ETV Bharat / sports

ಓವರ್​ನಲ್ಲಿ 6 ಸಿಕ್ಸರ್, 19 ಎಸೆತಗಳಲ್ಲಿ 83 ರನ್.. ಟಿ-10 ಲೀಗ್​ನಲ್ಲಿ ಯುವ ಕ್ರಿಕೆಟರ್​ ದಾಖಲೆ!​

author img

By

Published : Jun 5, 2022, 9:53 PM IST

krishna-pandey-hits
ದಾಖಲೆ ನಿರ್ಮಿಸಿದ ಯುವ ಕ್ರಿಕೆಟರ್​

ಟಿ-20 ಬಂದ ಮೇಲೆ ಸಿಕ್ಸರ್​ ಸಿಡಿಸುವುದು ಅತಿ ಸುಲಭವಾಗಿದೆ. ಇದೀಗ ಟಿ10 ಲೀಗ್​ ಕೂಡ ಅದೇ ಮಾದರಿಯ ರೋಚಕತೆಯನ್ನು ಸೃಷ್ಟಿಸಿದೆ. ಪುದುಚೇರಿಯಲ್ಲಿ ನಡೆದ ಲೀಗ್​​ನಲ್ಲಿ ಯುವ ಆಟಗಾರನೊಬ್ಬ ಯುವರಾಜ್​ಸಿಂಗ್​ರಂತೆ 6 ಬಾಲ್​ಗಳಲ್ಲಿ 6 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದ್ದಾರೆ.

ಕ್ರಿಕೆಟ್​ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಎಂದಾಗ ತಕ್ಷಣಕ್ಕೆ ನೆನಪಾಗುವುದೇ ಭಾರತದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್​. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ 6x6 ಹೊಡೆದು ಕ್ರಿಕೆಟ್​ ಪಾಠ ಮಾಡಿದ್ದರು. ಇದಾದ ಬಳಿಕ ವೆಸ್ಟ್​ ಇಂಡೀಸ್​ನ ಕಿರನ್​ ಪೊಲಾರ್ಡ್​ ಕೂಡ ಇದೇ ಸಾಧನೆಯನ್ನು ಮಾಡಿದ್ದರು.

ಇದೀಗ ಯುವ ಆಟಗಾರನೊಬ್ಬ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದಾರೆ. ಅದೂ ಟಿ-10 ಲೀಗ್​ನಲ್ಲಿ ಎಂಬುದು ವಿಶೇಷ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಆ ಸಾಧಕನ ಹೆಸರು ಕೃಷ್ಣ ಪಾಂಡೆ.

6 ಸಿಕ್ಸರ್ ಸಿಡಿಸಿದ ಕೃಷ್ಣ ಪಾಂಡೆ: ಪುದುಚೇರಿಯಲ್ಲಿ ನಡೆದ ಟಿ-10 ಲೀಗ್​ನಲ್ಲಿ ಪೆಟ್ರಿಯಾಟ್ಸ್ ತಂಡದ ಬಲಗೈ ದಾಂಡಿಗ ಕೃಷ್ಣ ಪಾಂಡೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ. ಶನಿವಾರ ನಡೆದ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೃಷ್ಣ ಪಾಂಡೆ ಬೌಲರ್ ನಿತೇಶ್ ಠಾಕೂರ್ ಎಸೆದ ಓವರ್​ನಲ್ಲಿ ಮೈದಾನದಲ್ಲಿ ಸಿಕ್ಸರ್ ಮಳೆ ಸುರಿಸಿದರು. ಸತತ 6 ಎಸೆತಗಳಲ್ಲಿ ಬೌಂಡರಿ ಗೆರೆ ದಾಟಿಸಿದರು. ಇದಲ್ಲದೇ, ಪಂದ್ಯದಲ್ಲಿ ಕೇವಲ 19 ಎಸೆತಗಳನ್ನು ಆಡಿದ ಕೃಷ್ಣ ಪಾಂಡೆ ಸತತ 12 ಸಿಕ್ಸರ್ ಬಾರಿಸಿ ಒಟ್ಟು 83 ರನ್ ಗಳಿಸಿದರು.

ಯುವ ಆಟಗಾರನ ಸಿಕ್ಸರ್​ ಅಬ್ಬರ ಎಷ್ಟಿತ್ತೆಂದರೆ, 19 ಎಸೆತಗಳಲ್ಲಿ ಕೃಷ್ಣ ಪಾಂಡೆ ಬಾರಿಸಿದ್ದು 12 ಸಿಕ್ಸರ್​. ಸಿಕ್ಸರ್​ಗಳಿಂದಲೇ ಈತ 72 ರನ್​ ಬಾರಿಸಿದ್ದಾನೆ. ಪಾಂಡೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಆದಾಗ್ಯೂ, ಪೆಟ್ರಿಯಾಟ್ಸ್ ತಂಡ ಪಂದ್ಯವನ್ನು 4 ರನ್‌ಗಳಿಂದ ಕೈಚೆಲ್ಲಿದೆ.

ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ 2007ರ ವಿಶ್ವಕಪ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅತಿವೇಗದ ದಾಖಲೆ ಮಾಡಿದ್ದರು. ಇದೀಗ ಕೃಷ್ಣ ಪಾಂಡೆ ಆ ದಾಖಲೆಯನ್ನು ಮೀರಿಸಿದ್ದಾರೆ.

ಓದಿ: ಲಾರ್ಡ್ಸ್‌ ಟೆಸ್ಟ್ : ಕಿವೀಸ್​ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ.. ಮೈದಾನದಲ್ಲಿ ಮರುಕಳಿಸಿದ 2019ರ ವಿಶ್ವಕಪ್​ ಘಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.