ETV Bharat / sports

ಪಾಕ್​ ಪ್ರವಾಸ ರದ್ದುಗೊಳಿಸಲು ನಾವು ಇಂಗ್ಲೆಂಡ್ ತಂಡಕ್ಕೆ ಹೇಳಿಲ್ಲ: ಬ್ರಿಟಿಷ್ ಹೈಕಮಿಷನರ್

author img

By

Published : Sep 22, 2021, 4:54 PM IST

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಖುದ್ದಾಗಿ ತೆಗೆದುಕೊಂಡಿರುವ ನಿರ್ಧಾರ ಇದು. ಇದರಲ್ಲಿ ನಾವು ಯಾವುದೇ ರೀತಿ ಹಸ್ತಕ್ಷೇಪ ಮಾಡಿಲ್ಲ- ಬ್ರಿಟಿಷ್​ ಹೈಕಮಿಷನ್

Pakistan tour
Pakistan tour

ಲಂಡನ್​: ಭದ್ರತೆಯ ಕಾರಣ ನೀಡಿ ಇಂಗ್ಲೆಂಡ್ ಕ್ರಿಕೆಟ್​ ತಂಡ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದು, ಬ್ರಿಟಿಷ್​ ಹೈಕಮಿಷನ್​​ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಪಾಕಿಸ್ತಾನಕ್ಕೆ ಪತ್ರ ಬರೆದಿರುವ ಬ್ರಿಟಿಷ್​ ಹೈಕಮಿಷನ್​, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಖುದ್ದಾಗಿ ತೆಗೆದುಕೊಂಡಿರುವ ನಿರ್ಧಾರ ಇದು. ಇದರಲ್ಲಿ ನಾವು ಯಾವುದೇ ರೀತಿ ಹಸ್ತಕ್ಷೇಪ ಮಾಡಿಲ್ಲ. ಈ ಹಿಂದೆ ಪಾಕ್​ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್ ಬೋರ್ಡ್​​ ನಿರ್ಧಾರಿಸಿದಾಗ ನಾವು ಅದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೆವು ಎಂದು ಹೇಳಿಕೊಂಡಿದೆ. ಇದರ ಜೊತೆಗೆ 2022ರಲ್ಲಿ ಪಾಕ್ ಪ್ರವಾಸ ಕೈಗೊಂಡು ಟಿ-20 ಸರಣಿಯಲ್ಲಿ ಭಾಗಿಯಾಗುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನ ಕೈಗೊಳ್ಳುವುದಾಗಿಯೂ ಭರವಸೆ ನೀಡಿದೆ.

ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ಇಸಿಬಿ ಈ ನಿರ್ಧಾರ ಕೈಗೊಂಡಿದೆ. ಇದಕ್ಕೆ ನಾವು ಸಂಪೂರ್ಣವಾಗಿ ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿದೆ. ಇತ್ತೀಚೆಗೆ, 18 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್​ ಭದ್ರತೆ ಕಾರಣ ನೀಡಿ, ತಮ್ಮ ಪ್ರವಾಸ ಮೊಟಕುಗೊಳಿಸಿತ್ತು. ಇದೇ ಹಾದಿ ತುಳಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಮುಂದಿನ ತಿಂಗಳು ಪಾಕ್​ ನೆಲದಲ್ಲಿ ನಡೆಯಬೇಕಾಗಿದ್ದ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್​ ಸರಣಿ ರದ್ದುಗೊಳಿಸಿದೆ.

ಇದನ್ನೂ ಓದಿ: ಪಾಕ್​​ ಕ್ರಿಕೆಟ್​ಗೆ ಮತ್ತೆ ಮುಖಭಂಗ: ಕಿವೀಸ್​​​​ ಬೆನ್ನಲ್ಲೇ ಇಂಗ್ಲೆಂಡ್​ನಿಂದಲೂ ಪಾಕ್​ ಪ್ರವಾಸ ರದ್ಧು

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಪಾಕ್​ ವಿರುದ್ಧದ ಪ್ರವಾಸ ರದ್ದು ಮಾಡಿಕೊಳ್ಳುತ್ತಿದ್ದಂತೆ ಪಾಕ್‌ನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್​, ಪಿಸಿಬಿ ಅಧ್ಯಕ್ಷ ರಮೀಜ್​ ರಾಜಾ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.