ETV Bharat / sports

ಈರುಳ್ಳಿ, ಬೆಳ್ಳುಳ್ಳಿಯಲ್ಲಿ ಮೂಡಿಬಂದ ವಿರಾಟ್​ ಕೊಹ್ಲಿ: ಅಭಿಮಾನಿಯ ಸಾಹಸದ ವಿಡಿಯೋ ನೋಡಿ - Virat Kohli

author img

By ETV Bharat Karnataka Team

Published : May 16, 2024, 10:37 PM IST

ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರನ್ನು ಅಭಿಮಾನಿಯೊಬ್ಬ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಮೂಡುವಂತೆ ಮಾಡಿದ್ದಾನೆ. ಪೂರ್ಣ ವಿವರ ಮುಂದೆ ಓದಿ.

ಈರುಳ್ಳಿ, ಬೆಳ್ಳುಳ್ಳಿಯಲ್ಲಿ ಮೂಡಿಬಂದ ವಿರಾಟ್​ ಕೊಹ್ಲಿ
ಈರುಳ್ಳಿ, ಬೆಳ್ಳುಳ್ಳಿಯಲ್ಲಿ ಮೂಡಿಬಂದ ವಿರಾಟ್​ ಕೊಹ್ಲಿ (Source: Video Grab)

ನವದೆಹಲಿ: ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿಗೆ ಭಾರತ ಮಾತ್ರವಲ್ಲ, ಸಪ್ತಸಾಗರದಾಚೆಗೂ ಅಭಿಮಾನಿಗಳಿದ್ದಾರೆ. ಕ್ರಿಕೆಟ್​ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್​ ತೆಂಡೂಲ್ಕರ್​ ಬಳಿಕ ವಿರಾಟ್​ ಕೊಹ್ಲಿ ಅತಿ ಹೆಚ್ಚು ಖ್ಯಾತಿಯಲ್ಲಿರುವ ಭಾರತದ ಕ್ರಿಕೆಟಿಗ.

ಕೋಟ್ಯಂತರ ಜನರ ಆರಾಧಕರಾಗಿರುವ ವಿರಾಟ್​​ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ನಡೆಯುತ್ತಿರುವ ಐಪಿಎಲ್​ನಲ್ಲೂ ಅತ್ಯಧಿಕ ರನ್​ ಗಳಿಸಿದ ಆಟಗಾರ ಕೂಡ ಹೌದು. ರಾಶಿ ರಾಶಿ ರನ್​ ಕಲೆ ಹಾಕಿರುವ ಟೀಂ ಇಂಡಿಯಾದ ರನ್​ ಮಶಿನ್​​​ರ ಚಿತ್ರವನ್ನು ಅಭಿಮಾನಿಯೊಬ್ಬ ಈರುಳ್ಳಿ ಮತ್ತು ಬೆಳ್ಳುಳ್ಳಿ ಒಡಮೂಡುವಂತೆ ಮಾಡಿದ್ದಾನೆ.

ಅಭಿಮಾನಿಯ ಕಸರತ್ತು: ಅಪ್ರತಿಮ ಕ್ರಿಕೆಟಿಗನ ಅಭಿಮಾನಿಯೊಬ್ಬ ಖಾಲಿ ಜಾಗದಲ್ಲಿ ಮೊದಲು ವಿರಾಟ್​ರ ಚಿತ್ರ ಮೂಡುವಂತೆ ರೇಖೆಗಳನ್ನು ಗೀಚಿದ್ದಾನೆ. ಬಳಿಕ ರೇಖೆಗಳುದ್ದಕ್ಕೂ ಬೆಳ್ಳುಳ್ಳಿ, ಈರುಳ್ಳಿಯನ್ನು ಜೋಡಿಸಿದ್ದಾನೆ. ಇದು ಥೇಟ್​ ವಿರಾಟ್​ರಂತೆ ಕಾಣುವಂತೆ ಮಾಡಿದ್ದಾನೆ.

ಇದು ನೋಡುಗರನ್ನು ಬೆರಗಾಗುವಂತೆ ಮಾಡಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಜೋಡಿಸಿದ ಬಳಿಕ ದೂರದಿಂದ ಅದನ್ನು ನೋಡಿದಾಗ ಕೊಹ್ಲಿಯ ಚಿತ್ರವೇ ಅಲ್ಲಿ ಕಾಣುತ್ತದೆ. ಇದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗುತ್ತಿದೆ.

ಈ ಚಿತ್ರವನ್ನ ಬಿಡಿಸಿದ ಅಭಿಮಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ, ತನುಜ್​ ಸಿಂಗ್​ ಎಂಬ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಚಿತ್ರ ಬಿಡಿಸಿದ್ದಾನೆ. ವಿರಾಟ್​ ಕೊಹ್ಲಿ ಎಂದರೆ ಭಾವನಾತ್ಮಕ ಸಂಬಂಧ ಎಂದು ಬರೆದುಕೊಂಡಿದ್ದಾನೆ.

ಆರ್​ಸಿಬಿ ಪ್ಲೇಆಫ್​​ಗೇರಿಸ್ತಾರಾ ವಿರಾಟ್​: ಪ್ರಸ್ತುತ ಐಪಿಎಲ್​ನಲ್ಲಿ ಆರ್​ಸಿಬಿ ತಂಡ 12 ಪಾಯಿಂಟ್ಸ್​​ಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪ್ಲೇಆಫ್​ಗೆ ತಲುಪಲು ಕೊನೆಯ ಲೀಗ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು 18 ಕ್ಕಿಂತ ಹೆಚ್ಚು ರನ್​ ಅಥವಾ 18 ಓವರ್​ ಒಳಗೆ ಗುರಿ ಮುಟ್ಟಬೇಕು. ಆಗ ಸಿಎಸ್​ಕೆಗಿಂತ ಹೆಚ್ಚಿನ ರನ್​​ರೇಟ್​ ಆಧಾರದಲ್ಲಿ ನಾಲ್ಕನೇ ಸ್ಥಾನಿಯಾಗಿ ಟಾಪ್​ ನಾಲ್ಕರಲ್ಲಿ ಸ್ಥಾನ ಪಡೆಯಲಿದೆ. ಇಲ್ಲವಾದಲ್ಲಿ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​, ರಾಜಸ್ಥಾನ ರಾಯಲ್ಸ್​ ಅಧಿಕೃತವಾಗಿ ಪ್ಲೇಆಫ್​ಗೇರಿವೆ. ಸನ್​ರೈಸರ್ಸ್​ ಹೈದರಾಬಾದ್​ ಮೂರನೇ ಸ್ಥಾನ ಪಡೆಯಲಿದೆ. ಕೊನೆಯ ಸ್ಥಾನಕ್ಕಾಗಿ ಸಿಎಸ್​ಕೆ ಮತ್ತು ಆರ್​ಸಿಬಿ ಮಧ್ಯೆ ಪೈಪೋಟಿ ಇದೆ. ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹತ್ವದ ಪಂದ್ಯ ನಡೆಯಲಿದೆ.

ಇದನ್ನೂ ಓದಿ; "ನಿವೃತ್ತಿ ಬಳಿಕ ನಿಮಗೆ ಕಾಣಿಸಲ್ಲ": ಅಭಿಮಾನಿಗಳಲ್ಲಿ ದುಗುಡ ಹುಟ್ಟಿಸಿದ ಟೀಂ ಇಂಡಿಯಾ ಆಟಗಾರನ ಹೇಳಿಕೆ - VIRAT KOHLI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.