ETV Bharat / sports

"ಚಾಂಪಿಯನ್​ ರೈಸ್​ ಅಗೈನ್", ಪಂತ್​ ಭೇಟಿಯಾದ ಯುವರಾಜ್​ ಸಿಂಗ್ ​

author img

By

Published : Mar 17, 2023, 4:41 PM IST

champion is going to rise again Yuvraj Singh meet Rishabh Pant
"ಚಾಂಪಿಯನ್​ ರೈಸ್​ ಅಗೈನ್", ಪಂತ್​ ಭೇಟಿಯಾದ ಯುವರಾಜ್​ ಸಿಂಗ್ ​

ರಿಷಬ್​ ಪಂತ್​ ಭೇಟಿಯಾದ ಯುವರಾಜ್​ ಸಿಂಗ್​ ಟ್ವಿಟರ್​ನಲ್ಲಿ ಫೋಟೋ ಹಂಚಿಕೊಂಡು ಮಗುವಿನ ಹೆಜ್ಜೆ ಇಡುತ್ತಿರುವ ಚಾಂಪಿಯನ್ ಮತ್ತೆ ಮರಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ನವದೆಹಲಿ: "ಚಾಂಪಿಯನ್​ ರೈಸ್​ ಅಗೈನ್" ಎಂದು ಭಾರತದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ಪಂತ್​ ಬಗ್ಗೆ ಬರೆದುಕೊಂಡಿದ್ದಾರೆ. ಗುರುವಾರ ರಿಷಬ್​ ಪಂತ್​ ಅವರನ್ನು ಭೇಟಿಯಾಗಿರುವ ಸಿಕ್ಸರ್​ ​ವೀರ ಯುವರಾಜ್​ ಟ್ವಿಟರ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಯುವರಾಜ್​ ಸಿಂಗ್​ 2011 ಏಕದಿನ ವಿಶ್ವಕಪ್​ ವೇಳೆ ಮೆಡಿಯಾಸ್ಟೈನಲ್ ಸೆಮಿನೋಮಾ ಕ್ಯಾನ್ಸರ್​ಗೆ ತುತ್ತಾಗಿದ್ದರು. ಅವರು ಕ್ಯಾನ್ಸರ್​ ವಿರುದ್ಧ ಹೋರಾಡಿ ಗೆದ್ದು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾಗುವ ಮೂಲಕ ಹಲವಾರು ಜನರಿಗೆ ಸ್ಫೂರ್ತಿಯಾಗಿದ್ದರು. ಅವರು ಕ್ಯಾನ್ಸ್​ರ್​ನಿಂದ ಚೇತರಿಸಿಕೊಂಡು ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಮಾರ್ಚ್ 2012 ರಲ್ಲಿ ಅವರ ಮೂರನೇ ಮತ್ತು ಅಂತಿಮ ಕೀಮೋಥೆರಪಿ ಚಿಕಿತ್ಸೆಗೆ ಒಳಗಾದರು. ನಂತರ ಯುವರಾಜ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮತ್ತೆ ವೃತ್ತಿ ಜೀವನಕ್ಕೆ ಮರಳಿದ್ದರು.

  • On to baby steps !!! This champion is going to rise again 🔜 .was good catching up and having a laugh 😅what a guy positive and funny always !! More power to you 🤛 💫 @RishabhPant17 pic.twitter.com/OKv487GrRC

    — Yuvraj Singh (@YUVSTRONG12) March 16, 2023 " class="align-text-top noRightClick twitterSection" data=" ">

ಟ್ವಿಟರ್​ನಲ್ಲಿ ರಿಷಬ್​ ಪಂತ್​ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಯುವರಾಜ್​ ಸಿಂಗ್​ ಪಂತ್​ ಅವರು ಅಂಬೆಗಾಲು ಇಡುತ್ತಿದ್ದಾರೆ. ಮತ್ತೆ ಚಾಂಪಿಯನ್​ ತಂಡದಲ್ಲಿ ಮಿಂಚಲಿದ್ದಾರೆ ಎಂದು ಭರವಸೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಮಗುವಿನ ಹೆಜ್ಜೆಗಳ ಮೇಲೆ!!! ಈ ಚಾಂಪಿಯನ್ ಮತ್ತೆ ಮರಳಲಿದ್ದಾರೆ. ಸುದೀರ್ಘ ಮಾತುಕತೆ ಮತ್ತು ಒಂದಿಷ್ಟು ನಗು. ಧನಾತ್ಮಕ ವ್ಯಕ್ತಿತ್ವ ಮತ್ತು ಯಾವಾಗಲೂ ತಮಾಷೆ!! ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ರಿಷಬ್​ ಪಂತ್​ (@rishabpant)" ಎಂದು ಪೋಸ್ಟ್ ಮಾಡಿದ್ದಾರೆ.

