ETV Bharat / snippets

ಕೃಷಿ ಹೊಂಡದಲ್ಲಿ ಬಿದ್ದವನ ರಕ್ಷಿಸಲು ಹೋಗಿ ಪತಿ ಸಾವು: ಮುಗಿಲು ಮುಟ್ಟಿದ ಗರ್ಭಿಣಿ ಪತ್ನಿಯ ಆಕ್ರಂದನ

author img

By ETV Bharat Karnataka Team

Published : May 23, 2024, 6:08 PM IST

ಕೃಷಿ ಹೊಂಡದಲ್ಲಿ ಮೃತಪಟ್ಟವರು
ಕೃಷಿ ಹೊಂಡದಲ್ಲಿ ಮೃತಪಟ್ಟವರು (ETV Bharat)

ಶಿವಮೊಗ್ಗ: ಕೃಷಿ ಹೊಂಡದಲ್ಲಿ ಬಿದ್ದು ಚನ್ನಹಳ್ಳಿ ಗ್ರಾಮದ ಮಾಲತೇಶ್ (30) ಹಾಗೂ ಅಭಯ್ ಎಂಬವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕು ಆಯನೂರು ಸಮೀಪದ ಚನ್ನಹಳ್ಳಿಯಲ್ಲಿ ಇಂದು ನಡೆದಿದೆ.

ಚನ್ನಹಳ್ಳಿ ಗ್ರಾಮದ ಅಶೋಕ್​ ಎಂಬುವರ ಜಮೀನಲ್ಲಿ ಮಾಲತೇಶ್ ಟ್ರ್ಯಾಕ್ಟರಿ ಓಡಿಸಲು ಹೋಗಿದ್ದರು. ಈ ವೇಳೆ ಆಶೋಕ್ ಅವರ ಸೋದರಳಿಯ ಅಭಯ್ ನೀರು ಕುಡಿಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಒದ್ದಾಡುತ್ತಿದ್ದ. ಅಲ್ಲೇ ಪಕ್ಕದಲ್ಲಿಯೇ ಟ್ರ್ಯಾಕ್ಟರ್ ಓಡಿಸುತ್ತಿದ್ದ ಮಾಲತೇಶ್, ಅಭಯ್​​ನನ್ನು ರಕ್ಷಿಸಲು ಹೋಗಿ ತಾನು ಸಹ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.‌

ಟ್ರ್ಯಾಕ್ಟರ್ ಸೌಂಡ್ ಬಾರದೆ ಇರುವ ಹಿನ್ನೆಲೆಯಲ್ಲಿ ನೋಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಾಲತೇಶ್​​ನಿಗೆ ಮದುವೆಯಾಗಿ ಒಂದು ವರ್ಷವಾಗಿತ್ತು. ಇವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.