ಕರ್ನಾಟಕ

karnataka

ಬೆಂಗಳೂರಲ್ಲಿ ನಿರ್ಗತಿಕರ ಕೇಂದ್ರಗಳನ್ನು ಹೆಚ್ಚಿಸಲು ಬಿಬಿಎಂಪಿ ಕ್ರಮ : ಗೌರವ್ ಗುಪ್ತಾ

By

Published : Sep 2, 2021, 3:38 PM IST

ಮಹಾನಗರ ಪಾಲಿಕೆಯ ಬೇರೆ ಬೇರೆ ಕಟ್ಟಡಗಳ ಮೂಲಕ ಕೋವಿಡ್ ಪೀಡಿತರಿಗೆ ನೆರವು ನೀಡಲಾಗುತ್ತದೆ ಎಂದು ಬಿಬಿಎಂಪಿ‌ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

Gowrav gupta
ಗೌರವ್ ಗುಪ್ತ

ಬೆಂಗಳೂರು: ನಗರದಲ್ಲಿರುವ ಅನಾಥರಿಗಾಗಿ, ಸೂರಿಲ್ಲದವರಿಗಾಗಿ ಬಿಬಿಎಂಪಿ ಈಗಾಗಲೇ ನಿರ್ಗತಿಕರ ಕೇಂದ್ರಗಳನ್ನು ನಡೆಸುತ್ತಿದೆ.‌ ಆದರೀಗ ಕೋವಿಡ್ ಹಿನ್ನೆಲೆ, ಇವುಗಳ ಸಂಖ್ಯೆ ಹೆಚ್ಚು ಮಾಡಲು ಪಾಲಿಕೆ ನಿರ್ಧರಿಸಿದೆ.

ಈ ಕುರಿತು ಬಿಬಿಎಂಪಿ‌ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಮಹಾನಗರ ಪಾಲಿಕೆ ಕಟ್ಟಡಗಳ ಮೂಲಕ, ಬೇರೆ ಬೇರೆ ಕಟ್ಟಡಗಳ ಮೂಲಕ ಕೋವಿಡ್ ಪೀಡಿತರಿಗೆ ನೆರವು ನೀಡಲಾಗುತ್ತದೆ. ವಲಯವಾರು ನಿರ್ಗತಿಕರ ಕೇಂದ್ರ ಮಾಡಲಾಗಿದೆ. ಅಲ್ಲಿ ಊಟದ ವ್ಯವಸ್ಥೆ, ಮಲಗುವ ವ್ಯವಸ್ಥೆ ಇರುತ್ತದೆ. ಈಗಾಗಲೇ ಜಾಗಗಳನ್ನ ಗುರುತಿಸಲಾಗಿದೆ. ಈಗಾಗಲೇ 8-10 ಕೇಂದ್ರಗಳಿದ್ದು, ಇವುಗಳನ್ನು 40 ಕ್ಕೆ ಏರಿಕೆ ಮಾಡಲಾಗುವುದು ಎಂದರು.‌

ನಗರದಲ್ಲಿ‌ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಒತ್ತಡ ಹೆಚ್ಚಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿ, ಧಾರ್ಮಿಕ ನಂಬಿಕೆ, ಆಚರಣೆ ಸಂಸ್ಕೃತಿ ಒಂದೆಡೆ. ಆದ್ರೆ, ಪಕ್ಕದ ರಾಜ್ಯದಲ್ಲಿ ಕೋವಿಡ್ ಅತೀ ಹೆಚ್ಚಾಗಿದ್ದು, ನಗರಕ್ಕೆ ಬಾರದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ. ಗಣೇಶ ಹಬ್ಬದ ಸಾರ್ವಜನಿಕ ಆಚರಣೆ ವಿಚಾರವಾಗಿ ನಮ್ಮ ಅಭಿಪ್ರಾಯ ಬೇರೆ ಇತ್ತು. ಕೊರೊನಾ ಹಿನ್ನೆಲೆಯಲ್ಲಿ ಗಣೇಶ ಹಬ್ಬವನ್ನ ಸುರಕ್ಷಿತವಾಗಿ ಆಚರಿಸಬೇಕು.‌ ಈಗಾಗಲೇ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಓದಿಗೆ : ಆರೋಪಿಗಳನ್ನು ಹಿಡಿದಿದ್ದೇವೆ, ಶಿಕ್ಷೆ ಕೊಡಿಸುವುದು ಮುಂದಿನ ಸವಾಲು: ಆರಗ ಜ್ಞಾನೇಂದ್ರ

ರಾಜ್ಯ ವ್ಯಾಪಿ 5 ಲಕ್ಷ ಲಸಿಕೆ, ನಗರ ಮಟ್ಟದಲ್ಲಿ ಒಂದು ಲಕ್ಷ ಲಸಿಕೆ ವಿತರಣೆಯನ್ನು ಮಾಡಲು ಗುರಿ ಹಾಕಲಾಗಿದೆ. ನಿನ್ನೆ ಲಸಿಕೆ ಮೇಳದಲ್ಲಿ ಟಾರ್ಗೆಟ್ 1 ಲಕ್ಷ 30 ಸಾವಿರವನ್ನೂ ಮೀರಿ, 1,85,000 ದಷ್ಟು ಒಂದೇ ದಿನ ಲಸಿಕೆ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಪ್ರತಿಯೊಬ್ಬರಿಗೂ ಲಸಿಕೆ ಸಿಗಲು, ಕೆಲವು 50 ಕೇಂದ್ರಗಳಲ್ಲಿ‌ ಬೆಳಗ್ಗೆ 8 ರಿಂದ‌ ರಾತ್ರಿ 8 ರವರೆಗೆ ಲಸಿಕೆ ನೀಡಲಾಗುತ್ತದೆ. ಇದಲ್ಲದೆ ಕೆಲವು ಸ್ಲಂ ಹಾಗೂ ಹಿಂದುಳಿದ ಬಡಾವಣೆಗಳಲ್ಲಿ ಲಸಿಕಾ ಕೇಂದ್ರಗಳು ಕೆಲಸ ಮಾಡಲಿವೆ ಎಂದು ತಿಳಿಸಿದರು.

ABOUT THE AUTHOR

...view details