ಪಾಕ್​​ ಕ್ರಿಕೆಟ್​ಗೆ ಮತ್ತೆ ಮುಖಭಂಗ: ಕಿವೀಸ್​​​​ ಬೆನ್ನಲ್ಲೇ ಇಂಗ್ಲೆಂಡ್​ನಿಂದಲೂ ಪಾಕ್​ ಪ್ರವಾಸ ರದ್ಧು

author img

By

Published : Sep 20, 2021, 10:18 PM IST

england

ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಳ್ಳಬೇಕಾಗಿದ್ದ ಇಂಗ್ಲೆಂಡ್ ಇದೀಗ ಆಟಗಾರರ ಯೋಗಕ್ಷೇಮದ ದೃಷ್ಠಿಯಿಂದ ಸರಣಿ ರದ್ಧು ಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದೆ.

ಲಂಡನ್​​: ಭದ್ರತೆ ಕಾರಣ ನೀಡಿ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್​ಗಳ ಕ್ರಿಕೆಟ್​ ಸರಣಿ ರದ್ಧು ಮಾಡಿಕೊಂಡಿರುವ ನ್ಯೂಜಿಲ್ಯಾಂಡ್ ತಂಡ ಈಗಾಗಲೇ ತವರಿಗೆ ವಾಪಸ್​​ ಆಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಅವಮಾನಕರ ಬೆಳವಣಿಗೆ ನಡೆದಿದೆ.

ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಾಗಿದ್ದ ಇಂಗ್ಲೆಂಡ್ ಪುರುಷ ಹಾಗೂ ಮಹಿಳಾ ತಂಡ ತಮ್ಮ ಪ್ರವಾಸ ರದ್ದು ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್​ ಕ್ರಿಕೆಟ್ ಬೋರ್ಡ್​ ಟ್ವೀಟ್ ಮಾಡಿ ಮಾಹಿತಿ ಶೇರ್ ಮಾಡಿಕೊಂಡಿದೆ.

ಆಟಗಾರರು ಹಾಗೂ ಕ್ರಿಕೆಟ್ ಸಿಬ್ಬಂದಿ ಯೋಗಕ್ಷೇಮದ ದೃಷ್ಠಿಯಿಂದ ಈ ಪ್ರವಾಸ ರದ್ಧು ಮಾಡಿಕೊಳ್ಳುತ್ತಿರುವುದಾಗಿ ಇಸಿಬಿ ತಿಳಿಸಿದ್ದು, ನ್ಯೂಜಿಲ್ಯಾಂಡ್ ಹಾದಿ ಅನುಸರಿಸಿದೆ.

  • "We can confirm that the Board has reluctantly decided to withdraw both teams from the October trip."

    🇵🇰 #PAKvENG 🏴󠁧󠁢󠁥󠁮󠁧󠁿

    — England Cricket (@englandcricket) September 20, 2021 " class="align-text-top noRightClick twitterSection" data=" ">

ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಹೆಚ್ಚುತ್ತಿರುವ ಆತಂಕದ ಬಗ್ಗೆ ನಮಗೆ ತಿಳಿದಿದೆ. ಜೊತೆಗೆ ಕೋವಿಡ್​​ನಿಂದಾಗಿ ಈ ಪ್ರವಾಸ ರದ್ಧುಗೊಳಿಸುತ್ತಿದ್ದೇವೆ ಎಂದು ಇಂಗ್ಲೆಂಡ್​ ವೇಲ್ಸ್​​ ಕ್ರಿಕೆಟ್ ಮಂಡಳಿ ಹೇಳಿಕೊಂಡಿದೆ. ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್​ ಪುರುಷರ ತಂಡ ಎರಡು ಟಿ-20 ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಬೇಕಾಗಿತ್ತು. ಇದರ ಜೊತೆಗೆ ಮಹಿಳೆಯರ ತಂಡ ಕೂಡ ಪಾಕಿಸ್ತಾನದ ಪ್ರವಾಸ ಕೈಗೊಳ್ಳಬೇಕಾಗಿತ್ತು.

ಇದನ್ನೂ ಓದಿ: ಕೇರಳದಲ್ಲಿ ಆಟೋ ಡ್ರೈವರ್​ಗೆ ಒಲಿದ ಅದೃಷ್ಟ ಲಕ್ಷ್ಮಿ: 12 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ

ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್​ ತಂಡ ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೆಲ ನಿಮಿಷ ಬಾಕಿ ಇರುವಾಗಲೇ ಭದ್ರತೆ ಕಾರಣ ನೀಡಿ, ಸರಣಿ ರದ್ಧು ಮಾಡಿಕೊಂಡಿತ್ತು. ಇದೀಗ ಇಂಗ್ಲೆಂಡ್​ ಕೂಡ ಅದೇ ರೀತಿಯ ನಿರ್ಧಾರ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.