ETV Bharat / bharat

ಬೆಂಗಳೂರಿನಿಂದ ತೆರಳುತ್ತಿದ್ದ ರವಿಶಂಕರ್ ಗುರೂಜಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

author img

By

Published : Jan 25, 2023, 5:48 PM IST

Updated : Jan 25, 2023, 7:03 PM IST

ravi-shankars-helicopter-makes-emergency-landing-in-tamil-nadu
ಬೆಂಗಳೂರಿನಿಂದ ತೆರಳುತ್ತಿದ್ದ ರವಿಶಂಕರ್ ಗುರೂಜಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲದಲ್ಲಿ ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇಂದು ಬೆಳಗ್ಗೆ ತುರ್ತು ಭೂಸ್ಪರ್ಶ ಮಾಡಿದೆ.

ರವಿಶಂಕರ್ ಗುರೂಜಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಈರೋಡ್ (ತಮಿಳುನಾಡು): ಆರ್ಟ್​ ಆಫ್​ ಲಿವಿಂಗ್​ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ರವಿಶಂಕರ್ ಮತ್ತು ಇತರ ಇಬ್ಬರು ಖಾಸಗಿ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ಸತ್ಯಮಂಗಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂದು ಬೆಳಗ್ಗೆ 10.50ರ ಸುಮಾರಿಗೆ ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ರವಿಶಂಕರ್ ಗುರೂಜಿ ಸೇರಿದಂತೆ ಹೆಲಿಕಾಪ್ಟರ್​ನಲ್ಲಿದ್ದ ಎಲ್ಲರೂ ಸಹ ಸುರಕ್ಷಿತವಾಗಿದ್ದಾರೆ. ತುರ್ತು ಭೂಸ್ಪರ್ಶದ 30 ನಿಮಿಷಗಳ ನಂತರ ಎಂದರೆ 11.20ರ ಸುಮಾರಿಗೆ ಆಕಾಶವು ತಿಳಿಯಾದಾಗ ಹೆಲಿಕಾಪ್ಟರ್ ಮತ್ತೆ ಟೇಕ್ ಆಫ್ ಆಯಿತು ಎಂದು ತಿಳಿದು ಬಂದಿದೆ.

ಹುಲಿ ಸಂರಕ್ಷಿತ ಪ್ರದೇಶ: ರವಿಶಂಕರ್ ಗುರೂಜಿ ಮತ್ತವರ ಇಬ್ಬರು ಸಹಾಯಕರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತಿರುಪುರ್ ಗಂಗೆಯಂ ಮೂಲಕ ತಿರುವನಂತಪುರಕ್ಕೆ ತೆರಳುತ್ತಿದ್ದರು. ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಉಗಿನಿಯಂ ಗ್ರಾಮದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತು. ದಟ್ಟ ಮಂಜಿನಿಂದಾಗಿ ಹೆಲಿಕಾಪ್ಟರ್ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅರಣ್ಯದ ಮಧ್ಯೆಯಲ್ಲಿದ್ದ ಈ ಗ್ರಾಮದಲ್ಲಿ ಹೆಲಿಕಾಪ್ಟರ್ ಲ್ಯಾಂಡ್​ ಮಾಡಲಾಯಿತು. ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್​ ಆಗಿರುವ ವಿಷಯ ತಿಳಿದು ಸುತ್ತ-ಮುತ್ತಲಿನ ಜನರು ಸ್ಥಳಕ್ಕೆ ದೌಡಾಯಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕರು ಹೆಲಿಕಾಪ್ಟರ್ ಬಳಿ ಬಂದು ಜಮಾಯಿಸಿದರು. ಈ ವೇಳೆ ಜನರ ಮಧ್ಯೆಯೇ ರವಿಶಂಕರ್ ಗುರೂಜಿ ಇದ್ದರು.

