ETV Bharat / state

"ರಾಜಕೀಯಕ್ಕೆ ಸಾಫ್ಟ್ ಆಗಿಯೇ ಇರಬೇಕು, ರಫ್ ಆಗಿರಬಾರದು": ಶಿವರಾಜಕುಮಾರ್ - Shivarajkumar

author img

By ETV Bharat Karnataka Team

Published : Apr 15, 2024, 2:49 PM IST

Updated : Apr 15, 2024, 4:09 PM IST

ಶಿವರಾಜ್ ಕುಮಾರ್
ಶಿವರಾಜಕುಮಾರ್

ಪತ್ನಿ ಗೀತಾ ಪರ ಪ್ರಚಾರಕ್ಕಿಳಿದ ನಟ ಶಿವರಾಜ​ಕುಮಾರ್​ ರಾಜಕೀಯಕ್ಕೆ ಸಾಫ್ಟ್ ಆಗಿರಬೇಕು, ರಫ್ ಆಗಿರಬಾರದೆಂದು ಹೇಳಿದರು.

"ರಾಜಕೀಯಕ್ಕೆ ಸಾಫ್ಟ್ ಆಗಿಯೇ ಇರಬೇಕು, ರಫ್ ಆಗಿರಬಾರದು": ಶಿವರಾಜಕುಮಾರ್

ಶಿವಮೊಗ್ಗ: 'ರಾಜಕೀಯಕ್ಕೆ ಸಾಫ್ಟ್ ಆಗಿರಬೇಕು, ರಫ್ ಆಗಿರಬಾರದು' ಎಂದು ನಟ ಶಿವರಾಜ​ಕುಮಾರ್ ಹೇಳಿದ್ದಾರೆ. ಇಂದು ತಮ್ಮ ಪತ್ನಿ ಗೀತಾ ಜೊತೆ ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ, "ನಾನು ನಾಮಪತ್ರ‌ ಸಲ್ಲಿಸಲು ಎರಡನೇ ಬಾರಿ ಬಂದಿದ್ದೇನೆ.‌ ವಾತಾರಣ ಚೆನ್ನಾಗಿದೆ. ಗೀತಾ ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಜನರಿಗೆ ಬದಲಾವಣೆ ಬೇಕು ಅನಿಸಿದೆ. ನಾವು ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದೇವೆ ಎಂದರು.

"ಎಲ್ಲಿ ಹೋದರು ನಮಗೆ ಪಾಸಿಟಿವ್ ಸಪೋರ್ಟ್​ ಬರುತ್ತಿದೆ. ಅವರ ಸಂತೋಷಕ್ಕೆ ನಾನು ಹಾಡು ಹಾಡುತ್ತೇನೆ. ಅಲ್ಲಿ ಯಾವ ವಯಸ್ಸಿನವರಿಗೆ ಹೇಗೆ ಮಾತನಾಡಬೇಕೋ ಹಾಗೆ ಮಾತನಾಡುತ್ತೇನೆ. ನಾನು ನನ್ನ ಪತ್ನಿಗೆ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಗೀತಾ ಯಾವಾಗಾಲೂ ಸಾಫ್ಟ್, ರಾಜಕೀಯಕ್ಕೆ ರಫ್ ಆಗಿ ಇರಬಾರದು. ರಾಜಕೀಯಕ್ಕೆ ಸಾಫ್ಟ್ ಆಗಿರಬೇಕು. ಮಾತನಾಡುವ ಬದಲು ಕೆಲಸ ಮಾಡಬೇಕು. ಆ ಮೂಲಕ ನಮ್ಮ ಜವಾಬ್ದಾರಿ ತೋರಿಸಿಕೊಡಬೇಕು".

