ETV Bharat / sports

ಬಾಮೈದನ ಮದುವೆಯಲ್ಲಿ ರೋಹಿತ್ ಶರ್ಮಾ ಭರ್ಜರಿ ಡ್ಯಾನ್ಸ್​

author img

By

Published : Mar 17, 2023, 5:34 PM IST

rohit-sharma-dance-in-brother-in-law-marriage
ಬಾಮೈದನ ಮದುವೆಯಲ್ಲಿ ರೋಹಿತ್ ಶರ್ಮಾ ಭರ್ಜರಿ ಡ್ಯಾನ್ಸ್​

ಹೆಂಡತಿ ತಮ್ಮನ ಮದುವೆಯಲ್ಲಿ ಪಂಜಾಬಿ ಹಾಡಿಗೆ ಭರ್ಜರಿ ಡ್ಯಾನ್ಸ್​ ಮಾಡಿದ ರೋಹಿತ್ ಶರ್ಮಾ. ಟ್ವಿಟರ್​ನಲ್ಲಿ ಟ್ರೆಂಡ್ ಆದ​​ ವಿಡಿಯೋ...

ನವದೆಹಲಿ: ರೋಹಿತ್ ಶರ್ಮಾ ಅವರು ಅವರ ಪತ್ನಿಯ ತಮ್ಮನ ವಿವಾಹದಲ್ಲಿ ಭಾಗವಹಿಸಲು ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದಾರೆ. ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಜೊತೆ ಮದುವೆಯ ಸಂಭ್ರಮವನ್ನು ಆನಂದಿಸುತ್ತಿದ್ದಾರೆ. ರಿತಿಕಾ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ರೋಹಿತ್ ಪಂಜಾಬಿ ಹಾಡುಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ರೋಹಿತ್ ಜೊತೆಯಲ್ಲಿ ಪತ್ನಿ ರಿತಿಕಾ ಕೂಡ ಡ್ಯಾನ್ಸ್ ಮಾಡುತ್ತಿದ್ದಾರೆ.

ತಂಡ ಪ್ರಕಟಿಸುವ ಮೊದಲೇ ಕೌಟುಂಬಿಕ ಕಾರಣದಿಂದ ರೋಹಿತ್​ ಶರ್ಮಾ ಬಿಡುವು ತೆಗೆದುಕೊಂಡಿದ್ದರು. ಮಡಿದಿಯ ತಮ್ಮನ ಮದುವೆ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ದೂರ ಉಳಿದಿದ್ದರು. ಅವರ ಬದಲಾಗಿ ಇಂದು ವಾಂಖೆಡೆಯಲ್ಲಿ ನಡೆಯುತ್ತಿರುವ ಪಂದ್ಯದಲಿ ಹಾರ್ದಿಕ್​ ಪಾಂಡ್ಯಾಗೆ ನಾಯಕತ್ವ ನೀಡಲಾಗಿದೆ.

ಮಾರ್ಚ್ 19, 22 ರಂದು ನಡೆಯಲಿರುವ ಎರಡು ಮತ್ತು ಮೂರನೇ ಏಕದಿನ ಪಂದ್ಯಗಳಲ್ಲಿ ರೋಹಿತ್ ತಂಡದ ಭಾಗವಾಗಲಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ ತಂಡದ ನಾಯಕರಾಗಿರುತ್ತಾರೆ. ಎರಡನೇ ಏಕದಿನ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಬೆನ್ನುನೋವಿನ ಕಾರಣ ಶ್ರೇಯಸ್ ಅಯ್ಯರ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿ ತಂಡಕ್ಕೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ.

ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಬೆನ್ನುನೋವಿನ ಕಾರಣ ಅಯ್ಯರ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಲಾಗಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಆಸ್ಟ್ರೇಲಿಯಾ ವಿರುದ್ಧದ ತಂಡದಲ್ಲಿಲ್ಲ. ಅವರಿಗೆ ವಿದೇಶದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಅತ್ತ ಆಸ್ಟ್ರೇಲಿಯಾಕ್ಕೂ ಗಾಯದ ಬರೆ ಬಿದ್ದಿದೆ. ಆರಂಭಿಕ ವಾರ್ನರ್​ ಎರಡನೇ ಟೆಸ್ಟ್​ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಅವರೂ ತಂಡಕ್ಕೆ ಮರಳಿಲ್ಲ.

ತಾಯಿಯ ಮರಣದಿಂದಾಗಿ ಪ್ಯಾಟ್​ ಕಮಿನ್ಸ್​ ಸಹ ಆಸಿಸ್​ ತಂಡಕ್ಕೆ ಸೇರಿಲ್ಲ. ಅವರು ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇತ್ತ ತಂಡದಲ್ಲಿ ಅಲೆಕ್ಸ್ ಕ್ಯಾರಿ ಅನಾರೋಗ್ಯದಿಂದ ಬಳಲುತ್ತಿದ್ದು, ತವರಿಗೆ ಮರಳಲಿದ್ದಾರೆ. ಇಂದಿನ ಪಂದ್ಯದಲ್ಲಿ ಅವರ ಜಾಗದಲ್ಲಿ ಜೋಶ್ ಇಂಗ್ಲಿಸ್ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್​ ವೇಳೆ ಗಾಯಗೊಂಡು ಸ್ವದೇಶಕ್ಕೆ ಮರಳಿದ್ದ ಡೇವಿಡ್ ವಾರ್ನರ್ ಇನ್ನೂ ಸಂಪೂರ್ಣ ಫಿಟ್ ಆಗದ ಕಾರಣ ಮಿಚೆಲ್​ ಮಾರ್ಷ್ ಆರಂಭಿಕನಾಗಿ ಬ್ಯಾಟ್ ಬೀಸುತ್ತಿದ್ದಾರೆ.

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ಅಗ್ರಸ್ಥಾನವನ್ನು ಕಾಪಾಡಿಕೊಳ್ಳಲು ಈ ಸರಣಿಯ ಗೆಲುವು ಪ್ರಮುಖವಾಗಿದೆ. ಅಲ್ಲದೇ ತವರಿನಲ್ಲಿ ಅಕ್ಟೋಬರ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಹಿನ್ನಲೆಯಲ್ಲೂ ಈ ಪಂದ್ಯಗಳು ಪ್ರಮುಖವಾಗಿದೆ. ವಿಶ್ವಕಪ್​ಗೂ ಮುನ್ನ ಏಕದಿನ ಮಾದರಿಯಲ್ಲಿ ಏಷ್ಯಾಕಪ್​ ನಡೆಯಲಿದೆ. ಭಾರತಕ್ಕೆ ಈ ಎರಡು ಪ್ರತಿಷ್ಠತಿ ಕಪ್​ಗೆ ಬಲಿಷ್ಠ ತಂಡವನ್ನು ಕಟ್ಟುವ ಉದ್ದೇಶದಿಂದ ಇದು ಅತ್ಯಂತ ಪ್ರಮುಖವಾದ ಸರಣಿಯಾಗಿದೆ

ಇದನ್ನೂ ಓದಿ: "ಚಾಂಪಿಯನ್​ ರೈಸ್​ ಅಗೈನ್", ಪಂತ್​ ಭೇಟಿಯಾದ ಯುವರಾಜ್​ ಸಿಂಗ್ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.