ಕರ್ನಾಟಕ

karnataka

ಗೋವಾದ ಕೇರಿ ಬೀಚ್‌ನಲ್ಲಿ ನಾಲ್ವರ ರಕ್ಷಣೆ

By

Published : Jul 27, 2020, 3:56 PM IST

ನೀರಿನ ಮಟ್ಟ ಏರಿದ್ದರಿಂದ ದಂಪತಿಗಳಿಗೆ ದಡಕ್ಕೆ ಹಿಂದಿರುಗಿ ಬರಲು ಕಷ್ಟವಾಯಿತು. ಹೀಗಾಗಿ ಜೀವರಕ್ಷಕ ದಳ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯವರು ಆಗಮಿಸಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ರಕ್ಷಿಸಿದರು.

beach
beach

ಕೇರಿ (ಗೋವಾ):ಉಬ್ಬರವಿಳಿತದ ಸಮಯದಲ್ಲಿ ಗೋವಾದ ಕೇರಿ ಬೀಚ್‌ನಲ್ಲಿ ಕಲ್ಲಿನ ಪ್ರದೇಶದಿಂದ ಇಬ್ಬರು ದಂಪತಿಗಳನ್ನು ಲೈಫ್ ‌ಗಾರ್ಡ್‌ಗಳು ರಕ್ಷಿಸಿದ್ದಾರೆ.

ಕೇರಿ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಅರ್ಪೊರಾದಿಂದ ಬಂದ ನಾಲ್ವರು ಕಲ್ಲಿನ ಪ್ರದೇಶದ ಮೇಲೆ ಅರಾಂಬೋಲ್‌ನ ಸಿಹಿ ನೀರಿನ ಸರೋವರದ ಕಡೆಗೆ ಹೋಗಿದ್ದರು. ಆದರೆ ಉಬ್ಬರವಿಳಿತದ ಬದಲಾವಣೆಯಿಂದಾಗಿ ನೀರಿನ ಮಟ್ಟ ಏರಿಕೆಯಾಗಿತ್ತು.

ನೀರಿನ ಮಟ್ಟ ಏರಿದ್ದರಿಂದ ದಡಕ್ಕೆ ಹಿಂದಿರುಗಿ ಬರಲು ಅವರಿಗೆ ತುಂಬಾ ಕಷ್ಟವಾಯಿತು. ಹೀಗಾಗಿ ಅವರು ಸಹಾಯಕ್ಕಾಗಿ ಕರೆದರು. ಗಸ್ತು ತಿರುಗುತ್ತಿದ್ದ ಜೀವರಕ್ಷಕ ದಳದ ಗಿರೀಶ್ ಟಾಕರ್, ದಂಪತಿಗಳನ್ನು ಸಂಕಷ್ಟದಲ್ಲಿ ಗುರುತಿಸಿದರು.

ತಕ್ಷಣ ಸ್ಥಳಕ್ಕೆ ಧಾವಿಸಿ ಬ್ಯಾಕಪ್ ತಂಡವನ್ನು ಕಳುಹಿಸುವಂತೆ ಎಚ್ಚರಿಸಿದರು. ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯವರು ಆಗಮಿಸಿ ಕಾರ್ಯಾಚರಣೆ ನಡೆಸಿದರು.

ಕೊನೆಗೆ ಈ ತಂಡವು ದಂಪತಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆ ತರುವಲ್ಲಿ ಯಶಸ್ವಿಯಾಯಿತು. ಮರಳಿ ದಡಕ್ಕೆ ಬಂದವರಿಗೆ ಸುರಕ್ಷತಾ ಸಲಹೆ ನೀಡಲಾಯಿತು. ಸಹಾಯ ಮಾಡಿದ ಅಧಿಕಾರಿಗಳಿಗೆ ನಾಲ್ವರೂ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

...view details