ETV Bharat / bharat

ಲೋಕಸಭೆ ಚುನಾವಣೆ ಕಣದಲ್ಲಿದ್ದಾರೆ 25 ರಿಂದ 30 ವಯೋಮಾನದ 2 ಸಾವಿರಕ್ಕೂ ಅಧಿಕ ತರುಣರು - candidates age range

author img

By PTI

Published : May 23, 2024, 10:27 PM IST

ನ್ಯಾಯ, ಮುಕ್ತ ಮತ್ತು ಪಾರದರ್ಶಕ ಚುನಾವಣೆಗಾಗಿ ಆಯೋಗವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೇಶದಲ್ಲಿ ನಡೆಯುವ ಚುನಾವಣೆಯ ಬಗ್ಗೆಯೂ ವಿದೇಶಿ ರಾಜಕೀಯ ತಜ್ಞರೂ ಮೆಚ್ಚುಗೆ ಸೂಚಿಸಿದ್ದಾರೆ. ನಡೆಯುತ್ತಿರುವ ಚುನಾವಣೆಯಲ್ಲಿ ಮುಂದೆ ನಮ್ಮನ್ನಾಳುವ ಜನಪ್ರತಿನಿಧಿಗಳ ವಯಸ್ಸು ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.

ಲೋಕಸಭೆ ಚುನಾವಣೆ
ಲೋಕಸಭೆ ಚುನಾವಣೆ (ETV Bharat)

ನವದೆಹಲಿ: 18ನೇ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಈಗಾಗಲೇ 5 ಹಂತದ ಮತದಾನ ಮುಗಿದಿದೆ. ಇನ್ನೆರಡು ಹಂತಗಳು ಮಾತ್ರ ಬಾಕಿ ಉಳಿದಿದ್ದು, ಜೂನ್​ 4 ರಂದು ನಡೆಯುವ ಮತ ಎಣಿಕೆಯ ಮೇಲೆ ದೇಶದ ನಾಗರಿಕರ ನಿರೀಕ್ಷೆ ಹೆಚ್ಚಿದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ಭರ್ಜರಿ ಹೋರಾಟ ನಡೆಸುತ್ತಿವೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್​) ಸಂಗ್ರಹಿಸಿದ ಚುನಾವಣಾ ಅಂಕಿ - ಅಂಶಗಳ ವಿಶ್ಲೇಷಣೆಯ ಪ್ರಕಾರ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ 8,360 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 8,337 ಅಭ್ಯರ್ಥಿಗಳ ನಾಮಪತ್ರ ದಾಖಲೆಯ ಪರಿಶೀಲಿಸಲಾಗಿದೆ. ಅದರಲ್ಲಿ 25 ರಿಂದ 30 ವರ್ಷದೊಳಗೆ 2,642 ಹುರಿಯಾಳುಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 11 ಅಭ್ಯರ್ಥಿಗಳು 80 ವರ್ಷ ಮೇಲ್ಪಟ್ಟವರಿದ್ದಾರೆ ಎಂದಿದೆ.

ಮೊದಲ ಹಂತ: ಏಪ್ರಿಲ್​ 19 ರಂದು ನಡೆದ ಮೊದಲನೇ ಹಂತದ ಚುನಾವಣೆಯಲ್ಲಿ 25 ರಿಂದ 40 ವರ್ಷದೊಳಗಿನ 505 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 41ರಿಂದ 60 ವರ್ಷದೊಳಗಿನ 849 ಅಭ್ಯರ್ಥಿಗಳು, 61ರಿಂದ 80 ವರ್ಷದೊಳಗಿನ 260 ಮತ್ತು 80 ವರ್ಷ ಮೇಲ್ಪಟ್ಟ ನಾಲ್ವರು ಅಭ್ಯರ್ಥಿಗಳಿದ್ದರು.

ಎರಡನೇ ಹಂತ: ಏಪ್ರಿಲ್​ 26 ರಂದು ನಡೆದ ಎರಡನೇ ಹಂತದಲ್ಲಿ 25 ರಿಂದ 40 ವಯೋಮಾನದ 363 ಅಭ್ಯರ್ಥಿಗಳು ಕಣದಲ್ಲಿದ್ದರೆ, 41 ರಿಂದ 60 ವರ್ಷದೊಳಗೆ 578, 61 ರಿಂದ 80 ವರ್ಷದೊಳಗಿನ 249 ಮತ್ತು 80 ವರ್ಷ ಮೇಲ್ಪಟ್ಟ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು.

