ಕರ್ನಾಟಕ

karnataka

ಭಾರತದ ಲ್ಯಾಬ್‌ಗೆ ರಷ್ಯಾದ 100 ಮಿಲಿಯನ್‌ ಸ್ಪುಟ್ನಿಕ್‌ ವಿ ಲಸಿಕೆ ಪೂರೈಕೆ!

By

Published : Sep 16, 2020, 4:58 PM IST

ರಷ್ಯಾದ ನೇರ ಹೂಡಿಕೆ ನಿಧಿ ಸಂಸ್ಥೆ ಆರ್‌ಡಿಐಎಫ್, ಭಾರತದ‌ ಡಾ.ರೆಡ್ಡೀಸ್‌ ಸಂಸ್ಥೆಗೆ ಸ್ಪುಟ್ನಿಕ್‌ ವಿ ವ್ಯಾಕ್ಸಿನ್‌ನ 100 ಮಿಲಿಯನ್‌ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಹೇಳಿದೆ.

russia-to-supply-100-mn-doses-of-covid-19-vaccine-to-indian-lab
ಭಾರತದ ಲ್ಯಾಬ್‌ಗೆ ರಷ್ಯಾದ 100 ಮಿಲಿಯನ್‌ ಸ್ಪುಟ್ನಿಕ್‌ ವಿ ಲಸಿಕೆ ಪೂರೈಕೆ!

ಮಾಸ್ಕೋ: ರಷ್ಯಾದ ಸ್ಪುಟ್ನಿಕ್‌ ವಿ ಕೊರೊನಾ ವ್ಯಾಕ್ಸಿನ್‌ನ 100 ಮಿಲಿಯನ್‌ ಡೋಸ್‌ಗಳನ್ನು ಭಾರತದ ಡಾ.ರೆಡ್ಡೀಸ್ ಪ್ರಯೋಗಾಲಯಕ್ಕೆ ಪೂರೈಸುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿ(ಆರ್‌ಡಿಐಎಫ್) ಸ್ಪಷ್ಟಪಡಿಸಿದೆ.

ಆರ್‌ಡಿಎಫ್‌ಐ, ಡಾ.ರೆಡ್ಡೀಸ್‌ ಲ್ಯಾಬೋರೇಟರೀಸ್ ಲಿಮಿಟೆಡ್‌ ಸಂಸ್ಥೆಗಳು ಸ್ಪಿಟ್ನಿಕ್‌ ವಿ ಲಸಿಕೆಯನ್ನು ಭಾರತದಲ್ಲಿ ವೈದ್ಯಕೀಯ ಪ್ರಯೋಗ ಮತ್ತು ಹಂಚಿಕೆ ಕುರಿತು ಒಪ್ಪಂದ ಮಾಡಿಕೊಂಡಿವೆ. ಸರ್ಕಾರದಿಂದ ಅನುಮತಿ ದೊರೆತ ನಂತರ ಆರ್‌ಡಿಐಎಫ್‌ ಡಾ.ರೆಡ್ಡೀಸ್‌ಗೆ 100 ಮಿಲಿಯನ್‌ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಆರ್‌ಡಿಐಎಫ್‌ ಹೇಳಿಕೆ ಬಿಡುಗಡೆ ಮಾಡಿದೆ. 2020ರ ವರ್ಷಾಂತ್ಯದ ವೇಳೆಗೆ ಭಾರತಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದೆ.

ಡಾ.ರೆಡ್ಡೀಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿವಿ ಪ್ರಸಾದ್‌ ಈ ಬಗ್ಗೆ ಪ್ರತಿಕ್ರಿಯಿಸಿ, ಸ್ಪುಟ್ನಿಕ್‌ ವಿ ಲಸಿಕೆಯ 1 ಮತ್ತು 2ನೇ ಹಂತದ ಫಲಿತಾಂಶ ಭರವಸೆ ಮೂಡಿಸಿದ್ದು, ದೇಶದ ನಿಯಮಗಳನ್ನು ಪಾಲಿಸುವ ಮೂಲಕ 3ನೇ ಹಂತವನ್ನು ನಮ್ಮ ಸಂಸ್ಥೆ ಕೈಗೊಳ್ಳಲಿದೆ ಎಂದಿದ್ದಾರೆ.

ಸ್ಪುಟ್ನಿಕ್‌ ವಿ ಲಸಿಕೆಯನ್ನು ಭಾರತಕ್ಕೆ ತರಲು ಆರ್‌ಡಿಐಎಫ್‌ನೊಂದಿಗೆ ಸಹಭಾಗಿತ್ವ ವಹಿಸಿದ್ದೇವೆ. ಕೋವಿಡ್‌ ವಿರುದ್ಧದ ಹೋರಾಟಕ್ಕೆ ನಂಬಿಕೆಯ ಆಯ್ಕೆಯೇ ಈ ವ್ಯಾಕ್ಸಿನ್‌ ಎಂದು ಪ್ರಸಾದ್‌ ಅವರು ವಿಮರ್ಶಿಸಿದ್ದಾರೆ.

ABOUT THE AUTHOR

...view details