ಗ್ರಾಮಸ್ಥರಿಗೆ ಗುರೂಜಿ ಕೃತಜ್ಞತೆ: ಅಲ್ಲದೇ, ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದಿಂದಾಗಿ ಅಲ್ಲಿಯೇ ರವಿಶಂಕರ್ ಗುರೂಜಿ ಕಾದು ಕುಳಿತುಕೊಳ್ಳಬೇಕಾಯಿತು. ಬಳಿಕ ಅಲ್ಲಿ ನೆರೆದಿದ್ದ ಗ್ರಾಮಸ್ಥರನ್ನು ಅವರು ಭೇಟಿಯಾದರು. ಇದೇ ಸಂದರ್ಭದಲ್ಲಿ ಅಲ್ಲಿನ ಜನರಿಗೆ ಗುರೂಜಿ ಕೃತಜ್ಞತೆ ಸಲ್ಲಿಸಿದರು. ಅರ್ಧ ಗಂಟೆಯ ಬಳಿಕ ಮೋಡ ತಿಳಿಯಾದ ಕಾರಣ ಹೆಲಿಕಾಪ್ಟರ್ ಅನ್ನು ಮತ್ತೆ ಟೇಕ್ ಆಫ್ ಮಾಡಲಾಯಿತು.

ಕಳೆದ ಕೆಲವು ವರ್ಷಗಳಿಂದ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಕದಂಪುರ ಬೆಟ್ಟಗಳಲ್ಲಿ ದಟ್ಟವಾದ ಮಂಜು ಕವಿಯುತ್ತಿದೆ. ಇದರಿಂದ ಹೆಲಿಕಾಪ್ಟರ್​ಗಳು ಪ್ರತಿಕೂಲ ಹವಾಮಾನವನ್ನು ಎದುರಿಸುವಂತೆ ಆಗುತ್ತಿದೆ. ದಟ್ಟ ಮಂಜು ಕವಿಯುವ ಕಾರಣದಿಂದಾಗಿ ಹೆಲಿಕಾಪ್ಟರ್​ಗಳನ್ನು ಅರಣ್ಯದಲ್ಲಿ ಇಳಿಸಿ ನಂತರ ಪ್ರಯಾಣ ಮುಂದುವರಿಸುವುದು ವಾಡಿಕೆಯಾಗಿದೆ ಎಂದು ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊಚ್ಚಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಚಾಮರಾಜನಗರ ಗಡಿಯಲ್ಲಿ ತುರ್ತು ಭೂಸ್ಪರ್ಶ!

ಈ ಹಿಂದೆ ಕೂಡ ಪ್ರತಿಕೂಲ ಹವಾಮಾನದಿಂದಾಗಿ ಕೊಚ್ಚಿಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್​​ವೊಂದು ಕರ್ನಾಟಕದ ಚಾಮರಾಜನಗರ ಜಿಲ್ಲೆ ಗಡಿಭಾಗವಾದ ಸತ್ಯಮಂಗಲದ ಕಡಂಬೂರ್ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಸಿಎಸ್ ಏವಿಯೇಷನ್‌ ಎಂಬ ಕಂಪನಿಗೆ ಸೇರಿದ ಹೆಲಿಕಾಪ್ಟರ್​​​ನಲ್ಲಿ ಬೆಂಗಳೂರಿನ ಮೂಲದವರು ಪ್ರಯಾಣಿಸುತ್ತಿದ್ದರು. ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ​​​ ಕೊಚ್ಚಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಪ್ರತಿಕೂಲ ಹವಾಮಾನ ಕಾರಣದಿಂದ ಕಡಂಬೂರಿನ ಜಮೀನೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.

ಇದನ್ನೂ ಓದಿ: ಮಾಸ್ಕೋ-ಗೋವಾ ವಿಮಾನಕ್ಕೆ ಬಂದಿದ್ದು ಹುಸಿ ಬಾಂಬ್​ ಬೆದರಿಕೆ; ಪರಿಶೀಲನೆ ಬಳಿಕ ಹಾರಾಟ

Last Updated :Jan 25, 2023, 7:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.