ಕರ್ನಾಟಕ

karnataka

ಭದ್ರಾವತಿ: ರೌಡಿಶೀಟರ್ ಬರ್ಬರ ಹತ್ಯೆ

By

Published : Jul 21, 2023, 10:14 AM IST

Updated : Jul 21, 2023, 11:55 AM IST

ಶಿವಮೊಗ್ಗದ ಭದ್ರಾವತಿಯಲ್ಲಿ ರೌಡಿ‌ಶೀಟರ್ ಮುಜೀಬ್ ಎಂಬಾತನನ್ನು ಮಾರಕಾಸ್ತ್ರದಿಂದ ಹತ್ಯೆ ಮಾಡಲಾಗಿದೆ.

ರೌಡಿ ಶೀಟರ್ ಮುಜೀಬ್ ಹತ್ಯೆ
ಮೃತ ರೌಡಿ ಶೀಟರ್ ಮುಜೀಬ್ ಹತ್ಯೆ

ಶಿವಮೊಗ್ಗ:ರೌಡಿ‌ಶೀಟರ್ ಮುಜೀಬ್ (32) ಎಂಬಾತನನ್ನು‌ ಮಾರಕಾಸ್ತ್ರಗಳಿಂದ‌ ಕೊಚ್ಚಿ‌ ಕೊಲೆಗೈದ ಘಟನೆ ಕಳೆದ ರಾತ್ರಿ ಭದ್ರಾವತಿಯಲ್ಲಿ ನಡೆದಿದೆ. ಬೊಮ್ಮನಕಟ್ಟೆ ಬಳಿಯ ಹಳೆ ನಂಜಾಪುರದಲ್ಲಿ ಘಟನೆ ಜರುಗಿದೆ. ಮುಜೀಬ್ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ‌ ಆರೋಪಿಯಾಗಿದ್ದ.

ಇಂದು ಬೆಳಗ್ಗೆ ಸ್ಥಳೀಯರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೇಪರ್‌ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಜೀಬ್‌ಗೆ ಎರಡು ಮದುವೆಯಾಗಿದ್ದು, ಮೊದಲನೇ ಪತ್ನಿಗೆ ಇಬ್ಬರು ಮತ್ತು ಎರಡನೇ ಪತ್ನಿಗೆ ಒಂದು‌ ಮಗುವಿದೆ.

ಪ್ರೀತಿಸಿ ಮದುವೆಯಾದ ಪತ್ನಿ ಕೊಂದ:13 ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಶಿವಮೊಗ್ಗ ಮೂಲದ ಶಹಜಹಾನ್​ ಮತ್ತು ಹಾವೇರಿ ಮೂಲದ ರಫೀಕ್​ ಅಹಮ್ಮದ್ ಎಂಬವರು​ ಪ್ರೀತಿಸಿ ಮದುವೆಯಾಗಿದ್ದರು. ರಫೀಕ್ ಕಳೆದ ಮೂರು ವರ್ಷಗಳ ಹಿಂದಷ್ಟೇ ಕೋಲಾರದ ಮಾಲೂರು ಪಟ್ಟಣದ ವೆಂಕಟೇಶ್​ ಎಂಬವರ ಬಳಿ ಜೆಸಿಬಿ ಆಪರೇಟರ್​ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ರಾಜೀವ್​ ನಗರದ ನಾಸೀರ್ ಎಂಬವರ ಮನೆ ಬಾಡಿಗೆಗೆ ಪಡೆದು ಪತ್ನಿ ಶಹನಾಜ್‌ಳೊಂದಿಗೆ ಸಂಸಾರ ಸಾಗಿಸುತ್ತಿದ್ದನು.

