ಕರ್ನಾಟಕ

karnataka

ಯುಪಿಐ ಪೇಮೆಂಟ್​ಗಳ ಮೇಲೆ ಸೇವಾ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

By

Published : Aug 22, 2022, 1:18 PM IST

ಯುಪಿಐ ಪೇಮೆಂಟ್​ಗಳ ಮೇಲೆ ಸೇವಾ ಶುಲ್ಕ ವಿಧಿಸುವ ವರದಿಯನ್ನು ಅಲ್ಲಗಳೆದ ವಿತ್ತ ಸಚಿವಾಲಯ, ಸರ್ಕಾರದ ಮುಂದೆ ಇಂತಹ ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

no-service-charge-on-upi-payments
ಯುಪಿಐ ಪೇಮೆಂಟ್​ಗಳ ಮೇಲೆ ಸೇವಾ ಶುಲ್ಕ ವಿಧಿಸಲ್ಲ

ನವದೆಹಲಿ:ಆನ್​ಲೈನ್​ ಹಣ ಪಾವತಿಯಲ್ಲಿ ಕ್ರಾಂತಿ ಉಂಟು ಮಾಡಿರುವ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವುದಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟನೆ ನೀಡಿದೆ. ಯುಪಿಐ, ನೆಫ್ಟ್​ನಂತಹ ಆನ್​ಲೈನ್​ ಪಾವತಿಗಳಿಗೆ ಶುಲ್ಕ ವಿಧಿಸುವ ಬಗ್ಗೆ ರಿಸರ್ವ್ ಬ್ಯಾಂಕ್​ ಜನರ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ಶನಿವಾರ ವರದಿಯಾಗಿತ್ತು.

ಈ ಸುದ್ದಿಗೆ ಸ್ಪಷ್ಟೀಕರಣ ನೀಡಿರುವ ವಿತ್ತ ಸಚಿವಾಲಯ, ಯುಪಿಐ ಪೇಮೆಂಟ್​ ಜನರಿಗೆ ಭಾರಿ ಅನುಕೂಲ ನೀಡಿದೆ. ಇದು ಡಿಜಿಟಲ್​ ಹಣಪಾವತಿಯಲ್ಲಿ ಯಶಸ್ಸು ಸಾಧಿಸಿದೆ. ಜನರ ಅನುಕೂಲಕ್ಕೋಸ್ಕರ ಇರುವ ವ್ಯವಸ್ಥೆಯ ಮೇಲೆ ಯಾವುದೇ ಸೇವಾ ಶುಲ್ಕ ಜಾರಿ ಮಾಡುವುದಿಲ್ಲ ಎಂದು ಹೇಳಿದೆ.

ಯುಪಿಐ ಕಂಪನಿಗಳ ಚೇತರಿಕೆಗೆ ಅನ್ಯ ಕ್ರಮ ಜಾರಿ ಮಾಡಲಾಗುವುದು. ಸರ್ಕಾರ ಕಳೆದ ವರ್ಷ ನೀಡಿದಂತೆ ಈ ವರ್ಷವೂ ಆರ್ಥಿಕ ನೆರವು ನೀಡಲಿದೆ. ಜನರ ಮೇಲೆ ಈ ಹೊರೆಯನ್ನು ಹಾಕುವುದಿಲ್ಲ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಸಮಾಜದ ಜಾಗೃತಿ, ಒಗ್ಗಟ್ಟಿಗೆ ಆರೆಸ್ಸೆಸ್ ಕೆಲಸ: ಮೋಹನ್ ಭಾಗವತ್

ABOUT THE AUTHOR

...view details