ETV Bharat / bharat

ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ.. ಈ ಬಾರಿಯೂ ಬದಲಾಗುತ್ತಾ ಅಧಿಕಾರ ಸೂತ್ರ?

author img

By

Published : Dec 8, 2022, 9:23 AM IST

ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಆರಂಭಿಕ ಮತ ಎಣಿಕೆಯಲ್ಲಿ ಹಿನ್ನಡೆ ಉಂಟಾಗಿದೆ. ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸಿದ್ದು, ಅಧಿಕಾರ ಸೂತ್ರ ಈ ಬಾರಿ ಬದಲಾಗುವ ಸಾಧ್ಯತೆ ಇದೆ.

bjp-setback-in-himachal-pradesh
ಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ

ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಮತದಾರ ತನ್ನ ಹಿಂದಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವಂತೆ ಕಾಣುತ್ತಿದೆ. 68 ವಿಧಾನಸಭಾ ಕ್ಷೇತ್ರಗಳ ಪೈಕಿ ಆರಂಭಿಕ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿಗಿಂತ ಕಾಂಗ್ರೆಸ್​ ಮುನ್ನಡೆ ಸಾಧಿಸುತ್ತಿದೆ. 34 ಸ್ಥಾನಗಳಲ್ಲಿ ಕೈ ಪಕ್ಷ ಮುಂದಿದ್ದರೆ, ಬಿಜೆಪಿ 33 ಸ್ಥಾನಗಳಲ್ಲಿ ಮುನ್ನುಗ್ಗುತ್ತಿದೆ. ಆಪ್​ ಪ್ರಭಾವ ಇಲ್ಲಿ ಇಲ್ಲವಾಗಿದೆ.

ಹಿಮಾಚಲಪ್ರದೇಶದಲ್ಲಿ 1985 ರಿಂದಲೂ ಇಲ್ಲಿನ ಜನರು ಯಾವುದೇ ಪಕ್ಷಕ್ಕೆ ಎರಡನೇ ಬಾರಿಗೆ ಅಧಿಕಾರ ನೀಡಿಲ್ಲ. ಈ ಬಾರಿ ಬಿಜೆಪಿ ಈ ದಾಖಲೆ ಮುರಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮತದಾರ ತನ್ನ ಕರಾಮತ್ತು ಮುಂದುವರಿಸಿದ್ದು, ಕಾಂಗ್ರೆಸ್​ ಪರ ವಾಲಿರುವ ಸಾಧ್ಯತೆ ಇದೆ.

ಇನ್ನು ದೆಹಲಿ, ಪಂಜಾಬ್​ನಲ್ಲಿ ಅಧಿಕಾರಕ್ಕೇರಿ ಗುಜರಾತ್​ನಲ್ಲಿ ಸದ್ದು ಮಾಡಿರುವ ಸಿಎಂ ಅರವಿಂದ ಕೇಜ್ರಿವಾಲ್​ ನೇತೃತ್ವದ ಆಪ್​ ಹಿಮಾಚಲಪ್ರದೇಶದಲ್ಲಿ ಸೊನ್ನೆ ಸುತ್ತಿದೆ. ಪಕ್ಷ ಇಲ್ಲಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಸ್ವತಂತ್ರ ಅಭ್ಯರ್ಥಿಯೊಬ್ಬರು ಮುನ್ನಡೆಯಲ್ಲಿದ್ದಾರೆ.

ಹಿಮಾಚಲಪ್ರದೇಶ ವಿಧಾನಸಭೆಗೆ 68 ಸ್ಥಾನಗಳಿಗೆ ನವೆಂಬರ್​ 12ರಂದು ಮತದಾನ ನಡೆದಿದ್ದು, ಶೇ.75ರಷ್ಟು ಮತ ಚಲಾವಣೆಯಾಗಿದೆ. ಇಲ್ಲಿ ಒಟ್ಟಾರೆ 412 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಓದಿ: ಗುಜರಾತ್​ ಚುನಾವಣೆಯಲ್ಲಿ ಹೇಗಿದೆ ಜಾತಿ ಸಮೀಕರಣ? ಇಲ್ಲಿದೆ ಒಂದಿಷ್ಟು ಮಾಹಿತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.