ಕರ್ನಾಟಕ

karnataka

ಅಪ್ಪು ಅವರನ್ನು ದೇವರು ನಮ್ಮಿಂದ ಇಷ್ಟು ಬೇಗ ಕಿತ್ತುಕೊಳ್ಳಬಾರದಿತ್ತು: ಶಿವಣ್ಣ

By

Published : Nov 3, 2021, 4:30 PM IST

ತುಮಕೂರು ಜಿಲ್ಲೆಯ ಪಾವಗಡದ ತಾಳೆಮರದಳ್ಳಿಯಿಂದ ಅಭಿಮಾನಿಗಳಾದ ಶಿವ, ದಯಾನಂದ್,‌ ಮಂಜು, ಜಾನಿ ಹಾಗು ರೆಡ್ಡಿ ಪುನೀತ್ ರಾಜ್​ಕುಮಾರ್​ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಎತ್ತಿನಗಾಡಿಯಲ್ಲಿ ಬಂದ ಅಭಿಮಾನಿ
ಎತ್ತಿನಗಾಡಿಯಲ್ಲಿ ಬಂದ ಅಭಿಮಾನಿ

ಬೆಂಗಳೂರು: ಜನರ ಈ ಪ್ರೀತಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ದುಃಖದಲ್ಲಿರುವ ನಮಗೆ ಜನರು ಜೊತೆಯಾಗಿ ಇರುತ್ತೇವೆ ಎಂದು ಹೇಳುವುದನ್ನು ನೋಡಿದರೆ, ನಾವು ನಿಜಕ್ಕೂ ಪುಣ್ಯವಂತರು ಎಂದು ನಟ ಶಿವರಾಜ್ ಕುಮಾರ್ ಭಾವುಕರಾದರು.


ಪಾವಗಡದಿಂದ ಎತ್ತಿನಗಾಡಿ ಮೂಲಕ ಬಂದಿದ್ದ ಅಭಿಮಾನಿಗಳ ಪ್ರೀತಿ ಕಂಡು ಮಾತನಾಡಿದ ಶಿವಣ್ಣ, ಪುನೀತ್​​ನನ್ನು ಇಷ್ಟು ಬೇಗ ನಮ್ಮಿಂದ ಆ ದೇವರು ಕಿತ್ತುಕೊಂಡುಬಿಟ್ಟ. ಅಭಿಮಾನಿಗಳ ಜತೆಗೆ ನಾವೆಂದಿಗೂ ಇರುತ್ತೇವೆ. ತೆಲುಗು, ತಮಿಳು ಎಲ್ಲ ಸಿನಿಮಾದ ನಟರು ಆಗಮಿಸಿದರು. ಇಂಡಸ್ಟ್ರಿ ಅಂದರೆ ನಾವೆಲ್ಲ ಒಂದೇ ಎಂದು ಸಾಬೀತು ಮಾಡಿದರು ಎಂದರು.

ಪುನೀತ್ ರಾಜಕುಮಾರ್ ಸಮಾಧಿ ನೋಡಲು ಅಭಿಮಾನಿಗಳು ರಾಜ್ಯದ ಮೂಲೆಮೂಲೆಯಿಂದ ಬರುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ತೆರಳಿ, ಅಲ್ಲಿಂದ ಸದಾಶಿವನಗರ ಮನೆಗೆ ಬಂದು ದುಃಖದಿಂದ ಕೂಡಿರುವ ಕುಟುಂಬಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

ಇಂದು ಎತ್ತಿನಗಾಡಿಯಲ್ಲಿ ಬಂದ ಅಭಿಮಾನಿ ಪುನೀತ್ ರಾಜ್​​ಕುಮಾರ್ ಸಮಾಧಿ ದರ್ಶನ ಪಡೆದು, ಬಳಿಕ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದಾರೆ. ಪಾವಗಡದ ತಾಳೆಮರದಳ್ಳಿಯಿಂದ ಅಭಿಮಾನಿಗಳಾದ ಶಿವ, ದಯಾನಂದ್,‌ ಮಂಜು, ಜಾನಿ ಹಾಗು ರೆಡ್ಡಿ ಆಗಮಿಸಿದ್ದಾರೆ.

ಈ ಅಭಿಮಾನಿಗಳು ನಿನ್ನೆ (ಮಂಗಳವಾರ) ಬೆಳಿಗ್ಗೆ 6 ಗಂಟೆಗೆ ಪಾವಗಡದಿಂದ ಹೊರಟು ಇಂದು ಬೆಂಗಳೂರಿಗೆ ಬಂದಿದ್ದಾರೆ‌. ಮೊದಲು ಪುನೀತ್ ಸಮಾಧಿ ಬಳಿ ತೆರಳಿ ದರ್ಶನ ಪಡೆದು ಇದೀಗ, ಪುನೀತ್ ರಾಜ್ ಕುಮಾರ್ ಮನೆಯ ಮುಂದೆ ನಿಂತು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಇತ್ತ, ದಣಿದ ಎತ್ತುಗಳು ಬರುತ್ತಿದ್ದಂತೆ ಪುನೀತ್ ಮನೆಯಿಂದ ಸಿಬ್ಬಂದಿ ನೀರು, ಆಹಾರ ತಂದು ಕೊಟ್ಟಿದ್ದಾರೆ.

ಬಾಳೆಹಣ್ಣನ್ನ ತಿನಿಸಿದ ರಾಘವೇಂದ್ರ- ಶಿವರಾಜ್ ಕುಮಾರ್​:

ಪಾವಗಡದಿಂದ ಬಂದಿದ್ದ ಅಭಿಮಾನಿಗಳಿಗೆ ನಟ ಶಿವರಾಜ್ ಕುಮಾರ್ ಹಾಗು ರಾಘವೇಂದ್ರ ರಾಜ್​​ಕುಮಾರ್ ಬಂದು ಬಾಳೆಹಣ್ಣು ತಿನಿಸಿದರು. ಅಭಿಮಾನಿಗಳ ಪ್ರೀತಿ ಕಂಡು ರಾಘವೇಂದ್ರ ರಾಜ್​​ಕುಮಾರ್ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಶಿವರಾಜ್ ಕುಮಾರ್ ಎತ್ತಿನ ಬಂಡಿ ಹತ್ತಿ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡರು.

ಇದನ್ನೂ ಓದಿ:ಪುನೀತ್ ರಾಜ್​​​​ಕುಮಾರ್ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಹೊರಟ ತುಮಕೂರಿನ ರೈತ

ABOUT THE AUTHOR

...view details