ಕರ್ನಾಟಕ

karnataka

ನಿರಂತರ ಮಳೆಯಿಂದಾಗಿ ಕೆಸರುಮಯವಾದ ರಸ್ತೆ.. ಭತ್ತ ನಾಟಿ ಮಾಡಿ ಜನರ ಆಕ್ರೋಶ

By

Published : Jul 18, 2022, 5:38 PM IST

ಬೆಣ್ಣೆ ನಗರಿಯಲ್ಲಿ ನಿರಂತರ ಮಳೆಯಿಂದ ಹದಗೆಟ್ಟ ರಸ್ತೆಗಳು - ರೋಸಿಹೋದ ಗ್ರಾಮಾಂತರ ಭಾಗದ ಜನರು - ರಸ್ತೆಯಲ್ಲೇ ಭತ್ತ ನಾಟಿ, ಆಡಳಿತದ ವಿರುದ್ಧ ಕಿಡಿ

ಭತ್ತ ನಾಟಿ ಮಾಡಿದ ಗ್ರಾಮಸ್ಥರು
ಭತ್ತ ನಾಟಿ ಮಾಡಿದ ಗ್ರಾಮಸ್ಥರು

ದಾವಣಗೆರೆ: ಮಳೆಯಿಂದ ರಸ್ತೆಗಳು ಹಾಳಾಗಿದ್ದು, ಗ್ರಾಮಸ್ಥರು ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಹರಿಹರ ತಾಲೂಕಿನಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ 22 ವರ್ಷಗಳಿಂದ ರಸ್ತೆ ಹಾಳಾಗಿದ್ದು, ಶಾಲಾ ಮಕ್ಕಳಿಗೆ, ವೃದ್ಧರು, ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಜನ ಹೈರಾಣಾಗಿದ್ದಾರೆ.

ನಿರಂತರ ಮಳೆಯ ಪರಿಣಾಮ ಕೆಸರುಮಯವಾದ ರಸ್ತೆಯಲ್ಲಿ ಭತ್ತ ನಾಟಿ

ಹರಿಹರದಿಂದ ಪಾಳ್ಯ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಹದೆಗೆಟ್ಟ ರಸ್ತೆ ಬಗ್ಗೆ ಪಾಳ್ಯ ಗ್ರಾಮದ ಜನರು ಜನಪ್ರತಿನಿಧಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನ ಆಗಿಲ್ಲ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಬೇಜಾವಬ್ದಾರಿತನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ರಸ್ತೆಯಲ್ಲಿದ್ದ ಕೆಸರಿನಲ್ಲಿ ಭತ್ತದ ಸಸಿ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು. ಹರಿಹರ ಶಾಸಕ ಎಸ್. ರಾಮಪ್ಪ ಜನರ ಸಮಸ್ಯೆಗೆ ಸ್ಪಂದಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಓದಿ:ಕೊಡಗು: ಜಲಾವೃತವಾದ ರಸ್ತೆ ಮಧ್ಯೆ ಸಿಲುಕಿದ ಜೀಪ್​ ರಕ್ಷಣೆ

TAGGED:

ABOUT THE AUTHOR

...view details