"ಮಾತನಾಡಿದರೆ ಸಾಲದು, ಮಾಡುವ ಕೆಲಸ ಜೋರಾಗಿ ಇರಬೇಕು. ಕೆಲಸ ಮಾಡುವ ಮನೋಭಾವ ಇರಬೇಕು. ನಾನು ಶೂಟಿಂಗ್​ ರದ್ದುಗೊಳಿಸಿ ಪ್ರಚಾರ ಮಾಡುತ್ತಿದ್ದೇನೆ. ನನಗೆ ರಾಜಕೀಯ ಗೊತ್ತಿಲ್ಲ‌. ನಾಯಕರು ಹೇಳಿದಂತೆ, ಅವರು ಕರೆದ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಎಲ್ಲಾ ಕಾಂಗ್ರೆಸ್​ ನಾಯಕರ ಸಾಥ್ ಚೆನ್ನಾಗಿದೆ. ಪ್ರಚಾರದ ಕಾರ್ಯದ ಅನುಭವ ಚೆನ್ನಾಗಿ ಆಗುತ್ತಿದೆ. ಒಳ್ಳೆಯ ಬದಲಾವಣೆ ಬರಬೇಕಿದೆ. ಬಿಸಿನಲ್ಲಿ ನನಗೆ ಸೆಕೆ ಅನ್ನಿಸುತ್ತಿಲ್ಲ. ಜನರ ನಡುವೆ ಸೆಕೆ ಅನ್ನಿಸುತ್ತಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡದೆ, ನಾನು ಪ್ರಚಾರಕ್ಕೆ ಬಂದಿದ್ದೇನೆ ಅಷ್ಟೆ" ಎಂದರು.

ಗ್ಯಾರಂಟಿ ಯೋಜನೆಗಳು ನನ್ನ ಕೈ ಹಿಡಿಯಲಿವೆ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ತಮ್ಮ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಗೀತಾ ಶಿವರಾಜಕುಮಾರ್​, "ಗ್ಯಾರಂಟಿ ಯೋಜನೆಗಳು ಈ ಚುನಾವಣೆಯಲ್ಲಿ ನನ್ನ ಕೈ ಹಿಡಿಯಲಿವೆ. ನಮ್ಮ ಗ್ಯಾರಂಟಿಗಳು ಅನುಷ್ಠಾನಗೊಂಡಿವೆ. ಇದರಿಂದ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಹೆಚ್ಚುತ್ತಿದೆ. ನಮ್ಮ ಪಕ್ಷದ ಗ್ಯಾರಂಟಿಯಿಂದ ಜನರಿಗೆ ಸಹಾಯ ಆಗಿದೆ" ಎಂದರು.

"ನಮ್ಮ ತಂದೆಯವರು ನೀಡಿದ ಅನೇಕ ಕಾರ್ಯಕ್ರಮಗಳು ಸಹಾಯಕವಾಗಿದ್ದವು. ಪಂಚಾಯತ್ ಮಟ್ಟದಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಹೋಗುತ್ತಾರೆ. ಪತಿ ಶಿವರಾಜ​ಕುಮಾರ್ ನಮ್ಮ ಜೊತೆ ಪ್ರಚಾರಕ್ಕೆ ಬಂದಿರುವುದು ಶಕ್ತಿ ಹೆಚ್ಚಿಸಿದೆ. ನಮ್ಮ ನಾಯಕರು, ಮುಖಂಡರು ನಮ್ಮ ಜೊತೆ ಇದ್ದಾರೆ" ಎಂದರು.

ಇದನ್ನೂ ಓದಿ: ಧಾರವಾಡ ಕ್ಷೇತ್ರದಲ್ಲಿ ಜನ ಜೋಶಿ ಪರವಾಗಿದ್ದಾರೆ, ದಿಂಗಾಲೇಶ್ವರ ಶ್ರೀ ದುಸ್ಸಾಹಸಕ್ಕೆ ಮುಂದಾಗಬಾರದು: ಬಿ ಎಸ್ ಯಡಿಯೂರಪ್ಪ - Former CM B S Yediyurappa

Last Updated :Apr 15, 2024, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.