ಗ್ರಾಮದ ಮಧ್ಯೆ ಬಿಂದಾಸ್ ವಾಕ್ ಮಾಡಿದ ಒಂಟಿ ಸಲಗ: ವಿಡಿಯೋ - elephant moment

By ETV Bharat Karnataka Team

Published : May 22, 2024, 10:37 PM IST

thumbnail
ಗ್ರಾಮದ ಮಧ್ಯೆ ಬಿಂದಾಸ್ ವಾಕ್ ಮಾಡಿದ ಒಂಟಿ ಸಲಗ (Etv Bharat)

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ಉಪಟಳ ಪ್ರಾರಂಭವಾಗಿದೆ. ಇಷ್ಟು ದಿನಗಳವರೆಗೆ ಕಾಫಿ ಎಸ್ಟೇಟ್ ಹಾಗೂ ತೋಟಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕಾಡಾನೆಗಳು, ಈಗ ಏಕಾಏಕಿ ನಗರದ ಪ್ರಮುಖ ರಸ್ತೆಗಳಿಗೆ ಬಂದು ವಾಕ್ ಮಾಡುವುದಕ್ಕೆ ಪ್ರಾರಂಭಿಸಿವೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಆಜಾದ್ ನಗರ ಹಾಗೂ ತರುವೆಯಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗ ರೌಂಡ್ಸ್ ಹಾಕಿದೆ. ಕಾಡಾನೆ ಓಡಾಟ ನೋಡಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಸಮೀಪವಿರುವ ಗ್ರಾಮದಲ್ಲಿ ಬಿಂದಾಸ್ ವಾಕ್ ಮಾಡಿದೆ.

ಚಾರ್ಮಾಡಿ ಘಾಟ್ ಅಥವಾ ಬೇರೆಡೆಯಿಂದ ಕಾಡಾನೆ ಆಗಮಿಸಿರುವ ಸಾಧ್ಯತೆ ಇದ್ದು, ತರುವೆಯಲ್ಲಿ ಮನೆ ಸಮೀಪವೇ ಕಾಡಾನೆ ಸಂಚಾರ ನಡೆಸಿದೆ. ಸಿಸಿಟಿವಿಯಲ್ಲಿ ಒಂಟಿ ಸಲಗ ರೌಂಡ್ಸ್ ಸೆರೆಯಾಗಿದೆ. ಗ್ರಾಮಗಳ ಸಮೀಪ ಇರುವ ಕಾಡಾನೆ ಓಡಿಸುವಂತೆ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಸ್ಥಳೀಯರು ಮನವಿ ಮಾಡಿದ್ದಾರೆ. 

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ನಿತ್ಯ ಇದೇ ರೀತಿ ಒಂಟಿ ಸಲಗದ ಹಾವಳಿ ಮುಂದುವರೆದಿದ್ದು, ಸಾರ್ವಜನಿಕರು ಜೀವ ಭಯದಲ್ಲೇ ಬದುಕುವಂತಾಗಿದೆ.

ಇದನ್ನೂ ಓದಿ : ರಸ್ತೆ ಮಧ್ಯೆ ನಿಂತ ಕಾಡಾನೆ; ಹೆದರಿ ಪ್ರಪಾತಕ್ಕೆ ವಾಹನ ಇಳಿಸಿದ ಚಾಲಕ - Bolero Jeep Fall Into Precipice

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.