ವೇಗದಲ್ಲಿ ಬಂದು ಪಲ್ಟಿಯಾಗಿ ಟ್ರಾನ್ಸ್‌ಫಾರ್ಮರ್​ ಮೇಲೆ ಹತ್ತಿದ ಬೈಕ್.. ಸವಾರ ಪಾರು- ವಿಡಿಯೋ

By

Published : Jun 4, 2022, 7:39 PM IST

thumbnail

ಇಡುಕ್ಕಿ (ಕೇರಳ): ಕೇರಳದಲ್ಲಿ ಸಿನಿಮೀಯ ರೀತಿಯಲ್ಲಿ ಬೈಕ್​ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಬೈಕ್​ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದು ನೇರವಾಗಿ ವಿದ್ಯುತ್​ ಟ್ರಾನ್ಸ್‌ಫಾರ್ಮರ್‌ ಮೇಲೆ ಹೋಗಿ ಕುಳಿತಿದೆ. ಅದೃಷ್ಟವಶಾತ್​​ ಅಥವಾ ಸವಾರನ ಆಯಸ್ಸು ಗಟ್ಟಿ ಇರುವ ಕಾರಣಕ್ಕೋ ಬೈಕ್​ ಮೇಲಕ್ಕೆ ಹಾರುವಾಗ ಆತ ಬೈಕ್​ನೊಂದಿಗೆ ಹೋಗದೆ ಕೆಳಗಡೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಡುಕ್ಕಿಯ ಕಟ್ಟಪ್ಪನ ವೆಲ್ಲಯಂಕುಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಟ್ರಾನ್ಸ್‌ಫಾರ್ಮರ್​ನಿಂದ ಬೈಕ್​ ಹೊರತೆಗೆಯಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.