರಬೇಕೆ? ಹಾಗಾದ್ರೆ ಈ ಸಲಹೆ ಪಾಲಿಸಿ - REFRIGERATOR SAFETY TIPS

author img

By ETV Bharat Karnataka Team

Published : May 22, 2024, 6:16 PM IST

ನಿಮ್ಮ ರೆಫ್ರಿಜಿರೇಟರ್ ಹೆಚ್ಚಿನ ದಿನಗಳವರೆಗೆ ಕಾರ್ಯನಿರ್ವಹಿಸಬೇಕಾದ್ರೆ ನೀವು ಅದರತ್ತ ಕಾಳಜಿ ವಹಿಸುವುದು ಸೂಕ್ತ.

refrigerator
ರೆಫ್ರಿಜರೇಟರ್ (ETV Bharat)

ನವದೆಹಲಿ : ಬಿಸಿಲಿನ ಝಳದಿಂದಾಗಿ ದೇಶಾದ್ಯಂತ ಜನರು ಪರದಾಡುವಂತಾಗಿದೆ. ಸದ್ಯ ಬಿಸಿಲಿನ ತಾಪದಿಂದ ಜನರಿಗೆ ಬಿಡುವು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಇರಿಸಲಾದ ರೆಫ್ರಿಜರೇಟರ್​​ನ ಕೆಲಸ ಹೆಚ್ಚಾಗಿದೆ. ಪ್ರಸ್ತುತ ಜನರು ರೆಫ್ರಿಜರೇಟರ್‌ಗಳು ಆಹಾರ ಪದಾರ್ಥಗಳನ್ನು ಸಂರಕ್ಷಿಸಲು ಮಾತ್ರವಲ್ಲದೆ, ತಂಪಾದ ನೀರಿಗಾಗಿಯೂ ಬಳಸುತ್ತಿದ್ದಾರೆ.

ರೆಫ್ರಿಜರೇಟರನ್ನು ವರ್ಷವಿಡೀ ಮನೆಗಳಲ್ಲಿ ಬಳಸಲಾಗಿದ್ದರೂ, ಬೇಸಿಗೆಯಲ್ಲಿ ಅದು ಇಲ್ಲದೆ ಅಡುಗೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಅದರ ಬಗ್ಗೆ ಕಾಳಜಿ ವಹಿಸುವುದು ಮತ್ತು ಅದನ್ನು ಸರಿಯಾಗಿ ಬಳಸುವುದು ಮುಖ್ಯವಾಗಿದೆ. ನಿಮ್ಮ ರೆಫ್ರಿಜರೇಟರ್ ಬಗ್ಗೆ ನೀವು ಸರಿಯಾಗಿ ಕಾಳಜಿ ವಹಿಸಿದರೆ, ಯಾವುದೇ ದುರಸ್ತಿ ಅಥವಾ ಬದಲಿ ಇಲ್ಲದೆ ಅದು ಸುಮಾರು ವರ್ಷಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ನೀವು ಬೇಸಿಗೆ ಕಾಲದಲ್ಲಿ ರೆಫ್ರಿಜರೇಟರ್ ಬಳಸುತ್ತಿದ್ದರೆ ಮತ್ತು ನಿಮ್ಮ ಫ್ರಿಡ್ಜ್ ದೀರ್ಘಕಾಲ ಉಳಿಯಬೇಕು ಮತ್ತು ಬೇಸಿಗೆಯಲ್ಲಿ ಯಾವುದೇ ಹಾನಿಯಾಗಬಾರದು ಎಂದು ಬಯಸಿದರೆ, ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇವೆ. ಅದರ ಸಹಾಯದಿಂದ ನಿಮ್ಮ ಫ್ರಿಡ್ಜ್​ ಯಾವುದೇ ಅಸಮರ್ಪಕ ಕಾರ್ಯವಿಲ್ಲದೆ ದೀರ್ಘಕಾಲ ಉಳಿಯುತ್ತದೆ.

ಬಾಗಿಲಿನ ಮೇಲಿನ ರಬ್ಬರ್ ಸೀಲ್ ಬದಲಾಯಿಸಿ : ನಿಮ್ಮ ರೆಫ್ರಿಜರೇಟರ್ ದೀರ್ಘಕಾಲ ಉಳಿಯಲು ನೀವು ಬಯಸಿದರೆ ಮತ್ತು ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ಪ್ರತಿ 12 ತಿಂಗಳಿಗೊಮ್ಮೆ ರೆಫ್ರಿಜಿರೇಟರ್ ಬಾಗಿಲಿನ ರಬ್ಬರ್ ಸೀಲ್ ಅನ್ನು ಪರಿಶೀಲಿಸಿ ಮತ್ತು ಅದು ಸಡಿಲವಾಗಿದ್ದರೆ ಅಥವಾ ಎಲ್ಲೋ ಹರಿದರೆ, ಅದನ್ನು ಬದಲಾಯಿಸಿ. ನೀವು ರೆಫ್ರಿಜರೇಟರ್​​ನ ರಬ್ಬರ್ ಸೀಲ್ ಅನ್ನು ಬದಲಾಯಿಸದಿದ್ದರೆ, ರೆಫ್ರಿಜರೇಟರ್ ನೀರನ್ನು ತಂಪಾಗಿಸುವುದಿಲ್ಲ.

