ETV Bharat / sports

ಹೈದರಾಬಾದ್​ v/s ಗುಜರಾತ್ ಪಂದ್ಯಕ್ಕೆ ಮಳೆ ಅಡ್ಡಿ: ಮ್ಯಾಚ್​ ರದ್ದಾದರೆ ಏನಾಗುತ್ತೆ? - SRH vs GT match

author img

By ETV Bharat Karnataka Team

Published : May 16, 2024, 8:13 PM IST

Updated : May 16, 2024, 8:55 PM IST

ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಗುಜರಾತ್​ ಟೈಟಾನ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಐಪಿಎಲ್​ 2024
ಐಪಿಎಲ್​ 2024 (File Photo ETV Bharat)

ಹೈದರಾಬಾದ್: ಪ್ಲೇಆಫ್​ ಸ್ಥಾನ ಭದ್ರ ಮಾಡಿಕೊಳ್ಳುವ ತವಕದಲ್ಲಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ವರುಣರಾಯ ತುಸು ಅಡ್ಡಿ ಉಂಟು ಮಾಡಿದ್ದಾನೆ. ನೈಋತ್ಯ ಮಾನ್ಸೂನ್​ ಅಬ್ಬರದಿಂದಾಗಿ ಹೈದರಾಬಾದ್​ನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಗುಜರಾತ್​ ಟೈಟಾನ್ಸ್​ ಎದುರಿನ ಪಂದ್ಯಕ್ಕೆ ಅಡ್ಡಿಯಾಗಿದೆ.

ಸಂಜೆ 7.30 ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯಿಂದಾಗಿ ತಡವಾಗುತ್ತಿದೆ. ಸಂಜೆಯಿಂದಲೂ ಮಳೆ ಸುರಿಯುತ್ತಿದ್ದ ಕಾರಣ, ಟಾಸ್​ ವಿಳಂಬವಾಯಿತು. 7.45ಕ್ಕೆ ಮಳೆ ನಿಂತ ಬಳಿಕ 8 ಗಂಟೆಗೆ ಟಾಸ್​ ಮಾಡುವ ಬಗ್ಗೆ ಮಾಹಿತಿ ಬಂದಿತು. ಆದರೆ, ಮತ್ತೆ ಸಣ್ಣದಾಗಿ ಮಳೆ ಆರಂಭವಾಗಿದ್ದು, ಟಾಸ್​ ಮತ್ತಷ್ಟು ವಿಳಂಬವಾಗಲಿದೆ. ಪಂದ್ಯ ಒಂದು ಗಂಟೆಗೂ ಅಧಿಕ ವಿಳಂಬವಾದಲ್ಲಿ ಓವರ್​ ಕಡಿತವಾಗಲಿದೆ. ಮೈದಾನವನ್ನು ಕವರ್​ಗಳಿಂದ ಮುಚ್ಚಲಾಗಿದೆ.

ಪಂದ್ಯ ರದ್ದಾದರೆ ಏನಾಗುತ್ತೆ: ಮಳೆಯಿಂದ ಪಂದ್ಯ ರದ್ದಾದರೂ ಹೈದರಾಬಾದ್​ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲ. ಆಡಿರುವ 12 ಪಂದ್ಯಗಳಿಂದ 7 ಗೆಲುವಿನೊಂದಿಗೆ 14 ಪಾಯಿಂಟ್ಸ್​ ಹೊಂದಿರುವ ಹೈದರಾಬಾದ್​ ಪ್ಲೇಆಫ್​ಗೆ ಅಧಿಕೃತವಾಗಿ ಎಂಟ್ರಿ ಪಡೆಯಲು ಇನ್ನೊಂದು ಗೆಲುವು ಬಾಕಿ ಇದೆ. ಉಳಿದ ಎರಡು ಪಂದ್ಯಗಳಲ್ಲಿ ಒಂದು ಗೆದ್ದರೂ ಸಾಕು.

ಗುಜರಾತ್​ ವಿರುದ್ಧದ ಇಂದಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ಇತ್ತಂಡಗಳಿಗೆ ತಲಾ 1 ಅಂಕ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಹೈದರಾಬಾದ್​ ನೇರವಾಗಿ ಪ್ಲೇಆಫ್​ಗೇರಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಗುಜರಾತ್​ ತಂಡ ಯಾವುದೇ ಫಲಿತಾಂಶವಿಲ್ಲದೇ, 2024 ರ ಆವೃತ್ತಿಗೆ ವಿದಾಯ ಹೇಳಲಿದೆ.

ಇದನ್ನೂ ಓದಿ: ಐಪಿಎಲ್​ನಲ್ಲಿಂದು ಹೈದರಾಬಾದ್​ಗೆ ಗುಜರಾತ್ ಸವಾಲು: ಪ್ಲೇ ಆಫ್​ಗೆ ಎಂಟ್ರಿ ತವಕದಲ್ಲಿ ಸನ್​ರೈಸರ್ಸ್ - Sunrisers aim to seal playoff berth

Last Updated : May 16, 2024, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.