ರಿಷಬ್​ ಪಂತ್​ ಅಪರೂಪದಲ್ಲಿ ಟ್ವಿಟರ್​ನಲ್ಲಿ ತಮ್ಮ ಕೆಲ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬುಧವಾರ ಟ್ವಿಟರ್​ನಲ್ಲಿ ಪಂತ್​ ಸ್ವಿಮಿಂಗ್​ ಪೂಲ್​ನಲ್ಲಿ ನಡೆಯುತ್ತಿರುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಊರುಗೋಲು ಬಳಸಿ ನಡೆಯುತ್ತಿದ್ದಾರೆ. ಆದಷ್ಟು ಬೇಗ ಕ್ರಿಕೆಟ್ ಪೀಲ್ಡ್​ಗೆ​ ಪಂತ್​ ಮರಳಬೇಕು ಎಂದು ಅಭಿಮಾನಿಗಳ ಜೊತೆಗೆ ಮಾಜಿ ಆಟಗಾರರು ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪಂತ್​ ಸ್ವಿಮಿಂಗ್​ ಪೂಲ್​ನ ಫೋಟೋದ ವಿಡಿಯೋಕ್ಕೆ"ಸಣ್ಣ, ದೊಡ್ಡ ವಿಷಯಗಳಿಗೆ ಮತ್ತು ನಡುವೆ ಇರುವ ಎಲ್ಲದಕ್ಕೂ ಕೃತಜ್ಞರಾಗಿರುತ್ತೇನೆ" ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಟ್ವಿಟರ್​ನಲ್ಲಿ ನಡೆದಾಡುವ ಫೋಟೋ ಹಂಚಿಕೊಂಡು "ಒಂದು ಹೆಜ್ಜೆ ಮುಂದಕ್ಕೆ, ಒಂದು ಹೆಜ್ಜೆ ಬಲವಾಗಿ, ಒಂದು ಉತ್ತಮವಾದ ಹೆಜ್ಜೆ" ಎಂದು ಬರೆದು ಪೋಸ್ಟ್​ ಮಾಡಿಕೊಂಡಿದ್ದರು.

2023ರಲ್ಲಿ ಪಂತ್ ಬಹುತೇಕ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ. ಈ ವರ್ಷದ ಐಪಿಎಲ್​ಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಡೇವಿಡ್ ವಾರ್ನರ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಆಲ್​ರೌಂಡರ್​ ಅಕ್ಷರ್​ ಪಟೇಲ್​ ಅವರನ್ನು ಉಪನಾಯಕನಾಗಿ ನೇಮಕ ಮಾಡಿದೆ. ಐಪಿಎಲ್​ ನಂತರದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ವೇಳೆಗೆ ಪಂತ್ ಚೇತರಿಕೆ ಸಾಧ್ಯ ಇಲ್ಲ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದರು.

ಡಿಸೆಂಬರ್​ 30 ರಂದು ದೆಹಲಿಯಿಂದ ಡೆಹ್ರಾಡೂನ್​ನಲ್ಲಿರುವ ಮನೆಗೆ ರಿಷಬ್​ ಪಂತ್​ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್​ಗೆ ದಿಕ್ಕಿಹೊಡೆದು ಗಂಭೀರ ಗಾಯಗೊಂಡಿದ್ದರು. ಅಪಘಾತ ಪರಿಣಾಮ ಕಾರು ಸ್ಥಳದಲ್ಲೇ ಹೊತ್ತಿ ಉರಿದಿತ್ತು. ಪಂತ್​ ಅವರನ್ನು ಬಸ್​ ಚಾಲಕ ಮತ್ತು ನಿರ್ವಹಕ ರಕ್ಷಿಸಿದ್ದರು.

ಇದನ್ನೂ ಓದಿ: IPL​ ಬಿಟ್ಟು ಬಿಗ್​ಬ್ಯಾಷ್​ ಆಯ್ದುಕೊಂಡ ಬಾಬರ್​! ಹರ್ಭಜನ್​ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.