ಕಂಡೆನ್ಸರ್ ಕಾಯಿಲ್​ಗಳನ್ನ ಸ್ವಚ್ಛಗೊಳಿಸಿ : ರೆಫ್ರಿಜರೇಟರ್ ಹಾನಿಯಾಗದಂತೆ ತಡೆಯಲು, ಅದರ ಕಂಡೆನ್ಸರ್ ಸುರುಳಿ (ಕಾಯಿಲ್​) ಗಳನ್ನು ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು. ಇದು ಫ್ರಿಡ್ಜ್​ನ ಸುಮಾರು 70 ಪ್ರತಿಶತದಷ್ಟು ಸಮಸ್ಯೆಗಳನ್ನು ಪರಿಹರಿಸುತ್ತದೆ. ಏಕೆಂದರೆ ಫ್ರಿಡ್ಜ್​ನ ಸುರುಳಿಗಳು ಮತ್ತು ಫ್ಯಾನ್‌ಗಳಲ್ಲಿ ಧೂಳು ಸಂಗ್ರಹವಾಗುವುದರಿಂದ, ಕಂಡೆನ್ಸರ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದರಿಂದ ಫ್ರಿಡ್ಜ್ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಂಪಾಗಿಸುವುದಿಲ್ಲ.

ಫ್ರೀಜರ್ ದ್ವಾರಗಳನ್ನು ಸ್ವಚ್ಛಗೊಳಿಸಿ : ಫ್ರೀಜರ್​ನ ದ್ವಾರಗಳನ್ನು ಸ್ವಚ್ಛಗೊಳಿಸದಿದ್ದರೆ, ಅದು ಆಹಾರವನ್ನು ಸರಿಯಾಗಿ ತಂಪುಗೊಳಿಸಲ್ಲ. ಇದನ್ನು ತಪ್ಪಿಸಲು ದ್ವಾರಗಳನ್ನು ಶುಚಿಗೊಳಿಸುವುದು ಮುಖ್ಯ. ದ್ವಾರಗಳನ್ನು ಸ್ವಚ್ಛಗೊಳಿಸುವುದು ಫ್ರೀಜರ್​​ನಲ್ಲಿ ತಂಪನ್ನು ನಿರ್ವಹಿಸುತ್ತದೆ. ಇದಲ್ಲದೇ ವಿದ್ಯುತ್ ಉಳಿತಾಯವೂ ಆಗುತ್ತದೆ.

ರೆಫ್ರಿಜಿರೇಟರನ್ನ 38 ಮತ್ತು 42 ಡಿಗ್ರಿ ಫ್ಯಾರನ್​ಹೀಟ್​ ನಡುವೆ ಇರಿಸಿ : ಯಾವಾಗಲೂ ರೆಫ್ರಿಜರೇಟರ್‌ನ ತಾಪಮಾನ ಸೆಟ್ಟಿಂಗ್‌ಗಳನ್ನು 38 ರಿಂದ 42 ಡಿಗ್ರಿ ಫ್ಯಾರನ್‌ಹೀಟ್ ನಡುವೆ ಇರಿಸಿ. ಅಲ್ಲದೆ, ಫ್ರಿಡ್ಜ್‌ನ ತಾಪಮಾನ ನಿಯಂತ್ರಣ ಸೆಟ್ಟಿಂಗ್‌ಗಳನ್ನು ನಿರಂತರವಾಗಿ ಪರಿಶೀಲಿಸುತ್ತಿರಿ ಮತ್ತು ಅದರ ಮೇಲೆ ಹೆಚ್ಚು ಲೋಡ್ ಆಗದಂತೆ ನೋಡಿಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಫ್ರಿಡ್ಜ್ ಗೆ ಯಾವುದೇ ಹಾನಿಯಾಗುವುದಿಲ್ಲ.

ಫ್ರಿಜ್ ಅನ್ನು ಡಿಫ್ರಾಸ್ಟ್ ಮಾಡಿ : ರೆಫ್ರಿಜರೇಟರ್ ಹಾನಿಯಾಗದಂತೆ ತಡೆಯಲು, ಕಾಲಕಾಲಕ್ಕೆ ಅದನ್ನು ಡಿಫ್ರಾಸ್ಟಿಂಗ್ ಮಾಡಿ. ಡಿಫ್ರಾಸ್ಟಿಂಗ್ ನಿಮ್ಮ ಫ್ರಿಡ್ಜ್​ ಜ್‌ನಲ್ಲಿ ಸಂಗ್ರಹವಾಗುವುದನ್ನು ತಡೆಯುತ್ತದೆ ಮತ್ತು ಫ್ರಿಡ್ಜ್​ ಕಡಿಮೆ ವಿದ್ಯುತ್ ಬಳಸುತ್ತದೆ.

ಇದನ್ನೂ ಓದಿ : ಸೋಲಾರ್​ ಪವರ್​ ರೆಫ್ರಿಜರೇಟರ್​: ಜಗತ್ತಿನಲ್ಲಿ ಹಸಿವೆ, ಆಹಾರ ಶೀತಲೀಕರಣ ಸಮಸ್ಯೆಗೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.