ಆದರೆ, ಎರಡ್ಮೂರು ವರ್ಷಗಳ ನಂತರ ಜೆಸಿಬಿ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ ರಫೀಕ್ ಕುಡಿತದ ದಾಸನಾಗಿದ್ದು, ಹೆಂಡತಿ ಮೇಲೆ ಹಲ್ಲೆ ನಡೆಸುತ್ತಿದ್ದ. ಕುಡಿಯೋಕೆ ಹಣ ಸಿಗದೇ ಇದ್ದರೆ ಮನೆಯಲ್ಲಿರುವ ಯಾವುದೋ ಒಂದು ವಸ್ತುವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದನಂತೆ. ಜೊತೆಗೆ ಇಬ್ಬರಿಗೂ ಮಕ್ಕಳಾಗಿಲ್ಲ ಅನ್ನೋ ಕೊರಗು ಬೇರೆ ಇತ್ತು. ಹೀಗಿರುವಾಗಲೇ​ (19/07/2023) ಬುಧವಾರ ಕುಡಿಯಲು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ರಫೀಕ್​ ತನ್ನ ಹೆಂಡತಿ ಶಹನಾಜ್​ಳನ್ನು ಹೊಡೆದು ಕೊಂದು ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತಂದೆ ಕೊಲೆಗೈದು ಶವ ಹೆದ್ದಾರಿ ಪಕ್ಕ ಹೂತಿಟ್ಟ ಪುತ್ರ: ರಾಯಚೂರಿನಲ್ಲಿ ತಂದೆಯನ್ನೇ ಹತ್ಯೆ ಮಾಡಿ ಹೆದ್ದಾರಿ ಪಕ್ಕ ಹೂತಿಟ್ಟ ಘಟನೆ ನಡೆದಿದ್ದು, ಶವವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕೊಲೆಯಾದ ತಂದೆ ಶಿವನಪ್ಪ ಭೂಸ್ವಾಧೀನದಲ್ಲಿ ತನ್ನ ಜಮೀನು ಕಳೆದುಕೊಂಡು ಅದರ ಪರಿಹಾರದ ಹಣ ಪಡೆದಿದ್ದರು. ಈ ಹಣದ ವಿಚಾರವಾಗಿಯೇ ಶಿವನಪ್ಪ ಹಾಗು ಮಗ ಈರಣ್ಣನ ಮಧ್ಯೆ ಜಗಳ ನಡೆಯುತ್ತಿತ್ತು. ಜುಲೈ 7ರಂದು ಜಗಳ ತೀವ್ರಗೊಂಡು ಮನೆಯಲ್ಲಿದ್ದ ಪೈಪ್ ತೆಗೆದುಕೊಂಡು ಮಗ ತಂದೆಗೆ ಹೊಡೆದಿದ್ದಾನೆ.

ತೀವ್ರವಾಗಿ ಗಾಯಗೊಂಡ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಯಾರಿಗೂ ವಿಚಾರ ತಿಳಿಯದಂತೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಒಬ್ಬನೇ ಜಮೀನಿಗೆ ಸಾಗಿಸಿ ಗುಂಡಿ ಅಗೆದು ಹೂತಿಟ್ಟಿದ್ದ. ಯಾರಿಗೂ ಅನುಮಾನ ಬರದಂತೆ ತಂದೆ ಕಾಣೆಯಾಗಿದ್ದಾನೆ ಎಂದು ರಾಯಚೂರು ಗ್ರಾಮೀಣ ಪೊಲೀಸರಿಗೆ ಸುಳ್ಳು ದೂರು ನೀಡಿದ್ದ. ಆದರೆ ಈತನ ಕುಟುಂಬಸ್ಥರಿಗೆ ಈರಣ್ಣನ ಮೇಲೆಯೇ ಅನುಮಾನ ಬಂದು ವಿಚಾರಿಸಿದಾಗ ಆತನೇ ಕೊನೆಗೆ ಪೊಲೀಸ್​ ಠಾಣೆಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದ. ಇದೀಗ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ತಂದೆ ಕೊಲೆಗೈದು ಹೆದ್ದಾರಿ ಪಕ್ಕ ಶವ ಹೂತಿಟ್ಟ ಮಗ; ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಂದ ತನಿಖೆ

Last Updated :Jul 21, 2023, 11:55 AM IST

ABOUT THE AUTHOR

...view details