ETV Bharat / state

ಬೆಂಗಳೂರು: ಮೃತ ಪೊಲೀಸ್​ ಐಡಿ ಬಳಸಿ ಸಂಚಾರಿ ಉಲ್ಲಂಘನೆಯ ದಂಡ ವಸೂಲಿ ಮಾಡುತ್ತಿದ್ದ ವಂಚಕರ ಸೆರೆ - Three arrested For using Fake ID

author img

By ETV Bharat Karnataka Team

Published : May 23, 2024, 10:55 PM IST

ಬೆಂಗಳೂರಿನಲ್ಲಿ ಮೃತ ಹೆಡ್​ ಕಾನ್​ಸ್ಟೇಬಲ್​ಯೊಬ್ಬರ ಗುರುತಿನ ಚೀಟಿ ಬಳಸಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Three Accused arrested for  collecting fines using a ID of deceased police In Bengaluru
ಬೆಂಗಳೂರು: ಬಂಧಿತ ಆರೋಪಿಗಳು (ETV Bharat)

ಬೆಂಗಳೂರು: ಮೃತ ಹೆಡ್​ ಕಾನ್​ಸ್ಟೇಬಲ್​ಯೊಬ್ಬರ ಗುರುತಿನ ಚೀಟಿ ಬಳಸಿಕೊಂಡು ಸಂಚಾರ ಪೊಲೀಸರ ಸೋಗಿನಲ್ಲಿ ಸಂದೇಶ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದ ಕೋಲ್ಕತ್ತಾ ಮೂಲದ ಮೂವರು ವಂಚಕರನ್ನು ನಗರದ ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಮತ್ತು ಸುಭಿರ್ ಮಲ್ಲಿಕ್ ಎಂಬುವವರೇ ಬಂಧಿತರು. ಆರೋಪಿಗಳಿಂದ ಮೂರು ಮೊಬೈಲ್‌ಗಳು, ಬ್ಯಾಂಕ್ ಖಾತೆಗಳ ಜಪ್ತಿ ಮಾಡಲಾಗಿದೆ. ರಂಜನ್ ಕೋಲ್ಕತ್ತಾದಲ್ಲಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಕೆಲಸ ಬಿಟ್ಟಿದ್ದಾನೆ. ಇಸ್ಮಾಯಿಲ್ ಅಲಿ ಸೈಬರ್ ಕೆಫೆ ನಡೆಸುತ್ತಿದ್ದು, ರೈಲು, ಬಸ್, ವಿಮಾನ ಟೆಕೆಟ್ ಬುಕ್ ಮಾಡುತ್ತಿದ್ದ. ಸುಭಿರ್ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ. ಆದರೆ, ಮೃತ ಹೆಡ್‌ ಕಾನ್‌ಸ್ಟೇಬಲ್ ಭಕ್ತರಾಮ್ ಎಂಬುವರ ಗುರುತಿನ ಚೀಟಿ ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿ ಭಕ್ತರಾಮ್, 2020ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮಾಧ್ಯಮಗಳು ಆತನ ಗುರುತಿನ ಚೀಟಿ ಬಳಸಿ ಸುದ್ದಿ ಪ್ರಕಟಿಸಿದ್ದವು. ಈ ಮಧ್ಯೆೆ ರಂಜನ್ ಕುಮಾರ್, ಪೊಲೀಸರ ಹೆಸರಿನಲ್ಲಿ ವಂಚನೆಗೆ ಬಗ್ಗೆೆ ತಿಳಿದುಕೊಂಡಿದ್ದ. ಹೀಗಾಗಿ ಗೂಗಲ್‌ನಲ್ಲಿ ಬೆಂಗಳೂರು ಪೊಲೀಸ್ ಐಡಿ ಎಂದು ಶೋಧಿಸಿದಾಗ, ಮೃತ ಭಕ್ತರಾಮ್ ಗುರುತಿನ ಚೀಟಿ ಸಿಕ್ಕಿತ್ತು. ಆಗ ಆತನ ಫೋಟೋ ಬಳಸಿದ್ದ. ಆದರೆ, ಹೆಸರನ್ನು ಕುಮಾರಸ್ವಾಮಿ ಎಂದು ಬದಲಾಯಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಅಲ್ಲದೇ, ಈ ವಂಚಕರು ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ನಲ್ಲಿ ಫೈನ್ ವಿಭಾಗದಲ್ಲಿ ಒಂದಷ್ಟು ವಾಹನಗಳ ನೋಂದಣಿ ಸಂಖ್ಯೆೆಗಳನ್ನು ಹಾಕಿ ಶೋಧಿಸಿದ್ದಾರೆ. ಆಗ ದಂಡ ಬಾಕಿರುವ ವಾಹನಗಳ ಸಂಖ್ಯೆೆಗಳನ್ನು ಗುರುತಿಸಿಕೊಂಡು, ಅವುಗಳನ್ನು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ದಾಖಲಿಸಿ, ವಾಹನಗಳ ಮಾಲೀಕರ ವಿಳಾಸ, ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದರು. ಬಳಿಕ ನಿರ್ದಿಷ್ಟ ವಾಹನ ಮಾಲೀಕರ ವಾಟ್ಸ್​ಆ್ಯಪ್​ಗೆ ನಾವು ಟ್ರಾಫಿಕ್ ಪೊಲೀಸರು ಹೇಳಿಕೊಂಡು ದಂಡ ಕಟ್ಟುವಂತೆ ಕ್ಯೂಆರ್ ಕೋಡ್ ಸಮೇತ ಸಂದೇಶ ಹಾಗೂ ಮೃತ ಭಕ್ತರಾಮ್ ಗುರುತಿನ ಚೀಟಿ ಕೂಡ ಕಳುಹಿಸಿದ್ದರು. ಅದನ್ನು ನಂಬಿದ ನೂರಾರು ಮಂದಿ ದಂಡ ಪಾವತಿಸಿದ್ದಾರೆ. ಆದರೆ, ಇದುವರೆಗೂ ಯಾರು ದೂರು ನೀಡಿಲ್ಲ ಎಂದು ಸೆನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆೆ ಮಾಹಿತಿ ಪಡೆದುಕೊಂಡ ಬೆಂಗಳೂರು ಸಂಚಾರ ಪೊಲೀಸರು, ಮೃತ ಭಕ್ತರಾಮ್ ಅವರ ಪುತ್ರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಆಕೆ ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಅಡ್ಡಾದಿಡ್ಡಿ ಕಾರು ಚಾಲನೆ ಆರೋಪ: ಸುಮೊಟೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.