ಕರ್ನಾಟಕ

karnataka

ಮಹಿಳಾ ಹಾಕಿ ತಂಡಕ್ಕೆ ಸೂರತ್‌ ವಜ್ರೋದ್ಯಮಿಯಿಂದ ವಿಶೇಷ ಬಹುಮಾನ ಘೋಷಣೆ

By

Published : Aug 4, 2021, 8:02 AM IST

ಟೋಕಿಯೋ ಒಲಿಂಪಿಕ್​ನಲ್ಲಿ ಮಹಿಳೆಯರ ಹಾಕಿ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಈ ತಂಡ ಫೈನಲ್ ಪಂದ್ಯದಲ್ಲಿ ಗೆದ್ದರೆ ತಂಡದ ಸದಸ್ಯರೆಲ್ಲರಿಗೂ ಬಹುಮಾನ ನೀಡುವುದಾಗಿ ಸೂರತ್‌ನ ವಜ್ರ ವ್ಯಾಪಾರಿ ತಿಳಿಸಿದ್ದಾರೆ.

surat-diamond-merchant-savji-dholakia-announced-prize-to-hockey-team
ಮಹಿಳಾ ಹಾಕಿ ತಂಡ ಫೈನಲ್​ನಲ್ಲಿ ಗೆದ್ದರೆ...: ಭರ್ಜರಿ ಬಹುಮಾನ ಘೋಷಿಸಿದ ಡೈಮಂಡ್ ಉದ್ಯಮಿ

ಸೂರತ್(ಗುಜರಾತ್):ವಜ್ರ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಟೋಕಿಯೋ ಒಲಿಂಪಿಕ್​ನಲ್ಲಿ ಭಾಗವಹಿಸಿರುವ ಭಾರತೀಯ ಮಹಿಳೆಯರ ಹಾಕಿ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಫೈನಲ್​ನಲ್ಲಿ ಗೆಲುವು ಸಾಧಿಸಿದರೆ ತಂಡದ ಪ್ರತಿ ಸದಸ್ಯರಿಗೆ ಮನೆ ಕಟ್ಟಲು 11 ಲಕ್ಷ ರೂಪಾಯಿ ಹಣಕಾಸು ನೆರವು ಅಥವಾ ಕಾರು ನೀಡುವುದಾಗಿ ಅವರು ಘೋಷಿಸಿದ್ದಾರೆ.

​ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಾವ್ಜಿ ಧೋಲಾಕಿಯಾ, ಆಟಗಾರರ ಮನೋಸ್ಥೈರ್ಯ ಹೆಚ್ಚಿಸಲು ಈ ಬಹುಮಾನ ಘೋಷಿಸಿದ್ದಾಗಿ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್​ನಲ್ಲಿ ಹಾಕಿ ಆಟಗಾರ್ತಿಯರು ಹೊಸ ಇತಿಹಾಸ ಬರೆಯುತ್ತಿದ್ದಾರೆ. ಅವರಿಗೆ ಬಹುಮಾನ ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಫೈನಲ್​​ನಲ್ಲಿ ಗೆದ್ದರೆ ಹೆಚ್.​​ಕೆ ಗ್ರೂಪ್ (ಹರಿಕೃಷ್ಣ ಗ್ರೂಪ್​) ವತಿಯಿಂದ ಮನೆ ಕಟ್ಟಲು ಹಣಕಾಸು ನೆರವು ಅಥವಾ ಕಾರು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Tokyo Olympics Javelin: ಮೊದಲ ಪ್ರಯತ್ನದಲ್ಲಿ ಫೈನಲ್​​ಗೇರಿದ ನೀರಜ್ ಚೋಪ್ರಾ!

ABOUT THE AUTHOR

...view details