ಮೂರನೇ ಹಂತ: ಮೇ 7 ರಂದು ನಡೆದ ಮೂರನೇ ಹಂತದಲ್ಲಿ 25 ರಿಂದ 40 ವರ್ಷದ 411 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, 712 ಮಂದಿ 41ರಿಂದ 60 ವರ್ಷದೊಳಗಿದ್ದಾರೆ. 61 ರಿಂದ 80 ವರ್ಷದೊಳಗಿನ 228 ಅಭ್ಯರ್ಥಿಗಳು ಮತ್ತು 84 ವರ್ಷದ ಒಬ್ಬರು ಇದ್ದರು.

ನಾಲ್ಕನೇ ಹಂತ: ಮೇ 13 ರಂದು ನಡೆದ 4ನೇ ಹಂತದಲ್ಲಿ 25 ರಿಂದ 40 ವರ್ಷದೊಳಗಿನ 642 ಅಭ್ಯರ್ಥಿಗಳು ಕಣದಲ್ಲಿದ್ದರು. 41 ರಿಂದ 60 ವಯಸ್ಸಿನ 842 ಮತ್ತು 61 ರಿಂದ 80 ವರ್ಷದೊಳಗಿನ 226 ಅಭ್ಯರ್ಥಿಗಳು ಚುನಾವಣೆಯಲ್ಲಿದ್ದಾರೆ.

ಐದನೇ ಹಂತ: ಮೇ 20 ರಂದು ನಡೆದ 5ನೇ ಈ ಹಂತದ ಚುನಾವಣೆಯಲ್ಲಿ 207 ಅಭ್ಯರ್ಥಿಗಳು 25 ಮತ್ತು 40 ವಯೋಮಾನದರಾಗಿದ್ದಾರೆ. 384 ಅಭ್ಯರ್ಥಿಗಳು 41 ರಿಂದ 60 ವಯಸ್ಸಿನವರು, 103 ಅಭ್ಯರ್ಥಿಗಳು 61 ರಿಂದ 80 ರ ನಡುವೆ ಇದ್ದಾರೆ. ಒಬ್ಬ ಅಭ್ಯರ್ಥಿಗೆ 82 ವರ್ಷ ವಯಸ್ಸಾಗಿದೆ.

6ನೇ ಹಂತ: ಮೇ 25 ರಂದು ಆರನೇ ಹಂತದ ಚುನಾವಣೆಯಲ್ಲಿ 7 ರಾಜ್ಯಗಳ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ 25 ರಿಂದ 40 ವರ್ಷದೊಳಗಿನ 271 ಅಭ್ಯರ್ಥಿಗಳಿದ್ದಾರೆ. 41 ರಿಂದ 60 ವಯಸ್ಸಿನ 436 ಅಭ್ಯರ್ಥಿಗಳು, ಹಾಗೂ 61 ರಿಂದ 80 ವರ್ಷದೊಳಗಿನವರು 159 ಅಭ್ಯರ್ಥಿಗಳು ಇದ್ದಾರೆ.

7ನೇ ಹಂತ: ಜೂನ್​ 1 ರಂದು 8 ರಾಜ್ಯಗಳ 57 ಲೋಕಸಭಾ ಸ್ಥಾನಗಳಿಗೆ ನಡೆಯುವ ಕೊನೆಯ ಹಂತದ ಮತದಾನದಲ್ಲಿ 25 ರಿಂದ 40 ವಯೋಮಾನದ 243 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 41 ರಿಂದ 60 ವರ್ಷದ 481 ಅಭ್ಯರ್ಥಿಗಳು, 61 ರಿಂದ 80 ರ ನಡುವಿನ 177, ಮೂವರು ಅಭ್ಯರ್ಥಿಗಳು 80 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ ಎಂದು ಮಾಹಿತಿ ಕಲೆ ಹಾಕಿದೆ.

ಇದನ್ನೂ ಓದಿ: ಮೇ 25ರಂದು 6ನೇ ಹಂತದ ಮತದಾನ: ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯ - LOK SABHA ELECTION 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.