ಮೈಸೂರು: ಹುಲಿಯ ಚಲನವಲನ ವೀಕ್ಷಣೆಗೆ ಹಾಕಿದ್ದ ಸಿಸಿಟಿವಿಯಲ್ಲಿ ಚಿರತೆ ಪ್ರತ್ಯಕ್ಷ - ವಿಡಿಯೋ

By ETV Bharat Karnataka Team

Published : Feb 7, 2024, 4:12 PM IST

thumbnail

ಮೈಸೂರು : ಇಲ್ಲಿನ ದೊಡ್ಡ ಕಾನ್ಯಾ ಗ್ರಾಮದಲ್ಲಿ ಹುಲಿಗಳು ಓಡಾಡುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆ ಅವುಗಳ ಚಲನವಲನ ಗಮನಿಸಲು ಅರಣ್ಯ ಇಲಾಖೆ ಸಿಸಿಟಿವಿ ಅಳವಡಿಸಿದೆ. ಆದ್ರೆ ಈ ಸಿಸಿಟಿವಿಯಲ್ಲಿ ಹುಲಿಗಳ ಬದಲಾಗಿ ಚಿರತೆ ಓಡಾಟ ಕಂಡುಬಂದಿದೆ. ಹೀಗಾಗಿ ಈ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಮೈಸೂರು ಸಮೀಪದ ಜಯಪುರ ಹೋಬಳಿಯ ದೊಡ್ಡ ಕಾನ್ಯಾ ಗ್ರಾಮದ ಬಳಿ ಕಳೆದ ಮಂಗಳವಾರ ಎರಡು ಹುಲಿಗಳು ಓಡಾಟ ನಡೆಸಿವೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಗ್ರಾಮಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಗ್ರಾಮಸ್ಥರ ಮಾಹಿತಿಯ ಆಧಾರದ ಮೇಲೆ ಹುಲಿ ಓಡಾಡುತ್ತಿವೆ ಎಂಬ ಸ್ಥಳದಲ್ಲಿ ಸಿಸಿಟಿವಿಯನ್ನ ಅಳವಡಿಸಿದ್ದರು. 

ಇದೀಗ ಸಿಸಿಟಿವಿ ಅಳವಡಿಸಿರುವ ತೋಟದ ಮನೆಯ ಮುಂಭಾಗದ ಗೇಟ್​ನಲ್ಲಿ ಎರಡು ಚಿರತೆಗಳು ಓಡಾಟ ನಡೆಸಿರುವ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಅರಣ್ಯಾಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಅಲ್ಲಿ ಓಡಾಟ ನಡೆಸುತ್ತಿರುವುದು ಹುಲಿಗಳಲ್ಲ, ಚಿರತೆಗಳು ಎಂಬುದು ತಿಳಿದುಬಂದಿದೆ. ಸದ್ಯ ಈ ಚಿರತೆಗಳ ಸೆರೆಗೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮೈಸೂರು: ಮರಿಗಳನ್ನು ಹುಡುಕುತ್ತಾ ಬಂದು ಬೋನಿಗೆ ಬಿದ್ದ ತಾಯಿ ಚಿರತೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.